Thursday, August 26, 2010

ಅಪರೂಪದ ಫೋಟೊ

ಇದೊಂದು ಮಿಂಚಂಚೆಯಲ್ಲಿ ಬಂದ ಫೋಟೊ .. ಮೂಲ ಛಾಯಚಿತ್ರಕಾರ ಯಾರು ಎಂದು ತಿಳಿಯದು .. ಆದ್ದರಿಂದ all credit goes to original photographer ... ನಾನು ಕೇವಲ ಇದನ್ನು ಎಲ್ಲರೊಡನೆ ಹಂಚಿಕೂಳ್ಳ ಬೇಕೆನಿಸಿತು ಅದಿಕ್ಕೆ ಬ್ಲೊಗನಲ್ಲಿ ಹಾಕಿದ್ದೇನೆ ..ಚಿತ್ರಕೃಪೆ :ಮಿಂಚಂಚೆ .. ಅಂತರ್ಜಾಲದಲ್ಲೂ ಸಹ ಇದೆ .. [ click on the photo to see it in large scale ]


ಇದರಲ್ಲಿ ಎಲ್ಲರನ್ನೂ ನಾನು ಗುರುತಿಸಲು ಆಗಲಿಲ್ಲ .. ಬಲ್ಲವರು ತಿಳಿಸುವೀರಾ ...

ಎಡದಿಂದ ಬಲ :

೧: ಶ್ರೀ ಮಾಸ್ತಿ ವೆಂಕಟೇಶ ಅಯ್ಯಂಗಾರ
೨. ಶ್ರೀ ವಿ ಕೃ ಗೋಕಾಕ್ ಅಥವಾ ಶ್ರೀ ಡಿ.ವಿ.ಗುಂಡಪ್ಪ
೩. ಶ್ರೀ ಕು.ವೆಂ.ಪು
೪. ಶ್ರೀ
೫. ಶ್ರೀ ಶಿವರಾಮ ಕಾರಂತ
೬. ಶ್ರೀ
೭. ಶ್ರೀ ಜಿ.ಪಿ.ರಾಜರತ್ನಮ್[ ಈ ಛಾಯಾಚಿತ್ರದ ಹೆಚ್ಚಿನ ಮಾಹಿತಿಗಾಗಿ ಸುಶ್ರುತನ ಕಮೆಂಟ್ಸ ನೋಡಿ ...]

Monday, August 23, 2010

ಭೇಟಿ

ನಿನ್ನೆಯ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಬಂದಂತಹ ಎಲ್ಲರೂ ತಮ್ಮ ಬ್ಲೊಗನಲ್ಲಿ ತಮ್ಮ ಅನುಭವಗಳನ್ನು ಬರೆದೆ ಬರೆಯುತ್ತಾರೆ.
ನಾನೇನು ಬೇರೆ ವಿಶೇಷವಾಗಿ ಬರೆಯುತ್ತಿಲ್ಲ ಬಿಡಿ. ಅದೆ ಸುದ್ದಿ ಆದರೆ ಅಪೂರ್ಣ , ಯಾಕಂತೀರ ... ಕಾರಣಾಂತರಗಳಿಂದ ನಾನು ಕಾರ್ಯಕ್ರಮವನ್ನು ಪೂರ್ಣ ನೋಡಲಾಗಲಿಲ್ಲ. ಮನೆಗೆ ನೆಂಟರು ಬಂದಿದ್ದರಿಂದ ಮಡದಿಯ ಕರೆಗೆ ಓಗೊಟ್ಟು ಮಧ್ಯದಲ್ಲೆ ಹೊರಡಬೇಕಾಯ್ತು. ಎಷ್ಟೊಂದು ಕಾರ್ಯಕ್ರಮಗಳು , ಮನರಂಜನೆಗಳು ..ತಪ್ಪಿದವೋ ನಾನರಿಯೆ .. ಇನ್ಯಾರಾದರು ತಮ್ಮ ಬ್ಲೊಗನಲ್ಲಿ ಸಂಪೂರ್ಣ ವರದಿಯನ್ನು ಹಾಕಿದರೆ ಅದನ್ನು ಓದಿ ಬೇಸರಿಸುವ ಸರದಿ ನನ್ನದು. ಆದರೂ ಅಲ್ಲಿ ಇದ್ದಷ್ಟೇ ಸಮಯ ಮಾತ್ರ ಮರೆಯಲಸಾಧ್ಯ.

