Wednesday, December 30, 2009

ಭಾಂಧವ್ಯ -- ೨

[ ಮದುವೆಯ ತಯಾರಿಯಲ್ಲಿ ಬ್ಲೊಗ ಕಡೆ ಲಕ್ಶ್ಯಕೊಡಲ್ಲಾಗಲಿಲ್ಲ. ಕ್ಷಮೆ ಇರಲಿ. ಭಾಂದವ್ಯ ಕಥೆಯ ಎರಡನೆ ಭಾಗವನ್ನು ಈಗ
ನಿಮ್ಮ ಮುಂದೆ ಇಟ್ಟಿದ್ದೇನೆ. ಬರೆಯುವಗ ಯಾಕೊ ಮೊದಲಿನ ಸತ್ವ ಇಲ್ಲದಂತೆ ಕಾಣುತ್ತಿದೆ. ಆದರು ನಿಮ್ಮ ಸ್ಪಂದನ, ಸಹಕಾರ ಮುಂಚಿನಂತೆ ಅಗತ್ಯ. ತಪ್ಪುಗಳನ್ನು ಸರಿ ಮಾಡುತ್ತಿರಿ ಅಲ್ವಾ :: ]

( ಭಾಂಧವ್ಯ-೧ --- ಓದಿ )


ನಾವಿಬ್ಬರು ಸೇರಿ ರೂಮ್ ಮಾಡಿ ಅದಾಗಲೆ ವರುಷ ಕಳೆದಿತ್ತು. ಇಬ್ಬರಲ್ಲು ಎಲ್ಲಿಲ್ಲದ ಹೊಂದಾಣಿಕೆ. ಸುಖ ದುಖಕ್ಕೆ ಆಗುವ ಮಿತ್ರರಾಗಿ ಬಿಟ್ಟಿದ್ದೆವು. ನನಗೊ ಒಂದು ಒಳ್ಳೆ ಮಿತ್ರ ಸಿಕ್ಕನಲ್ಲ ಎಂಬ ಸಂತಸ ಇತ್ತು . ಈ ಬಾರಿಯ ಜಾತ್ರೆಗೆ ಅವನನ್ನು ಊರಿಗೆ ಕರೆದೊಯ್ಯುವ ಆಲೋಚನೆ ಮಾಡಿದ್ದೆ . ಅವನಿಗೆ ಇನ್ನು ತಿಳಿಸಿರಲಿಲ್ಲ. ಸರ್ಪ್ರೈಸ್ ಕೋಡುವ ಎಂದು ಸುಮ್ಮನಿದ್ದೆ.
ಇತ್ತೀಚೆಗೆ ವಿಕ್ಕಿಯ ದಿನಚರ ಬದಲಾಗ ತೊಡಗಿತ್ತು .. ನಾನು ಕೆಲಸದ ಒತ್ತಡ ಇರಬಹುದು ಎಂದು ಸುಮ್ಮನಿದ್ದೆ . ಕೆಲವೊಮ್ಮೆ ಕುಡಿದು ಬರುತ್ತಿದ್ದ. ಆಗೆಲ್ಲ ನಾನು ಅವನಿಗೆ ಸ್ವಲ್ಪ ತಿಳಿಹೇಳಲು ಪ್ರಯತ್ನಿಸುತ್ತಿದ್ದೆ. ಹೇಳಿದಾಗ ಒಮ್ಮೆ ಆಯಿತು ಎಂದು ಸುಮ್ಮನಿರುತ್ತಿದ್ದ.ಆದರೆ ಕುಡಿಯಿವುದು ನಿಲ್ಲಿಸಿರಲಿಲ್ಲ. ನನಗೆ ಅವನು ಕುಡಿಯುವುದು ಇಷ್ಟವಿಲ್ಲವೆಂದಲ್ಲ ಯಾಕೆಂದರೆ ನಾನು ಒಮ್ಮೆ ಅವನ ಜೊತೆ ವಿಸ್ಕಿಯ ರುಚಿ ನೋಡಿದ್ದೆ. ಅದೇಕೊ ಇಷ್ಟವಾಗಿರಲಿಲ್ಲ. ಅವನಿಗೆ ಬೇಡವೆನ್ನಲು ನನಗೆ ಸಾಧ್ಯವಾಗಿರಲಿಲ್ಲ.ನಾನು ಮೊದಲು ಎಣಿಸಿದಂತೆ ಆತ ಶ್ರೀಮಂತ ಮನೆಯ ಹುಡುಗನಾಗಿರಲಿಲ್ಲ. ಮನೆಯ ಪರಿಸ್ತಿತಿ ಎಲ್ಲ ಮಧ್ಯಮವರ್ಗದ ಜನರಂತೆಯೆ ಇತ್ತು .ಇವ್ನಿಗೆ ಮಾತ್ರ ಸ್ವಲ್ಪ ಮಜ ಮಾಡುವ ಹಂಬಲ. ರಿಸೆಶನ ಎಂಬ ಭಯವಾಗಲೆ ಐಟಿಯಲ್ಲಿ ಶುರುವಾಗಿತ್ತು. ಅದಕ್ಕಾಗಿಯೆ ನಾನು ಅವನಿಗೆ ಅಷ್ಟೊಂದು ವ್ಯಯ ಮಾಡಬೇಡವೆಂದು ಹೇಳುತ್ತಿದ್ದೆ ಅಷ್ಟೆ. ನನ್ನ ಎದುರಿಗೆ ಆತ ಆಯಿತು ಎಂದು ಒಪ್ಪಿಕೊಳ್ಳುತ್ತಿದ್ದ ಆದರು ನಾನು ಹಾಗೆ ಹೇಳುವುದು ಇಷ್ಟವಾಗುವುದಿಲ್ಲ ಎಂದು ಅವನ ನಡತೆಯಿಂದಲೇ ಗೊತ್ತಾಗುತ್ತಿತ್ತು.ಅದಲ್ಲದೆ ಹಣವನ್ನು ಕೇಳತೊಡಗಿದ್ದ. ಪ್ರಾರಂಭದಲ್ಲಿ ಕೊಡುತ್ತಿದ್ದೆ. ಒಮ್ಮೊಮ್ಮೆ ಹಿಂದಿರಿಗಿಸಿತ್ತಿದ್ದ . ಆದರೆ ಪದೆ ಪದೆ ಕೇಳತೊಡಗಿದಾಗ ಇಲ್ಲವೆಂದು ಬೈದು ಬಿಟ್ಟಿದ್ದೆ. ಯಾಕೆ ಕೇಳುತ್ತಿರ ಬಹುದು ಎಂದು ಸಹ ನಾನು ಆಲೋಚನೆ ಮಾಡಿರಲಿಲ್ಲ.ಇತ್ತೀಚೆಗೆ ನಾನು ಸುಮ್ಮನಾಗಿ ಬಿಟ್ಟಿದ್ದೆ. ಹಾಗೆಂದು ಗೆಳೆತನದಲ್ಲಿ ಯಾವುದೇ ಬಿರುಕು ಬಂದಿರಲಿಲ್ಲ.
ಅವತ್ತು ಕಂಪನಿಯಂದ ರೂಮಿಗೆ ಬೇಗ ಬಂದಿದ್ದೆ .. ಸ್ವಲ್ಪ ತಲೆ ನೋವು , ಜ್ವರ ಬಂದ ಹಾಗೆ ಆಗಿತ್ತು .. ವಿಕ್ಕಿ ಇನ್ನು ಬಂದಿರಲಿಲ್ಲ.ಮಾತ್ರೆ ತಗೊಂಡು ನಿದ್ದೆ ಹೋಗಿದ್ದೆ.ಸ್ವಲ್ಪ ಸಮಯದ ನಂತರ ಏಕೊ ಎಚ್ಚರವಾಯಿತು , ಕಣ್ಣು ತೆರೆದರೆ ಮಬ್ಬುಗತ್ತಲೆ ..ಒಹ್ ಬಹಳ ಹೂತ್ತಾಗಿರಬೇಕು ಮಲಗಿ ..ಆಗಲೆ ಸಂಜೆಯಾಗಿ ಬಿಟ್ಟಿದೆ. ಊಟದ ತಯಾರಿ ಮಾಡಬೇಕು. ಇಷ್ಟೊತ್ತಾದರು ವಿಕ್ಕಿಯ ಸುಳಿವಿಲ್ಲ. ಸರಿ ಎನೋ ಒಂದು ಬೆಯಿಸಿದರಾಯ್ತು ಎಂದು ಅಡಿಗೆಮನೆಯತ್ತ ನಡಿದೆ. ಅಡಿಗೆ ಮನೆ ಪೂರ್ತಿ ಕೊಳಕಾಗಿದೆ .. ಕೆಲವು ಸಾಮಾನುಗಳೆಲ್ಲ ಚೆಲ್ಲಾಪಿಲ್ಲಿಯಾಗಿವೆ . ನನಗೆ ಆಶ್ಚರ್ಯ , ಏಕೆಂದರೆ ಬೆಳಿಗ್ಗೆ ಎಲ್ಲ ಸರಿಯಾಗಿ ಇಟ್ಟಿದ್ದೆ ಸಂಜೆ ಆಗುವಷ್ಟರಲ್ಲಿ ಹೀಗೆ .ಅಂದ್ರೆ ವಿಕ್ಕಿ ರೂಮ್ ಗೆ ಬಂದಿದ್ದನೆ?. ಯಾವಗ ಬಂದಿರ ಬಹುದು?. ನಾನು ಮಲಗಿರುವಾಗಲೆ ಅಥವ ಅದಕ್ಕು ಮೊದಲೆ? .. ಆದ್ರು ಈ ರೀತಿ ಕೊಳಕು ಮಾಡಿದ್ದದರು ಏಕೆ?. ಮೊದಲೆ ತಲೆ ನೊಯುತ್ತಿತ್ತು ಈಗ ಇದು ಬೇರೆ, ಎನು ತಿಳಿಯದಂತಾಗಿ ಮತ್ತೆ ಹಾಸಿಗೆಯ ಮೇಲೆ ಪವಡಿಸಿದ್ದೆ. ಆಲೋಚಿಸುತ್ತಲೆ ನಿದ್ದೆಗೆ ಜಾರಿದ್ದು ಗೊತ್ತಾಗಲೆ ಇಲ್ಲ.
ಕಿಲ ಕಿಲ ನಗುವಿನ ಶಬ್ದ ಕೇಳಿ ಒಮ್ಮೆಗೆ ಎಚ್ಚರವಾಯಿತು.. ಯಾರಿರ ಬಹುದು ಎಂದು ನೋಡೋಣ ಎಂದು ಎದ್ದು ಹೊರ ಬಂದರೆ
ಅಲ್ಲಿ ವಿಕ್ಕಿ ಯಾರೊಂದಿಗೊ ಮಾತಾಡುತ್ತಿದ್ದ ಮದ್ಹ್ಯೆ ಕಿಲ ಕಿಲ ನಗು. ಯಾರಿರ ಬಹುದು ನನಗೂ ಕೂತುಹಲ ..


