Friday, July 30, 2010

ಕನ್ನಡ ಜಾಗೃತಿಗೊಂದು ಪ್ರಯತ್ನ- ಅಂಗಡಿಯಲ್ಲಿ ಕನ್ನಡ ನುಡಿ.

ಇಂದು ಮಧ್ಯಾನ ಊಟ ಮುಗಿಸಿ ಬರುತ್ತಿರುವಾಗ ನನ್ನ ಮೇನೆಜರ್ "ಶ್ರೀಧರ ಇಲ್ಲಿ ಬನ್ರಿ , ನಿಮ್ಗೆನೋ ಕೊಡ್ಬೇಕು " ಅಂದ್ರು ..
ಅರೆ ಇದೆನಪ್ಪ .. ಎನಾದರು ಒಳ್ಳೆ ಸುದ್ದಿ ಇದ್ಯ ಅಂತ ಹೋದ್ರೆ ಒಂದು ಪುಸ್ತಕ ಕೈಗೆ ಹಿಡ್ಸಿದ್ರು ..
ಬರಿ ಪುಸ್ತಕಾನಾ ಅಂತ ನಿರಾಸೆ ಆಗಿಲ್ಲ ಯಾಕೆ ಗೊತ್ತ ಅವರು ಕೊಟ್ಟಿದ್ದು ಒಂದು ಕನ್ನಡದ ಪುಸ್ತಕ.

ಕೆಲಸದ ಮಧ್ಯೆಯೆ ಬಿಡುವು ಮಾಡಿಕೊಂಡು ಪುಸ್ಕವನ್ನು ಓದಿ ಮುಗಿಸಿದೆ ..ಇಷ್ಟವಾಯ್ತು .. ಎಲ್ಲರಿಗೂ ತಿಳಿಸೋಣ ಅನ್ನಿಸ್ತು ..
ಕೆಲವರಿಗೆ ಇದರ ಬಗ್ಗೆ ಈಗಾಗಲೇ ತಿಳಿದಿರಬಹುದು ..

ಪುಸ್ತಕ ವಿವರಣೆ ಹೀಗಿದೆ ..

ಹೆಸರು: ಅಂಗಡಿಯಲ್ಲಿ ಕನ್ನಡ ನುಡಿ ..
ಬರೆದವರು: ರೋಹಿತ್ ಬಿ ಆರ್
ಪ್ರಕಾಶನ ಮತ್ತು ಹಕ್ಕುಗಳು: ಬನವಾಸಿ ಬಳಗ , ಟಾಟಾ ಸಿಲ್ಕ್ ಫಾರ್ಮ್ , ಬೆಂಗಳೂರು.
ಪುಟಗಳು:೫೬

ಹೇಸರೆ ಹೆಳುವಂತೆ ಈ ಪುಸ್ತಕ ಕನ್ನಡ ನಾಡಿನಲ್ಲಿ ಕನ್ನಡದ ಸ್ಥಿತಿಗತಿಗಳ ಬಗ್ಗೆ ತಿಳಿಸಿತ್ತದೆ .. ಜೊತೆಗೆ ಪರಿಹಾರವು ಇದೆ ..

ಮುನ್ನುಡಿಯಲ್ಲಿ ಹೇಳಿರುವಂತೆ ಕನ್ನಡಿಗರಲ್ಲಿ ತುರ್ತಾಗಿ ಜಾಗೃತಿ ಆಗಬೇಕಾದ ಕ್ಷೇತ್ರಗಳತ್ತ ಕಣ್ಣು ಹಾಯಿಸಿದರೆ ಕಾಣಿಸುತ್ತಿರುವುದು ಮಾರುಕಟ್ಟೆಯಲ್ಲಿ ಗ್ರಾಹಕರ ಸೇವೆಯಲ್ಲಿನ ಕನ್ನಡದ ಬಳಕೆಯ ಕುಂದುಕೊರತೆಗಳು.