ಕನ್ನಡ ಭವನ ಹೊಕ್ಕುತ್ತಿದ್ದಂತೆ ಮೊದಲಿಗೆ ಸಿಕ್ಕಿದವರು ಪ್ರಕಾಶಣ್ಣ. ಅವರೇ ನನ್ನನ್ನು ಕರೆದೊಯ್ದು ಸೀತಾರಮ ಸರ್ ಮತ್ತೆ ಸುಮನಾ ಮೇಡಮ್ ಪರಿಚಯಮಾಡಿ ಕೊಟ್ಟರು. ಅಷ್ಟರಲ್ಲೆ ಶಿವಪ್ರಕಾಶ ಕೈ ಮಿಲಾಯಿಸಿ ತಮ್ಮನ್ನು ಪರಿಚಯಿಸಿ ಕೊಂಡರು.ಹಾಗೆಯೆ ನಂಜುಂಡ , ಚೇತನಾ ಭಟ್ಟ ಅವರ ಪರಿಚಯವಾಯಿತು. ಪುಸ್ತಕ ಬಿಡುಗಡೆಯ ಈ ಸಮಯದಲ್ಲೇ ತಾವು ಭಾರತಕ್ಕೆ ಬಂದಿರುವುದು ತುಂಬ ಖುಷಿಯಾಗ್ತ ಇದೆ, ಎಲ್ಲರನ್ನು ಬೇಟಿ ಮಾಡುವ ಅವಕಾಶ ಸಿಕ್ತು ಅಂತ ನಂಜುಂಡರವರು ಹೇಳಿದರು.

ಆಮೇಲೆ ಒಂದಿಷ್ಟು ಹರೆಟೆ .. ಫೊಟೊ .. ಬಿಸಿ ಬಿಸಿ ಕಾಪಿ ...

ಅತ್ತಿತ್ತ ಸುತ್ತುತ್ತ ಪರಿಚಯದ ಮುಖಗಳನ್ನು ಹುಡುಕುತ್ತಿದ್ದಾಗ ಕಂಡಿದ್ದು ಪ್ರಗತಿ ಹೆಗಡೆ ಮತ್ತಿ ದಿಲೀಪ ಹೆಗಡೆ [ ನವ ದಂಪತಿಗಳು] ,ಮದುವೆಗೆ ಹೋಗಿರಲಿಲ್ಲ ಹಾಗಾಗಿ ಇಲ್ಲಿ ಬೇಟಿ ಮಾಡಿ ಶುಭ ಹಾರೈಸುವ ಸಂದರ್ಭ ಒದಗಿ ಬಂತು. ಇಷ್ಟೊತ್ತಾದರು ಕಾರ್ಯಕ್ರಮದ ಮುಖ್ಯ ಮುಖಗಳಾದ ಆಜಾದ ಸರ್ ಹಾಗೂ ಶಿವು ಸರ್ ಕಂಡು ಬರಲಿಲ್ಲ. ಛಲ ಬಿಡದೆ ಹುಡುಕಿ ಕೈ ಮಿಲಾಯಿಸಿ , ಶುಭಾಶಯಗಳನ್ನು ತಿಳಿಸಿ ಹೊರಬಂದರೆ ಎದುರಿಗೆ ಕಂಡಿದ್ದು ವಿ.ಆರ್ ಭಟ್ಟ ಸರ್ ..ಅವರೊಡನೆ ಸ್ವಲ್ಪ ಮಾತುಕಥೆ. ನಂತರ ನಾರಾಯಣ ಭಟ್ಟ , ನಾಗರಾಜ ,ನವೀನ , ಮಲ್ಲಿಕಾರ್ಜುನ ಮತ್ತೂ ಹಲವರ ಮುಖ ಬೇಟಿ ,ಪರಿಚಯವಾಯ್ತು.

ಕಾರ್ಯಕ್ರಮ ಪ್ರಾರಂಭವಾಗುವುದೆಂದು ಒಳಗೆ ಹೋದಾಗ ..ಮೂರ್ತಿ ಸರ್ ಮತ್ತು ನಾರಾಯಣ ಭಟ್ಟ ಅವರು ನನ್ನ ಪಕ್ಕದಲ್ಲೆ ಕುಳಿತರು. ಈ ಅವಕಾಶ ಬಿಡೋದೆ .. ನಾನೆ ಖುದ್ದಾಗಿ ಅವರನ್ನು ಮಾತನಾಡಿಸಿದೆ .. ಪರಿಚಯ ಹೇಳಿಕೊಂಡೆ.. ಮಾತನಾಡಿ ತುಂಬ ಖುಷಿಯಾಯ್ತು .. ಕೆಲವೊಂದು ಅನುಭವದ ಮಾತುಗಳನ್ನು ಹೇಳಿದರು. ಆಮೇಲೆ ದಿನಕರ ಮೊಗೇರ ಅವರನ್ನು ಬೇಟಿ ಮಾಡಲು ಮತ್ತೆ ಹೊರಗಡೆ ಹೋದೆವು. ಪತ್ನಿ ಸಮೇತರಾಗಿ ಆಗಮಿಸಿದ ದಿನಕರ ಅವರ ಬಳಿ ಸಾಗಿ ಕುಶಲೋಪಚರಿಗಳಾದ ಮೇಲೆ ನನ್ನ ಮತ್ತು ಭಟ್ಕಳದ ಬಾಂಧವ್ಯದ ನೆನಪುಗಳನ್ನು ಮಾತಾಡಿ ತಾಜಾ ಮಾಡಿಕೊಂಡೆ.