.... ಮುಂದುವರೆಯುವುದು....

Friday, November 27, 2009

ಮದುವೆಯ ಈ ಬಂಧ .....

ದಿನ ಎಷ್ಟು ಬೇಗ ಸಾಗುತ್ತಿದೆ .. ನೋಡು ನೋಡುತ್ತಿದ್ದಂತೆ , ಇಂದು ನಿನ್ನೆಯಾಗಿ , ನಿನ್ನೆ ಮೊನ್ನೆಯಾಗಿ ಕಾಲ ಚಕ್ರ ಸಾಗುತ್ತಿದೆ.
ಏನು ಸಮಸ್ಯೆ ಅಂತೀರ , .. ಇನ್ನು ಸರಿಯಾಗಿ ೧೦ ದಿನಕ್ಕೆ ನಾನು ಒಬ್ಬ ಸಂಸಾರಿಗಳ ಸಾಲು ಸೇರಿ ಹೊಗ್ತಿನಿ.
ಹುಡುಗಾಟ, ತಿರುಗಾಟ ..... ಮತ್ತೇನೆನೋ ಆಟ ಆಡಿಕೊಂಡಿದ್ದ ನಾನು ಈಗ ಮದುಮಗ .. ನನಗೆ ನಂಬೊಕೆ ಆಗ್ತ ಇಲ್ಲ :)
ಎರ್ಡು ತಿಂಗಳ ಹಿಂದೆ ಸುಮ್ಮನೆ ಮನೆಯಲ್ಲಿ ಹುಡುಗಿ ನೋಡೊಣ ಅಂದಾಗ ಹುಂ ಅಂದಿದ್ದೆ .. ಆದರೆ ಅವಕಾಶ ನಾನು ಹುಂಮ್
ಅನ್ನೊದೆ ಕಾಯ್ತ ಇತ್ತು ಅಂದು ಕೊಂಡಿರಲಿಲ್ಲ .. ಸಮಯ ಕಳೆಯೋಣ ಅಂತ , ಬ್ಲೊಗ್ ತೆರೆದೆ, ಒಂದಿಷ್ಟು ಗೀಚಿದೆ ..
ಹಲವರು ಓದಿ ಬೆನ್ನು ತಟ್ಟಿದರು .. ಹಲವರ ಸ್ನೇಹವಾಯ್ತು ..ಬೇರೆ ಬ್ಲೊಗ್ ಒದಿ ಹೆಚ್ಚು ವಿಷಯಗಳನ್ನು ತಿಳಿದೆ ..
ಬರೆಯಲು ಸ್ಪೂರ್ತಿ ಸಾಲದೆ ಬ್ಲೊಗ್ ಕದ ಮುಚ್ಚಿದೆ , ಈಗ ಮತ್ತೆ ಸ್ಪೂರ್ತಿಯಾಗಿ , ನನ್ನ ಕೈ ಹಿಡಿದು ನಡೆಸುವ
ಸಲುವಾಗಿ ,ನನ್ನವಳಾಗಿ ಶ್ರುತಿ ಎಂಬ ಕನ್ಯೆಯೊಂದಿಗೆ , ಇದೆ ದಿನಾಂಕ ೦೯-೧೨-೨೦೦೯ ರಂದು ಸಿರ್ಸಿಯ
ತೋಟಗಾರ ಕಲ್ಯಾಣ ಮಂಟಪದಲ್ಲಿ ಪಾಣಿಗ್ರಹಣ ಮಾಡುತ್ತಿದ್ದೇನೆ .. ಈ ಶುಭ ಸಂದರ್ಭದಲ್ಲಿ
ನನ್ನ ಎಲ್ಲಾ ಬ್ಲೊಗ್ ಮಿತ್ರರು , ತಮ್ಮ ಪರಿವಾರ ಹಾಗು ಮಿತ್ರರೊಂದಿಗೆ ಆಗಮಿಸಿ ಆಶಿರ್ವದಿಸಬೇಕೆಂದು
ಕೋರುವ ...