ಇದನ್ನು ನಿವಾರಿಸುವ ನಿಟ್ಟಿನಲ್ಲಿ ಈ ಹೊತ್ತಿಗೆ ಸಹಾಯವಾಣಿಯಾಗಿ ಕೆಲಸ ಮಾಡುತ್ತದೆ. ಇಲ್ಲಿ ಹೊತ್ತಿಗೆಯಲ್ಲಿ ಅದಿಲ್ಲ , ಇದಿಲ್ಲ ಎಂದು ಗೋಳಿಡುವ ವಿಚಾರಗಳು ಇಲ್ಲ .. ಇವರು ಹೇಳುವುದು ಎನೇಂದರೆ ನಮ್ಮ ನಾಡಿನಲ್ಲೇ ನಮ್ಮ ಹಕ್ಕುಗಳಿಂದ ಕನಡಿಗರನ್ನು ಹೇಗೆ ವಂಚಿಸಲಾಗಿತ್ತಿದೆ ಎಂದು. ಕೆಲವು ವ್ಯಂಗ ಚಿತ್ರಗಳ ಮೂಲಕ , ಲಘು ಬರಹಗಳ ಮೂಲಕ ವಿಷಯವನ್ನು ಪ್ರಸ್ತುತ ಪಡಿಸಿದ್ದಾರೆ.
ನಮ್ಮ ನಾಡಿನಲ್ಲಿ ಅದು ಸಿಗುತ್ತಿಲ್ಲ , ಇದು ಸಿಗುತ್ತಿಲ್ಲ ಎಂದು ಅಲವತ್ತು ಕೊಳ್ಳುವುದರ ಬದಲು ಮಾರುಕಟ್ಟೆಯಲ್ಲಿ , ನಮ್ಮ ದೈನಂದಿನ ವ್ಯವಹಾರದಲ್ಲಿ ಕನ್ನಡದ ಹಕ್ಕೊತ್ತಾಯಕ್ಕೆ ಮುಂದಾಗೋಣ ಎನ್ನುವುದು ಇಲ್ಲಿನ ಧ್ಯೇಯವಾಗಿದೆ.
ಎಲ್ಲವು ಕನ್ನಡವೇ ಆಗಬೇಕೆಂದಲ್ಲ .. ಮುಖ್ಯವಾಗಿ ತಿಳಿಸುತ್ತಿರುವುದು ಸಾಮಾನ್ಯವಾದ ವಿಷಯಗಳಲ್ಲಿ .. ವ್ಯವಹಾರದಲ್ಲಿ ಕನ್ನಡವಿರಲಿ ಎಂಬುದು ಈ ಹೊತ್ತಿಗೆಯ ಉದ್ದೇಶವಾಗಿದೆ ..


ಕೆಲವು ಉದಾಹರಣೆಗಳು :
-- ಸೂಚನೆ ಹಾಗು ಸುರಕ್ಷತಾ ಮಾಹಿತಿಗಳು ಕನ್ನಡದಲ್ಲಿರಲಿ .. [ ಆಸ್ಪತ್ರೆ ಸೂಚೆನೆಗಳು , ತರೆವಾರಿ ದೈನಂದಿನ ಬಳಕೆಯ ವಸ್ತುಗಳು , ಅಡಿಗೆ ಅನಿಲ್ , ರೈಲ್ವೆ ಸೂಚನೆ ..ಸಾರಿಗೆ ಸೂಚನೆ.. ಹೀಗೆ ಹಲವು ಕಡೆ ಕನ್ನಡದ ಮಾಹಿತಿ ಸಾಮಾನ್ಯರಿಗೆ ಅಗತ್ಯ]
-- ಸಂಚಾರಿ ವ್ಯವಸ್ಥೆಯಲ್ಲಿ , ದೊಡ್ಡ ದಿನಸಿ ಸಂಕೀರ್ಣಗಳಲ್ಲಿ ದಿನಸಿ ಪದಾರ್ಥಗಳ ಹೆಸರು .. ಮಾಲ್ ಗಳಲ್ಲಿ ..ಚಿತ್ರ ಮಂದಿರದಲ್ಲಿ ಹೀಗೆ ಅನೇಕ ಕಡೆ ಕನ್ನಡದ ಅಗತ್ಯವಿದೆ ಎಂಬುದನ್ನ ಇಲ್ಲಿ ಚೆನ್ನಾಗಿ ವಿವರಿಸಲಾಗಿದೆ ..