ಮತ್ತೆ ಒಳ ಬರುವಷ್ಟರಲ್ಲಿ ನಾವು ಮೊದಲು ಕುಳಿತ ಸ್ಥಳವನ್ನಾಗಲೇ ಬೇರೆಯವರು ಆಕ್ರಮಿಸಿದ್ದರು . ಸಭಾಂಗಣ ತುಂಬಿ ಹೋಗಿತ್ತು , ಜನಗಳು ಇನ್ನು ಬರುತ್ತಲೇ ಇದ್ದರು.ಅಲ್ಲೆ ಒಂದು ಸ್ಥಳ ಹುಡುಕಿ ಕುಳಿತೆ. ಎದುರಿಗೆ ಕಂಡಿದ್ದು ಸುಶ್ರುತ ಮತ್ತು ಗೌತಮ್ ..ಅವರನ್ನು ಮಾತನಾಡಿಸುವಷ್ಟರಲ್ಲಿ ಕಾರ್ಯಕ್ರಮ ಪ್ರಾರಂಭವಾಗಿತ್ತು ..ನನ್ನ ಕ್ಯಾಮರಾಕ್ಕೆ ಸ್ವಲ್ಪ ಕೆಲಸ ಕೊಡೋಣವೆಂದು ನಾನು ಸ್ಟೆಜ ಹತ್ತಿರ ಹೋದೆ .. ಅಲ್ಲಿ ಬಾಲು ಸರ್ ಮತ್ತು ಪ್ರವೀಣರವರ ಬೇಟಿ ಆಯಿತು.

ಒಂದೆರಡು ಫೊಟೊ ಕ್ಲಿಕ್ಕಿಸಿದೆ .. ವಾಣಿ ಕೂಗತೊಡಗಿತ್ತು ...ಮನೆಗೆ ಬರುವಂತೆ ಕರೆ ಬಂದಿತ್ತು ...ಇನ್ನು ಹಲವರನ್ನು ಬೇಟಿ ಮಾಡುವುದಿತ್ತು ... ಕಾರ್ಯಕ್ರಮವನ್ನು ಬಿಟ್ಟು ಮನೆಯ ಕಡೆ ಹೊರಟಿದ್ದೆ ... ಮುಂದಿನ ಬಾರಿ ಸ್ವಲ್ಪ ಸಮಯ ಇಟ್ಟು ಕೊಂಡು ಬಂದು ಎಲ್ಲರ ಪರಿಚಯ ಮಾಡಿಕೊಳ್ಳಬೇಕು.

ಹೊರಡುವ ಮುನ್ನ ಪುಸ್ತಕವನ್ನು ಕೊಳ್ಳುವುದನ್ನು ಮರೆಯಲಿಲ್ಲ. ಅಷ್ಟೆ ಅಲ್ಲ ಪ್ರವೀಣ ಅವರ ಸಹಾಯದಿಂದ ಲೇಖಕರ ಹಸ್ತಾಕ್ಷರ ಸಹ ಪಡೆದು ಕೊಂಡೆ ನಾನು ಹೊರ‍ಟಿದ್ದು.ಬಂದಿದ್ದಕ್ಕೆ ಇಷ್ಟಾದರು ಸಂತೋಷ ಪಡುವಂತಾಯಿತು.

ಫೊಟೊಗಳನ್ನು ಇನ್ನು ಕಂಪ್ಯೂಟರ್ ಗೆ ಟ್ರಾನ್ಸ್ಪರ ಮಾಡಲಾಗದ್ದರಿಂದ ಇಲ್ಲಿ ಹಾಕುತ್ತಿಲ್ಲ ,,ಸಾಧ್ಯವಾದಲ್ಲಿ ಇಂದು ಸಂಜೆಯೆ ಅಪ್ಲೋಡ್ ಮಾಡುತ್ತೇನೆ.