ತಮ್ಮವ,
ಶ್ರೀಧರ ಭಟ್ಟ

ವಿಸೂ: ಇದನ್ನೆ ವಯಕ್ತಿಕ ಆಮಂತ್ರಣವೆಂದು ತಿಳಿದು , ಆಗಮಿಸಿ ಹಾರೈಸಿ.

Thursday, October 1, 2009

ದೇವದೂತ

ಗಾಂಧಿ ಜಯಂತಿಯ ಸಂದರ್ಭದಲ್ಲಿ ಶಾಲಾ ದಿನದಲ್ಲಿ ಗೆಳೆಯರೊಂದಿಗೆ ಸೇರಿ ಬರೆದ ಒಂದು ಕವನ.
ಈ ಕವನ ಈಗ ಬಾಲಿಶ ಎನಿಸಬಹುದು ಎಕೆಂದರೆ ಒನ್ದು ಪ್ಯಾರದಿಂದ ಮತ್ತೊಂದಕ್ಕೆ ಲಿಂಕ್ ಸಿಗದು ..
ಆದರು ಶಾಲಾ ದಿನದಲ್ಲಿ ಬರೆದ ಕವನವಾದ್ದರಿಂದ ಯಾವುದೆ ಬದಲಾವಣೆ [ ಕೆಲವು ಶಬ್ದಗಳನ್ನು ಮಾತ್ರ ]
ಮಾಡದೆ ಹಾಗೆಯೇ ಪ್ರಕಟಿಸಿರುವೆ.
=====================================================

ರತ್ನ ಕುಂದಿತು ,ದೀಪ ನಂದಿತು
ಮನೆಯೊಳಗಾಡುತ್ತಿದ್ದ ಕಂದಮ್ಮ
ಕಿಟಾರನೆ ಕಿರುಚಿತು
ಅದೇ ತಾನೆ ಬೆಳಗಿದ ಸ್ವಾತಂತ್ರ್ಯ
ದೀಪದಲಿ ಕೊರತೆ ಕಂಡಿತು
ಬೆಳಗುತ್ತಿದ್ದ ಭಾರತದಲ್ಲಿ ಕತ್ತಲಾವರಿಸಿತು.

ಪೂಜ್ಯ ಬಾಪುಜಿ , ಸತ್ಯತಾವಾದಿ
ಆಕಸ್ಮಿಕವಾಗಿ ಅಗಲಿ
ಮಾಡಿದೆ ದೇಶದ ಜನರನ್ನು ತಬ್ಬಲಿ
ಸಂಚುಕಾರರು ಆ ಆಂಗ್ಲರು
ನಿನ್ನೆದುರಿಗಾದರು ತ್ರುಣ ಸಮಾನರು
ಹೊಡೆದೋಡಿಸಿ ಅವರ ನೀಡಿದೆ ದೇಶಕ್ಕೆ
ಸ್ವಾತಂತ್ರ್ಯ,
ಅರಿಯದೆ ನಡೆದಿತ್ತು ಹಿಂದೆಯೆ ನಿನ್ನ ಕೊಲೆಯ
ತಂತ್ರ.


ಅಂಹಿಸೆಯೇ ನಿನ್ನ ಆಯುಧ
ಕೈಕೋಲೇ ಆ ಪರಶಿವನ ತ್ರಿಶೂಲ
ನಿ ನೇಯ್ದ ಖಾದಿಯೆ ನಿನಗಾಡಂಬರ
ಸರಳ ಜೀವನ ನಿನ್ನ ವ್ಯವಹಾರ
ರಾಮರಾಜ್ಯದ ಕನಸುಗಾರ
ದೇಶಕ್ಕೆ ನೀಡಿದೆ ಹೊಸ ಆಚಾರ
ನಿನ್ನ ಕೊಡುಗೆ ದೇಶಕ್ಕೆ ಅಪಾರ
ಒಟ್ಟಿನಲಿ ನೀನೊಬ್ಬ ದೇವದೂತನ ಅವತಾರ.

Friday, September 25, 2009

ಭಾಂಧವ್ಯ
--- ತೊರೆಯುವ ಮುನ್ನ ಅಳಿಯದ ನೆನಪು -- ಒಂದು ನೀಳ್ಗತೆ

ವಿಕ್ಕಿ "ತೊಡಾ ಚಾಯ್ ಬನಾವೊನಾ , ಸಿರ್ ದರ್ದ್ ಕರ್ ರಹಾ ಹೈ" ,

ವಿಕ್ರಮ್ ಎನೊ ಹೆಳ್ತಾ ಇದ್ದ , ನನಗೆ ಅದಾವುದರ ಪರಿವೆಯೆ ಇರಲಿಲ್ಲ .. ಬೆಳಿಗ್ಗೆ ಇಂದ ಎನೊ
ತಳಮಳ , ಮನಸ್ಸು ಹಿಡಿತಕ್ಕೆ ಸಿಕ್ತಾ ಇಲ್ಲ .. ನಾನು ನಾನಾಗಿಲ್ಲ ಅನಿಸ್ತ ಇತ್ತು . ಯಾಕೆ ಎನಾಗ್ತಾ ಇದೆ ಅಂತಾನು
ತಿಳಿತ ಇಲ್ಲ. ಮನದಲ್ಲಿ ಎನೇನೊ ಆಲೋಚನೆ , ಒಂದು ರೀತಿಯ ಭಯ ಆವರಿಸುತ್ತ ಇತ್ತು ,

"ಯೆ ಲೆ ಚಾಯ್ ," ಅಂತ ವಿಕ್ಕಿ ಕರೆದಾಗಲೆ ಮತ್ತೆ ಎಚ್ಚರವಾದದ್ದು , "ಥ್ಯಾಂಕ್ಸ್" ಅನ್ನುತ್ತ ಚಹ ಇಸ್ಕೊಂಡೆ
ಚಹ ಕೊಡುತ್ತ ಅವನೆ ಮಾತು ಮುಂದುವರೆಸಿದ " ಜಲ್ದಿ ಕತಮ್ ಕರ್ , ಕಹಿ ಗುಮ್ನೆ ಚಲ್ತೆ ಹೈ , ತುಮ್ಹೆ ಶೂ ಲೇನಾತಾನಾ , ಮಾರತಹಳ್ಳಿ ಚಲ್ತೆ ಹೈ , ಪಿರ್ ಶ್ಯಾಮ್ಕೊ ಪಿವಿಆರ್ ಮೆ ಮೂವಿ ದೆಖ್ಕೆ , ಸಿಲ್ವರ್ ಮೆಟ್ರೊಮೆ ಖಾನಾ ಖಾಕೆ ಆಯೆನ್ಗೆ ಚಲೋ "
ಅವನು ಕರೀತಾ ಇದ್ರು ನನಗೆ ಹೊಗೋ ಮನಸಿಲ್ಲ , " ಯಾರ್ ಆಜ್ ನಹಿ , ತಬಿಯತ್ ಕುಚ್ ಠೀಕ್ ನಹಿ ಹೈ "

" ಕ್ಯಾ ಬಾತ್ ಹೈ , ಸುಭ್ಹಸೆ ಉದಾಸ್ ಹೊ ಕ್ಯಾ ಹುಆ , ಡೊಕ್ಟರ ಕೆ ಪಾಸ್ ಲೆಚಲೂ .... "