ಕರ್ನಾಟಕದಲ್ಲಿ ಬರಿ ಕನ್ನಡಬಲ್ಲ ಒಬ್ಬ ಸಾಮಾನ್ಯ ಕನ್ನಡಿಗನೂ ವ್ಯಾಪಾರ ವಹಿವಾಟು ಸಲೀಸಾಗಿ ಪೂರೈಸಿಕೊಳ್ಳುವ ವ್ಯವಸ್ಥೆ ನಿರ್ಮಾಣವಾಗಬೇಕು ಎಂದು ಹೇಳಲಾಗಿದೆ ..

ಪುಸ್ತಕದ ಕೊನೆಯಲ್ಲಿ ಬರೆದಿರುವ ಆಶಯ ವಾಖ್ಯ ಇಷ್ಟವಾಯ್ತು ,,

" ಈ ಹೊತ್ತಿಗೆ ಬದಲಾವಣೆಯೆಡೆಗೆ ಹೆಜ್ಜೆಗಳನ್ನಿಡಲು ದೀವಿಗೆಯಾಗಲಿ ಎನ್ನುವುದು ಬಳಗದ ಆಶಯ.
ಓದಿರಿ , ಜಾರಿಗೆ ತನ್ನಿ ,ಬದಲಾವಣೆಗೆ ಕಾರಣರಾಗಿ "

ನನ್ನ ಅನಿಸಿಕೆ ಎನೆಂದರೆ .. ನಿಜ ಹಲವು ಕಡೆ ಕನ್ನಡದ ಪರಿಸ್ಥಿತಿ ಚಿಂತಾಜನಕವಾಗಿದೆ ಹಾಗಂತ ಎಲ್ಲವನ್ನು ಬದಲಾಯಿಸುವುದು ಸಾಧ್ಯವಿಲ್ಲ ... ಪುಸ್ತಕದಲ್ಲಿ ಹೇಳಿರುವ ಎಲ್ಲ ವಿಷಯ , ಸ್ಥಳಗಳಲ್ಲಿ ಅಲ್ಲವಾದರು ..ಕೆಲವು ಕಡೆ ಕನ್ನಡ ಜಾಗೃತಿಯನ್ನು ಮೂಡುಸುವುದು ಅವಶ್ಯವಾಗಿದೆ. ಎಲ್ಲರೂ ಧ್ವನಿಗೂಡಿಸಿದರೆ ಇದು ಖಂಡಿತ ಸಾಧ್ಯ.

ಕೈಗೂಡಿಸ ಬಯಸುವುದಾದರೆ ಇಲ್ಲಿಗೆ ಬರೆಯಿರಿ ..
" jaagruta_graahakaru-subscribe@googlegroups.com "

ಹಲವರು ದೇಣಿಗೆ ನೀಡುವ ಮೂಲಕ ಹೊತ್ತಿಗೆ ಅಚ್ಚು ಹಾಕಿಸಲು ನೆರವಾಗಿದ್ದಾರೆ ಎಂದು ಬಳಗದ ಅಧ್ಯಕ್ಷ ಶ್ರೀ ಆನಂದ .ಜಿ ಅವರು ಮುನ್ನುಡಿಯಲ್ಲಿ ತಿಳಿಸಿದ್ದಾರೆ.[ anand@banavaasibalaga.org]

ಈ ಪುಸ್ತಕ , ಪುಸ್ತಕ ಮಳಿಗೆಗಳಲ್ಲಿ ಸಿಗವುದು ಇಲ್ಲವೋ ಎಂಬ ಮಾಹಿತಿ ಖಚಿತವಿಲ್ಲ ..
ಹೆಚ್ಚಿನ ಮಾಹಿತಿಗೆ ಈ ಕೆಳಗೆ ಸಂಪರ್ಕಿಸ ಬಹುದೇನೊ

www.banavaasibalaga.org

kacheri@banavasibalaga.org

ಬಳಗದ ಬ್ಲೋಗ್
enguru.blogspot.com
karnatique.blogspot.com

ಮಾಹಿತಿಗಾಗಿ : http://enguru.blogspot.com/2010/05/angadiyalli-kannada-nudi.html

ಕನ್ನಡದ ಏಳಿಗೆಗಾಗಿ ನನ್ನದೂ ಒಂದು ಚಿಕ್ಕ ಪ್ರಯತ್ನವಷ್ಟೇ ... ಪುಸ್ತಕವನ್ನು ಪಡೆದು ಓದಿ .. ನಾವು ಸಹಕರಿಸೋಣ ..ಎನಂತೀರಿ ...