ವಿಕ್ರಮ ಮಾತಡುತ್ತಿದ್ದ ಆದರೆ ನಾನು ಮಾತ್ರ ಹಿಂದೆ ಹಿಂದೆ ಸಾಗುತ್ತಿದ್ದೆ, ನೆನಪಿನ ಅಂಗಳಕ್ಕೆ ಜಾರಿದ್ದೆ,

ನಾನು ಮತ್ತೆ ವಿಕ್ರಮ್ ಮೂರು ವರ್ಷಗಳ ಹಿಂದೆ ಬೆಟ್ಟಿ ಆಗಿದ್ದು , ಆ ಭೇಟಿ ಒಂದು ಆಕಸ್ಮಿಕವೇ ಸರಿ ...
ನನಗೆ ಅವನ ಪರಿಚಯ ಇಲ್ಲ , ಅವನಿಗೆ ನನ್ನ .ಇಬ್ಬರು ಬೆಂಗಳೂರಿಗೆ ಹೊಸಬರು ಎನ್ನುವುದು ತಿಳಿದಿದ್ದು ಈ ಘಟನೆಯಿಂದಾಗಿ,

ಕಂಪನಿಯ ಮೊದಲ ದಿನ , ಇಂಡಕ್ಷನ್ ಮುಗಿಸಿಕೊಂಡು ಹೊರಡುವಾಗ ಸರಿ ಸುಮಾರು ೭ ಗಂಟೆ , ತುಂತುರು ಮಳೆ ಬೇರೆ ,
ಎಲ್ಲರು ಬಸ್ಸಿಗಾಗಿ ಕಾಯ್ತಾ ಇದ್ದರು , ನನಗೆ ಮೆಜೆಸ್ಟಿಕ್ ಗೆ ಹೋಗಿ ಅಲ್ಲಿಂದ ಬೇರೆ ಬಸ್ಸು ಹಿಡಿಯಬೆಕಿತ್ತು , ಆದರೆ ಹೇಗೆ ಹೋಗುವುದು ಗೊತ್ತಿಲ್ಲ ಅಲ್ಲೆ ಪಕ್ಕದಲ್ಲೆ ನಿಂತಿದ್ದ ಒಬ್ಬನನ್ನು ಕೇಳೊಣವೆಂದು ತಿರುಗಿದೆ ಅನಾಮತ್ತಾಗಿ ಮತ್ತೊಂದು ವ್ಯಕ್ತಿ
" ಎಕ್ಸಕ್ಯುಸ್ಮಿ , ಮೆಜೆಸ್ಟಿಕ್ ಕೊ ಕೌನ್ಸ ಬಸ್ಸ್ ಲೆನಾ ಹೈ " ಅಂತ ನಾನು ಕೇಳಬೆಕೆಂದುಕೊಂಡಿರುವ ಪ್ರಶ್ನೆಯನ್ನೆ ನನಗೆ ಕೇಳಿದ ,
ನಾನು ಮುಜುಗರದಿಂದ " ಐ ಡೊಂಟ್ ನೊ" ಅಂದೆ . ಇಬ್ಬರಿಗೂ ಹೋಗಬೇಕಾಗಿರುವುದು ಒಂದೆ ಕಡೆ ಆದರೆ ಬಸ್ಸ್ ನಂಬರ್ ಗೊತ್ತಿಲ್ಲ . ಅವನೇ ಮತ್ತೆ " ಆಪ್ ಕನ್ನಡ್ ಜಾಂತೆ ಹೊ ತೊ , ಜರಾ ಬಸ್ಸ ಕಾ ಬೋರ್ಡ್ ದೆಕಕೆ ಬತಾಒನಾ ಪ್ಲೀಸ್ " ಅಂದ.
ಟೆನ್ಶ್ಯನ್ ಲ್ಲಿ ನನಗೆ ಈ ವಿಚಾರ ಹೊಳೆದೆ ಇರಲಿಲ್ಲ . ಒಂದು ಬಸ್ಸ್ ಬಂತು ,
ಒಮ್ಮೆಗೆ ಅವನು " ಕ್ಯಾ ಲಿಖ್ಹಾ ಹೈ " ಅಂದ .
ನಾನು ಬೋರ್ಡ ಮೇಲೆ ಕಣ್ಣಾಡಿಸಿ " ಕೆ ಆರ್ ಮಾರ್ಕೆಟ್ " ಅಂದೆ , ಅದೆಲ್ಲಿ ಅಂತಾನು ನನಗೆ ಗೊತ್ತಿಲ್ಲ .
ಅಷ್ಟರಲ್ಲಿ ಪಕ್ಕದವರೊಬ್ಬರು , ನೀವು ಈ ಬಸ್ಸ್ ಹತ್ತಿ ಟವ್ನ್ ಹಾಲ್ ಇಳಿರಿ , ಅಲ್ಲಿಂದ ಮೆಜೆಸ್ಟಿಕ್ ಗೆ ಬಹಳ ಬಸ್ಸು ಸಿಗುತ್ತೆ ಅಂದರು.
ಸರಿ ಅಂತು ಆ ಬಸ್ಸು ಹತ್ತಿ , ಎಲ್ಲೆಲ್ಲೊ ಇಳಿದು , ನಾನು ಉಳಿದುಕೋಡಿರುವವರ ಮನೆ ಸೇರಿದಾಗ ೯ ಗಂಟೆ.