18 comments:

sunaath said...

ಕನ್ನಡ ನಾಡಿನಲ್ಲಿಯೇ ಕನ್ನಡವು ಅನಾಥವಾದಂತಹ ಇಂದಿನ ದಿನಗಳಲ್ಲಿ, ಕನ್ನಡದ ಬಳಕೆಗೆ ಪ್ರಯತ್ನ ಮಾಡುತ್ತಿರುವ ಎಲ್ಲರಿಗೂ ಶುಭಾಶಯಗಳು. ಮಾಹಿತಿ ನೀಡಿದ ನಿಮಗೆ ವಂದನೆಗಳು.

shridhar said...

ಕಾಕಾ,
ಪ್ರಕಟಿಸುತ್ತಿರುವಂತೆಯೆ ಓದಿ ಪ್ರತಿಕ್ರಿಯಿಸಿದ ತಮಗೆ ಧನ್ಯವಾದಗಳು.
ನಮ್ಮ ನಾಡಿನಲ್ಲಿ ನಾವಿಗ ಪರಕೀಯರಂತಾಗಿದ್ದೇವೆ .. ಎಚ್ಚರಗೊಳ್ಳುವುದು ಅವಶ್ಯವಾಗಿದೆ ..

ಚುಕ್ಕಿಚಿತ್ತಾರ said...

ಉತ್ತಮ ಲೇಖನದ ಜೊತೆಗೆ ಮಾಹಿತಿಯನ್ನೂ ಕೊಟ್ಟಿದ್ದೀರಿ..
ಧನ್ಯವಾದಗಳು..

ದಿನಕರ ಮೊಗೇರ.. said...

ಧನ್ಯವಾದ ನಿಮ್ಮ ಮಾಹಿತಿಗೆ..... ಎಲ್ಲಾ ಸಲಹೆಗಳೂ ಅಳವಡಿಸಿಕೊಳ್ಳುವಾ ಹಾಗಿದೆ.....

shivu.k said...

ಪುಸ್ತಕಕ್ಕಾಗಿ ನಾನು ಈಗಲೇ ಅವರಿಗೆಲ್ಲಾ ಮೇಲ್ ಮಾಡುತ್ತೇನೆ.

ಇಂಥವಕ್ಕೆ ನಮ್ಮ ಪ್ರೋತ್ಸಾಹ ಇದ್ದೇ ಇರುತ್ತದೆ..ನಾನು ಪುಸ್ತಕ ಓದುತ್ತೇನೆ.

Snow White said...

lekhana chennagide sir..dhanyavadagalu hanchikondidakke :)

ಮನಮುಕ್ತಾ said...

ಮಾಹಿತಿ ಹಾಗು ಬರಹ ಚೆನ್ನಾಗಿದೆ ಧನ್ಯವಾದಗಳು.

ಅನಂತರಾಜ್ said...

ಕನ್ನಡ ಭಾಷೆಯ ಬಳಕೆ ಅಪರೂಪವಾಗಿರುವ ಇ೦ದಿನ ದಿನಗಳಲ್ಲಿ ಆಸಕ್ತರಿಗೆ ಉತ್ತಮ ಮಾಹಿತಿ ದೊರಕಿಸುವಲ್ಲಿ ನೆರವಾಗುವ ನಿಮ್ಮ ಪ್ರಯತ್ನ ಶ್ಲಾಘನೀಯ. ಈ ನಿಟ್ಟಿನಲ್ಲಿ ನಮ್ಮ ಸಹಕಾರ ಯಾವತ್ತೂ ಇದೆ.

ಶುಭಾಶಯಗಳು
ಅನ೦ತ್

shridhar said...

ಪ್ರತಿಕ್ರಿಯಿಸಿ ಪ್ರೋತ್ಸಾಹಿಸುತ್ತಿರುವ ಎಲ್ಲರಿಗೂ ಧನ್ಯವಾದಗಳು.

shridhar said...

ಹೆಚ್ಚು ಹೆಚ್ಚು ಕನ್ನಡ ಪುಸ್ತಕಗಳನ್ನು ಓದೋಣ ,,,, ಅವಕಾಶ ಇದ್ದಲ್ಲೆಲ್ಲ ಕನ್ನಡದ ಬಳಕೆ ಮಾಡೋಣ ..

ವಿ.ಆರ್.ಭಟ್ said...

ಬಹಳ ಸಂತೋಷವಾಯ್ತು ಶ್ರೀಧರ್, ಕೆಲವು ಬಸ್ಸುಗಳಲ್ಲಿ ಮತ್ತು ಆಟೋ ಗಳಲ್ಲಿ ಕೆಲವು ಚಾಲಕರು ಕನ್ನಡ ಪುಸ್ತಕಗಳನ್ನಿಟ್ಟು ಆದರ್ಶ ಮೆರೆಯುತ್ತಿದ್ದಾರೆ, ತಮ್ಮ ಲೇಖನ ಸಕಾಲಿಕ, ಧನ್ಯವಾದಗಳು

prabhamani nagaraja said...

'ನಾನು' ಸಕಾರಾತ್ಮಕವಾಗಿ ಬದಲಾದರೆ ಒ೦ದು ಮೌಲ್ಯಯುತ ಸಮಾಜವೇ ನಿರ್ಮಾಣವಾಗುತ್ತದೆ. ಈ ನಿಟ್ಟಿನಲ್ಲಿ 'ಬದಲಾವಣೆಗೆ ಕಾರಣರಾಗಿ' ಎನ್ನುವುದು ಅರ್ಥವತ್ತಾಗಿದೆ. ಕನ್ನಡವನ್ನು ಉಳಿಸಿ ಬೆಳೆಸುವಲ್ಲಿ ಎಲ್ಲರೂ ಕೈ ಜೋಡಿಸೋಣ. ನಿಮಗೆ ಸಿಕ್ಕ ಉತ್ತಮ ಪುಸ್ತಕದ ಮಾಹಿತಿಯನ್ನು ಎಲ್ಲರೊಡನೆ ಹ೦ಚಿಕೊ೦ಡಿದ್ದಕ್ಕೆ ಧನ್ಯವಾದಗಳು.

- ಕತ್ತಲೆ ಮನೆ... said...

ಹೌದು ಕೆಲವು ಕಡೆ ಕನ್ನಡ ತುಂಬಾ ಅವಶ್ಯವಿದೆ..
ನಾನು ನಿಮ್ಮೊಂದಿಗೆ ಕೈಜೋಡಿಸುತ್ತೇನೆ..

PARAANJAPE K.N. said...

ಉತ್ತಮ ಮಾಹಿತಿ

ಜಲನಯನ said...

ಶ್ರೀಧರ್ ಒಳ್ಲೆಯ ಮಾಹಿತಿ...ಹೌದು ನಿತ್ಯದ ದಿಶಾನಿರ್ದೇಶನಗಳು ಕನ್ನಡದಲ್ಲಿದ್ದರೆ ಎಷ್ಟು ಚನ್ನ...ಇಲ್ಲಿ ಅರಬಿಗಳು ತಮ್ಮ ಎಲ್ಲ ಕಚೇರಿ ಕೆಲಸ ಅರಬಿ ಭಾಷೆಯಲ್ಲೇ ಮಾಡುತ್ತಾರೆ..ಹಾಗಾಗಿ ಅರಬಿ ಬೆಳವಣಿಗೆಯೂ ಅನಿವಾರ್ಯವಾಗುತ್ತದೆ..ನಮ್ಮವರು ಕನ್ನಡದ ಬೆಳವಣಿಯನ್ನು ಕನ್ನಡ ಬಳಸುವ ಮೂಲಕ ಮಾಡಬೇಕೇ ಹೊರತು..ಅದೂ ಇಅರಲಿ ಎನ್ನುವ ಧೋರಣೆಯಿಂದಲ್ಲ....ನಮ್ಮ ಸಂಕಷ್ಟವೆಂದರೆ ಹಿಂದಿಯನ್ನೂ ನಾವು ಬೆಳೆಸಿಲ್ಲ ಹಾಗಾಗಿ ಮೂರು ಭಾಷೆಗಳಿಗೆ ಜೋತು ಬಿದ್ದು ಯಾವುದರಲ್ಲಿಯೂ ಪೂರ್ಣರಾಗಿ ಉಳಿದಿಲ್ಲ.

ಜಲನಯನ said...
This comment has been removed by the author.
shridhar said...

ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು ....

ಸೀತಾರಾಮ. ಕೆ. / SITARAM.K said...

mahitige dhanyavadagalu.