ನಂತರದ ಕೆಲವು ದಿನ ಅವನ ಭೇಟಿ ಆಗಿರಲಿಲ್ಲ. ನಿಜವೆಂದರೆ ಆವತ್ತು ಟೆನ್ಶನಲ್ಲಿ ಅವನ ಮುಖ ಸರಿ ನೋಡಿರಲಿಲ್ಲ .ಹಾಗಾಗಿ ಎದುರಿಗೆ ಬಂದರು ಅವನೇ ಅನ್ನುವುದು ಕಷ್ಟವಾಗ್ತಿತ್ತು. ಸ್ವಲ್ಪ ದಿನದ ನಂತರ ಒಂದಿನ ಕ್ಯಾಂಟಿನಲ್ಲಿ ಒಬ್ಬ ನನ್ನ ಕಂಡು , " ಉಸ್ ದಿನಕೆಲಿಯೆ ಥ್ಯಾಂಕ್ಸ್ , ಆ ಯಮ್ ವಿಕ್ರಮ್ " ಅಂದ , ನನಗೆ ಒಮ್ಮೆಲೆ ಎನು ಗೊತ್ತಾಗಲೆ ಇಲ್ಲ. ನನ್ನ ಮುಖ ನೋಡಿ ಅವನೆ ಹೇಳಿದ , ಫಸ್ಟ ಡೇ , ಬಸ್ ಸ್ಟ್ಯಾಂಡ್ ಆಂತೆಲ್ಲಾ ಗೊಣಗಿದಾಗ ನನಗೆ ನೆನಪಾಯಿತು.ನಾನು ನನ್ನ ಹೆಸರು ಹೇಳಿ ಕೈ ಕುಲುಕಿ ನಡೆದೆ .
ಮಧ್ಯಾನ್ಹ ಮತ್ತೆ ಸಿಕ್ಕಿದವ "ಯಹಾ ಪರ್ ನಯಾ ಹೂನ್ , ಕಿಸಿಕೊ ಜಾನತಾ ನಹಿ ಇಸ್ಲಿಯೆ ಆಪ್ ಕಾ ರೂಮ್ ಮೆ ಜಗಾ ಹೈ ತೊ ಮೈ ಆಪ್ ಕೆ ಸಾತ ರೆಹ್ನೆ ಆವು, " ಅಂದ.ಇನ್ನು ಸರಿ ಪರಿಚಯವೇ ಆಗಿಲ್ಲ ಆಗಲೆ ಜೊತೆಗೆ ರೂಮ್ ಮಾಡೋಣ ಅಂತಿದಾನಲ್ಲ ಅನಿಸ್ತು. ನಾನು ಇನ್ನು ಪರಿಚಯದವರ ಮನೆಯಲ್ಲಿ ಉಳಿದಿದ್ದು , ರೂಮ್ ಹುಡುಕ್ತಾ ಇದ್ದೆ . ಅವನಿಗೂ ಅದನ್ನೆ ಹೇಳಿ ಅಲ್ಲಿಂದ ಜಾಗ ಖಾಲಿಮಾಡಿದೆ .ನಮ್ಮ ಕಡೆಯವರ ಜೊತೆ ರೂಮ್ ಮಾಡಿದ್ರೆ ಅನುಕೂಲ ಅಂತ ಅವನನ್ನ ಮರೆತಿದ್ದೆ. ಮತ್ತೆ ಮರುದಿನ ಸಿಕ್ಕಿದವನೇ,
" ಎಕ್ ರೂಮ್ ಮಿಲಾ ಹೈ ,ರೆಂಟ್ ಬಿ ಕಮ್ ಹೈ , ತುಮ್ ಕಹೊ ತೊ ಬಾತ್ ಕರೂಂಗಾ , ಕ್ಯಾ ಖಯಾಲ್ ಹೈ " ಅಂದ .
ಇವನೊಳ್ಳೆ ಗಂಟು ಬಿದ್ದನಲ್ಲಾ ಅನಿಸ್ತು . " ಇಲ್ಲ ನಿನ್ನ್ ಜೊತೆ ಇರೊಲ್ಲ " ಅಂತಾ ಹೇಳೊಣ ಅನಿಸಿಬಿಡ್ತು . ಆದರೆ ಯಾಕೋ ಗೊತ್ತಿಲ್ಲ " ಠೀಕ ಹೈ " ಅಂದುಬಿಟ್ಟೆ. ಆಮೇಲೆ ತಪ್ಪು ಮಾಡಿದೆನಾ ಅನಿಸ ತೊಡಗಿತ್ತು. ನೋಡಿದರೆ ಶ್ರೀಮಂತ ಮನೆ ಹುಡುಗನ ತರಹ ಇದ್ದ , ಉತ್ತರ ಭಾರತದವನು ಬೇರೆ , ಹೇಗೆ ಹೊಂದಿಕೊಳ್ಳೊದು ಅನ್ನುವ ಭಯ.
ಮರುದಿನ ಕಾಲ್ ಮಾಡ್ತಿನಿ ಅಂದವನು ನಾಪತ್ತೆ , ವೀಕೆಂಡ್ ಅಂತಾ ಮಜಾ ಮಡ್ತಾ ಇದಾನೆ ಅಂದುಕೊಂಡೆ. ಆದರೆ ನಾನು ಬೇರೆ ರೂಮ್ ಹುಡುಕ ಬೇಕು ,ಅವನಿಗೆ ತಿಳಿಸೋಣ ಅಂದರೆ ಫೊನ್ ನಂಬರ ಸಹ ಇಲ್ಲ, ನನ್ನ ನಂಬರ್ ಅವನಿಗೆ ಕೊಟ್ಟಿದ್ದೆ ಆದರೆ ಅವನ ನಂಬರ ಪಡೆದಿರಲಿಲ್ಲ. ಸರಿ ಅವನು ನೋಡಲಿ, ನಾನು ಒಂದು ರೂಮ್ ನೋಡಿ ಯಾವುದು ಬೇಕೊ ನಿರ್ಧರಿಸಿದರಾಯಿತು ಅಂತಾ , ವೀಕೆಂಡ ಪೂರ್ಣ ಸುತ್ತಿದ್ದೆ ಸುತ್ತಿದ್ದು. ಎಷ್ಟು ಸುತ್ತಿದರು ನನ್ನ ಬಡ್ಜೆಟಗೆ ತಕ್ಕ ರೂಮ್ ಸಿಗಲಿಲ್ಲ . ಏಜೆಂಟೆ ಹಿಡಿದರೆ ಅವರಿಗೆ ಒಂದು ತಿಂಗಳ ರೆಂಟ್ ಕೊಡಬೇಕು. ದುಬಾರಿ ಜೀವನ ಅನಿಸಿಬಿಡ್ತು. ಸುತ್ತಿ ಸುತ್ತಿ ಬೇಜಾರಾಗಿ ಕಡೆಗೂ ಏಜೆಂಟನ ಹಿಡಿಯ ಬೇಕಾಯ್ತು.

ಸೋಮವಾರ ಬೆಳಿಗ್ಗೆ ಕಂಪನಿಯಲ್ಲಿ ಸಿಕ್ಕಿದವನೆ "ಸೊರಿ" ಅಂದ. ನನ್ನ ಚಹರೆ ನೋಡಿಯೆ ತಿಳಿದಿರ ಬೇಕು ಬೇಜಾರಗಿದೆ ಅಂತ, ಅವನೆ ಮತ್ತೆ, "ಪೆಹಲಾ ವೀಕೆಂಡತಾನಾ , ಇಸ್ಲಿಯೆ ದೊಸ್ತೊಂಕೆ ಸಾತ್ ಕಮರ್ಷಿಯಲ್ಲ ಸ್ಟ್ರೀಟ್ ಗಯಾ ಥಾ , ಬೂರಾ ಮತ್ತ್ ಮಾನನಾ " ಅಂದ.ನನ್ನ ಪರಿಸ್ಥಿತಿ ನನಗೆ , ಮೊದಲು ನೆಂಟರ ಮನೆ ಬಿಡಬೇಕು , ಆದರೆ ಇ ಆಸಾಮಿ ರೂಮ್ ನೋಡೆ ಇಲ್ಲ ಅನಿಸುತ್ತೆ ಬದಲು ಸುತ್ತೋಕೆ ಹೋಗಿದಾನೆ,ಆ ಪ್ರೆಂಡ್ಸ್ ಜೊತೆನೆ ಇರ್ಬೆಕಿತ್ತು ಅಂತ ಹೇಳೋಷ್ಟು ಕೋಪ ಬಂದಿತ್ತು ಆದರು ಸಾವರಿಸಿಕೊಂಡು , "ಠೀಕ್ ಹೈ , ಒನರ್ ಸೆ ಬಾತ್ ಹುಯಿ " ಅಂತ ಕೇಳಿದೆ,ಅವನು
" ನಹಿ ಯಾರ್ , ವೊ ರೂಮ್ ಠೀಕ್ ನಹಿ ಹೈ , ಕಹಿ ಔರ್ ಡೂಂಡತೆ ಹೈ "
ನಾನು " ಮೈ ಎಕ್ ರೂಮ್ ದೆಖ್ಹಾ ಹುಂ , ಒನರ್ ಸೆ ಬಾತ್ ಹುಯಿ ಹೈ , ತುಮ್ ಚಾಹೆತೂ ಆಕ್ ದೆಕಲೂ , ಮೇರಾ ವಹಾ ಜಾನಾ ಕನ್ಪರ್ಮ್ ಹೈ "ಅಂದೆ ."ಕ್ಯಾ ಯಾರ್ ವೀಕೇಂಡ್ ಮೆ ಯಹಿ ಕಿಯಾ ಕ್ಯಾ , ಗೂಮನೆ ನಹಿ ಗಯಾ ಕ್ಯಾ" ಅಂತಾ ಕೇಳಿದ,
ನನ್ನ ಸಿಟ್ಟು ಇಷ್ಟರಲ್ಲೆ ನೆತ್ತಿಗೇರಿತ್ತು , ಮತ್ತಷ್ಟು ಕೂಪದಲ್ಲಿ "ದೆಕನಾ ಹೈ ತೊ ಕಾಲ್ ಕರ್ " ಅಂತ ಹೇಳಿ ಅಲ್ಲಿಂದ ನಡೆದೆ.
ನನ್ನ ಹಿಂದೆ ಓಡಿ ಬಂದು " ಗುಸ್ಸ ಮತ್ತ್ ಕರೊ ಜಾನ್ , ಆಜ್ ಶ್ಯಾಮ್ಕೊಹಿ ಚಲ್ತೆ ಹೈ" ಅಂದ.
ನನಗು ಬೇರೆ ಯಾರು ಸಿಕ್ಕಿಲ್ಲವಾದ್ದರಿಂದ , ಸರಿ ಇವನಾದ್ರೆ ಇವನು , ಗುಣ ಹೇಗೊ ಗೊತ್ತಿಲ್ಲ, ಆದರೆ ಭಾಷೆಗೆ ತೊಂದರೆ ಇಲ್ಲ ಸ್ವಲ್ಪ ದಿನ ಇದ್ದರಾಯಿತು ಅಂತ ಅಲೋಚಿಸಿ ಸಂಜೆ ಸಿಗುವುದಾಗಿ ಹೇಳಿ ಕೆಲಸಕ್ಕೆ ತೆರಳಿದ್ದೆ.
ಇದಾದ ಸ್ವಲ್ಪವೆ ದಿನದಲ್ಲಿ ಇಬ್ಬರು ನಾನು ನೋಡಿದ ರೂಮನಲ್ಲೆ ಇರತೊಡಗಿದೆವು. ಅವನ ಹಾಸ್ಯ ಬರಿತಾ ಮಾತು , ಪೋಲಿ ಜೋಕ್ ಗಳು, ನಡತೆ , ಮೊದಲ ಭೇಟಿಯ ಭಯವನ್ನು ಓಡಿಸಿ ಬಿಟ್ಟಿತ್ತು. ಪರ್ವಾಗಿಲ್ಲ ಮನುಷ್ಯ ಒಳ್ಳೆಯವನೆ ಅನ್ನೊಷ್ಟು ಆಪ್ತವಾಗ ತೊಡಗಿದ್ದ. ನನ್ನ ನಿರ್ಧಾರ ತಪ್ಪಾಗಲಿಲ್ಲ ಅಂತ ಅಂದು ಕೊಳ್ಳುತ್ತಿದ್ದೆ.

ಆದರೆ ಅಂದು ನಡೆದ ಘಟನೆ , ನನ್ನ ನಿರ್ಧಾರವನ್ನೆ ಬುಡಮೇಲಾಗಿಸುವದರಲ್ಲಿತ್ತು .....

ಮುಂದುವರೆಯುತ್ತದೆ ......
====================================================

ಕಥೆಗಾರ ನಾನಲ್ಲ , ಆದರೂ ನನ್ನ , ಮತ್ತು ಕೆಲವು ಮಿತ್ರರ ಅನುಭವಗಳಿಗೆ ಸ್ವಲ್ಪ ಖಾರ , ಮಸಾಲೆ ಸೇರಿಸಿ ಕಥಾ ರೂಪ ಕೊಟ್ಟು ಬರೆಯಲು ಪ್ರಯತ್ನಿಸಿದ್ದೆನೆ.ಏಷ್ಟು ಭಾಗ ಆಗಬಹುದು ಎಂದು ಇನ್ನು ನಿರ್ಧರಿಸಿಲ್ಲ , ನಿಮ್ಮೆಲ್ಲರ ಅಭಿಪ್ರಾಯವನ್ನು ನೋಡಿ ಬರೆಯೋಣವೆಂದುಕೊಂಡಿದ್ದೇನೆ. ಇಷ್ಟು ಸುಧೀರ್ಘ ಕಥೆಗೆ ಇದೆ ಮೊದಲ ಬಾರಿ ಪ್ರಯತ್ನಿಸುತ್ತಿರುವುದು. ಹೇಗಿದೆ ಅಂತ ಸ್ಪಂದಿಸಿ , ತಪ್ಪಿದ್ದಲ್ಲಿ ತಿದ್ದಿ ,ಕಥಾ ಶೈಲಿ ಕೊಂಚ ವಿಭಿನ್ನವಾಗಿದೆ,ಹಿಂದಿ ಭಾಷೆಯ ಬಳಕೆ ಬಹಳ ಇದೆ , ಸಹಕರಿಸಿ , ಅಭಿಪ್ರಾಯ ತಿಳಿಸಿ.ನಾನಿನ್ನು ಬರಹ ಲೋಕದಲ್ಲಿ ಅಂಬೆಗಾಲಿಡುತ್ತಿರುವ ಹಸುಗೂಸು .. ಕೈ ಹಿಡಿದು ನಡೆಸುವಿರೆಂದು ನಂಬಿದ್ದೇನೆ .
=====================================================

Friday, August 14, 2009

ಮಾನ್ಯ ಅಥಿತಿಗಳೇ, ಪುಜ್ಯ ಗುರುಗಳೇ , ಹಾಗೂ ನನ್ನ ಸಹ ಪಾಠಿಗಳೇ


ಅಗಷ್ಟ ೧೫ ರ ಭಾಷಣ , ಧ್ವಜಾರೋಹಣ ಮತ್ತು ಒಂದಿಷ್ಟು ನೆನಪುಗಳು ,
=============

ಮಾನ್ಯ ಅಥಿತಿಗಳೇ, ಪುಜ್ಯ ಗುರುಗಳೇ , ಹಾಗೂ ನನ್ನ ಸಹ ಪಾಠಿಗಳೇ ,
"ಇಂದು ಆಗಷ್ಟ್ ೧೫ ,ಅಂದರೆ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದ ದಿನ . ಇಂದಿಗೆ ಭಾರತಕ್ಕೆ ಸ್ವಾತಂತ್ರ್ಯ ಬಂದು ಸರಿಯಾಗಿ ೪೭ ವರ್ಷಗಳು ಕಳೆದವು.
ಮಹತ್ಮಾ ಗಾಂಧಿ , ಚಾಚಾ ನೆಹರು , ಸುಭಾಶಚಂದ್ರ ಭೋಸ ಮುಂತಾದವರ ಪರಿಶ್ರಮದ ಫಲವಾಗಿ ಆಗಷ್ಟ್ ೧೫ , ೧೯೪೭ರಂದು ನಮಗೆ ಸ್ವತಂತ್ರ್ಯ ದೊರಕಿತು.
.........................

......................... "

ಇದು ನಾನು [ ನನ್ನಂತೆ ಇನ್ನು ಎಷ್ಟೊ ಜನ] ಪ್ರಾಥಮಿಕ ಶಾಲಾ ದಿನಗಳಲ್ಲಿ ಮಾಡಿದ ಭಾಷಣದ ತುಣುಕು. ಇವತ್ತು ಕೆಲ್ಸ ಜಾಸ್ತಿ ಇರ್ಲಿಲ್ಲ ಅದಿಕ್ಕೆ ಸುಮ್ನೆ ಆಗಷ್ಟ ೧೫ರ ಬಗ್ಗೆ ಲೇಖನಗಳನ್ನ ಓದ್ತಾ ಇದ್ದೆ , ಮನಸ್ಸು ಬಾಲ್ಯದ ಕಡೆಗೆ ಜಾರುತ್ತಿತ್ತು .ಹಳೆ ನೆನಪುಗಳೆ ಹಾಗೆ ಬೇಡದ ಸಮಯದಲ್ಲಿ ಬಂದು ಕಾಡುತ್ತವೆ.

ಮೂರನೇ ತರಗತಿಯಲ್ಲಿದ್ದಾಗ ನಾನು ಮಾಡಿದ ಭಾಷಣ , ಅದರ ತಯಾರಿ ಇನ್ನು ಕಣ್ಣಿಗೆ ಕಟ್ಟಿದಂತಿದೆ. ಅದು ನನ್ನ ಮೊದಲ ಸ್ಟೇಜ್ ಅನುಭವ . ಶಾಲೆಯಿಂದ ಬಂದ ತಕ್ಷಣ ಭಾಷಣ ಬರೆದು ಕೊಡು ಎಂದು ಅಕ್ಕನ ಬೆನ್ನು ಬಿದ್ದಿದ್ದೆ. ಅಂತು ಕಾಡಿ ಬೇಡಿ , ಅಮ್ಮನ ಹತ್ತಿರ ಹೇಳಿಸಿದ ಮೇಲೆ ಬರೆದುಕೊಟ್ಟಿದ್ದಳು. ಅದನ್ನು ಬಾಯಿಪಾಠ ಮಾಡುವಾಗ ಆದ ಖುಶಿ ಅಷ್ಟಿಷ್ಟಲ್ಲ.ಆದರೆ ಮರುದಿನ ಎಲ್ಲದುದಿರಿಗೆ ನಿಂತಾಗ ಮಾತ್ರ ಕಣ್ಣ ಮುಂದೆ ಕತ್ತಲೆ ಆವರಿಸಿ ಬಿಟ್ಟಿತ್ತು . ಸೇರಿರುವರ ಕಣ್ಣೆಲ್ಲಾ ನನ್ನ ಮೇಲೆ , ನನಗೆ ಏನು ನೆನಪಾಗುತ್ತಿಲ್ಲ. ಅಪ್ಪ ಹಿಂದಿನ ದಿನವೇ ಹೆಳಿದ್ದರು ಮರೆತರೆ ಹಾಳೇ ನೋಡಿ ಓದು ಅಂತ. ಅದನ್ನ ನೆನಪಿಸಿಕೊಂಡು ಒಮ್ಮೆ ಹಾಳೆಯತ್ತ ಕಣ್ಣಾಡಿಸಿ , ನಡುಗುವ ದನಿಯಲ್ಲಿ ಶುರು ಮಾಡಿದೆ , ಅದೆಲ್ಲಿಂದ ಬಂತೊ ಧೈರ್ಯ ಗೊತ್ತಿಲ್ಲ , " ಜೈ ಹಿಂದ " ಅನ್ನುವವರೆಗೆ ಸರಾಗವಾಗಿ ಭಾಷಣ ಮಾಡಿ ಮುಗಿಸಿದ್ದೆ . ಅದರ ನಂತರ ಏಷ್ಟೆಷ್ಟೋ ಭಾಷಣ , ಹಾಡು , ನಾಟಕ ಮಾಡಿದ್ದೆನೋ ಆದರೆ ಆ ಮೊದಲ ಅನುಭವ ಮಾತ್ರ ಅಚ್ಚಳಿಯದಂತೆ ಮನದ ಮೊಲೆಯಲ್ಲಿ ಸುಪ್ತ ಸ್ಥಿತಿಯಲ್ಲಿ ಇದೆ. ಈಗಲು ಅಷ್ಟೆ ಕೆಲವೊಮ್ಮೆ ಪ್ರೊಜೆಕ್ಟನಲ್ಲಿ ಪ್ರಸೆಂಟೇಶನ್ನ ಕೊಡಬೇಕು ಅಂದಾಗ ಆ ದಿನ ನೆನಪಿಗೆ ಬರುತ್ತದೆ. ಶಾಲೆಯಲ್ಲಿ ಧ್ವಜರೋಹಣದ ನಂತರ ಚಾಕಲೇಟ ತಿಂದು ,ಭಾಷಣ ಮಾಡಿ ಅಥವಾ ಕೇಳಿ , ಪ್ರಭಾತ ಪೇರಿಯನ್ನು ಮುಗಿಸಿ ಮನೆಗೆ ಬಂದರೆ , ಉಳಿದ ದಿನ ರಜೆಯೆ ಸರಿ.

ವಾಸ್ತವಸ್ಥಿತಿಗೆ ಬಂದಾಗ ಅನಿಸಿದ್ದೆಂದರೆ ನಾನು ಧ್ವಜಾರೋಹಣಕ್ಕೆ ಹೋಗಿ ವರುಷಗಳೆ ಸಂದಿದೆ ಎಂದು . ಶಾಲಾ ದಿನಗಳು ಮುಗಿದ ಮೇಲೆ ಯಾವುದೆ ಧ್ವಜರೋಹಣಕ್ಕೆ ಹೊದ ನೆನಪೆ ಇಲ್ಲ. ಇದು ನನ್ನ ಕಥೆ ಒಂದೆ ಅಲ್ಲ , ಎಷ್ಟೋ ಜನರು ಶಾಲಾ ದಿನಗಳ ನಂತರ ಪ್ರಾಯಶಃ ಆಗಷ್ಟ್ ೧೫ರಂದು ಧ್ವಜರೋಹಣಕ್ಕೆ ಹೋಗದಿರುತ್ತಾರೆ.ಕಾಲೇಜು ದಿನಗಳಲ್ಲಿ ರಜ ಬಂತೆಂದರೆ ಕ್ಯಾಂಪಸ್ ನ ಹತ್ತಿರವು ಸುಳಿಯುತ್ತಿರಲಿಲ್ಲ ಇನ್ನು ಧ್ವಜರೋಹಣ ದೂರದ ಮಾತಾಯಿತು. ಇನ್ನು ಕೆಲಸಕ್ಕೆ ಸೇರಿದ ಮೇಲಂತು,ಇದೆಲ್ಲ ಸಾದ್ಯವೇ ಆಗಲಿಲ್ಲ . ಧ್ವಜಾರೊಹಣವೋ ಇಲ್ಲಾ, ಭಾಷಣವೂ ಇಲ್ಲಾ , ರಜೆ ಇದೆ ಎಲ್ಲಿ ಸುತ್ತೊಕೆ ಹೊಗೋಣ ಅಂತ ತಯಾರಿ ನಡೆದಿರುತ್ತೆ. ಈ ಬಾರಿಯಾದರು ನಾನಿರುವಅಪಾರ್ಟಮೆಂಟಿನಲ್ಲಿ ಭಾವುಟ ಹಾರಿಸುವಾಗ ಹೋಗಲೇಬೇಕೆಂದುಕೊಂಡಿದ್ದೆನೆ. ಎನಾಗುತ್ತದೆ ನೋಡೊಣ. ನೀವು ಧ್ವಜಾರೋಹಣಕ್ಕೆ ಬನ್ನಿ.


ಇಷ್ಟು ಹೇಳಿ ನನ್ನ ಭಾಷಣವನ್ನು ಇಲ್ಲಿಗೆ ಮುಗಿಸುತ್ತೇನೆ ,

" ಜೈ ಹಿಂದ್ " ,
" ವಂದೇ ಮಾತರಂ "
ಎಲ್ಲರಿಗೂ ಸ್ವಾತಂತ್ರ್ಯೋತ್ಸವದ ಶುಭಾಷಯಗಳು .

Tuesday, August 11, 2009

ಬ್ಲಾಗಾಯ ತಸ್ಮೈ ನಮಃ

ನಾನು ಪುಸ್ತಕ ಬಿಡುಗಡೆ , ಸಾಹಿತ್ಯ ಅಂತೆಲ್ಲ ತಿರ್ಗಾಡ್ತೀನಿ , ಬರೀತೀನಿ ಅಂದುಕೊಂಡಿರಲಿಲ್ಲ .. ಆದರೆ ಇದೆಲ್ಲ ಸಾಧ್ಯವಾದದ್ದು ಬ್ಲಾಗ್ ಲೋಕಕ್ಕೆ ಕಾಲಿಟ್ಟ ಮೇಲೆ .. ಮುಂಚೆ ಒಂದೆರಡು ಕವನ , ಕಥೆ ಗೀಚಿದ್ದೆ .. ಮತ್ತೆ ಬರೆಯೋ ಆಸಕ್ತಿ ಯಾಕೋ ಕಳೆದು ಹೋಗಿತ್ತು .ಆದ ಕಾರಣ ಈಗ ಬರೆಯಲು ಕುಳಿತರೆ ಏನು ತೋಚದಂತಾಗಿದೆ .. ಸರಿ ಯಾವತ್ತಾದರೂ ಒಮ್ಮೆ ಬರಯೋಣ ಬಿಡಿ .. ಆದರೆ ಬ್ಲಾಗ್ ಲೋಕದಲ್ಲಿ ನಂಗೆ ಇಷ್ಟೊಂದು ಮಿತ್ರರಾಗ ಬಹುದು ಎಂದು ಮಾತ್ರ ಆಲೋಚಿಸಿರಲಿಲ್ಲ .. ಮೊದಲು ಇದರಲ್ಲಿ ಆಸಕ್ತಿ ವಹಿಸಲು ಸಹಾಯ ಮಾಡಿದವಳು ಶ್ವೇತಾ [ http://amidstthesea.blogspot.com/ ] . ನನ್ನ ಒಂದು ಬ್ಲಾಗ್ ಓಪನ್ ಆಗೋಕೆ ಕಾರನೀಕರ್ತಳು ಅವಳೇ . ಹಾಗೇ ಬಹಳ ದಿನದ ನಂತರ ನನ್ನ ಫ್ರೆಂಡ್ ಒಬ್ಬಳು [ Nannake - telprabu] ಬ್ಲಾಗ್ ನೋಡು ಎಂದು ಲಿಂಕ್ ಕಳುಹಿಸಿದಳು , ನನ್ನ ಬ್ಲಾಗ್ ಇಂಟರೆಸ್ಟ್ ಅಲ್ಲಿಂದ ಪ್ರಾರಂಭವಾಯಿತು . ಅಲ್ಲಿ ಬ್ಲಾಗ್ ಓದುತ್ತ ಓದುತ್ತ : ಇಟ್ಟಿಗೆ ಸಿಮೆಂಟ್ , ಛಾಯ ಕನ್ನಡಿ , ಜಲನಯನ , ಧರಿತ್ರಿ , ಮೌನಗಾಳ ಹೀಗೆ ಹತ್ತು ಹಲವು ಬ್ಲೋಗಗಳ ಪರಿಚಯವಾಯಿತು . ಇಷ್ಟೆಲ್ಲಾ ಆದಮೇಲೆ ಎಲ್ಲರನ್ನು ಒಮ್ಮೆ ನೋಡಬೇಕು ಎಂಬ ಹಂಬಲವಾಗ್ತಾ ಇತ್ತು , ಅದಕ್ಕೆ ಒಳ್ಳೆ ಅವಕಾಶ ಕೂಡಿ ಬಂದಿದ್ದು ಮೊನ್ನೆ ಆದಿತ್ಯವಾರ ಸುಶ್ರುತ ಮತ್ತು ಶ್ರೀನಿಧಿಯ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ .. ಅಂದು , ಶಿವೂ ಸರ್, ಪ್ರಕಾಶಣ್ಣ , ಹರ್ಷ , ಮತ್ತು ಹಲವರ ಭೇಟಿ ಆಯಿತು , ಅದರೊಂದಿಗೆ ಮೆಚ್ಚಿನ ನಿರ್ದೇಶಕರಾದ ನಾಗತಿಹಳ್ಳಿ ಚಂದ್ರಶೇಖರ , ಹಿರಿಯ ಕವಿ HSV Murthy ಹಾಗು ಜೋಗಿ ಯವರನ್ನು ನೋಡುವ ಅವಕಾಶವೂ ನನ್ನದಾಯಿತು .. ಹಾಗೆಯೆ ನನ್ನ ಶಾಲಾ ದಿನದ ಹಿರಿಯ ವಿದ್ಯಾರ್ಥಿಯನ್ನು ಸಹ ಭೇಟಿ ಮಾಡುವ ಸಂದರ್ಭ ಒದಗಿ ಬಂತು ..ಇನ್ನು ಹಲವು ಜನರಿದ್ದರು ಆದರೆ ಪರಿಚಯದ ಅಭಾವದಿಂದ ಹಾಗು ಯಾರು ಪರಿಚಯ ಮಾಡಿಕೊಡುವವರು ಇಲ್ಲದ್ದರಿಂದ ಅವರ ಇರುವಿಕೆಯನ್ನು ಮಾತ್ರ ನೋಡಲು ಸಾದ್ಯವಾಯಿತು , ಮುಂದೊಮ್ಮೆ ಭೇಟಿಯಾಗುವ ಬರವಸೆಯೊಂದಿಗೆ , ಹಾಗು ಸೇರಿದ ಅತಿಥಿಗಳ ಮಾತು ಹಾಗು ನುಡಿಮುತ್ತುಗಳನ್ನ ಮೆಲಕು ಹಾಕುತ್ತ ನನ್ನ pulsar ಅನ್ನು ಏರಿ ಮನೆಕಡೆಗೆ ಹೊರಟೆ.
ಇದೆಲ್ಲ ನಾನು ಬ್ಲಾಗ್ ಲೋಕಕ್ಕೆ ಬಂದಿದ್ದರಿಂದಲೇ ಸಾಕಾರವಾಯಿತು ಅನ್ನುವುದು ನನ್ನ ಅನಿಸಿಕೆ . ಹೇಗೆ ನಿಮ್ಮೆಲ್ಲರ ಸಹಕಾರ ಇದ್ದರೆ ಒಂದು ದಿನ ಉತ್ತಮ ಬರವಣಿಗೆ ಮಾಡಬಹುದು ಅನ್ನುವುದು ನನ್ನ ಆಶಯ . ಎಲ್ಲರಿಗೂ ನನ್ನ ಅಭಿನಂದನೆಗಳು .