Thursday, October 1, 2009

ದೇವದೂತ

ಗಾಂಧಿ ಜಯಂತಿಯ ಸಂದರ್ಭದಲ್ಲಿ ಶಾಲಾ ದಿನದಲ್ಲಿ ಗೆಳೆಯರೊಂದಿಗೆ ಸೇರಿ ಬರೆದ ಒಂದು ಕವನ.
ಈ ಕವನ ಈಗ ಬಾಲಿಶ ಎನಿಸಬಹುದು ಎಕೆಂದರೆ ಒನ್ದು ಪ್ಯಾರದಿಂದ ಮತ್ತೊಂದಕ್ಕೆ ಲಿಂಕ್ ಸಿಗದು ..
ಆದರು ಶಾಲಾ ದಿನದಲ್ಲಿ ಬರೆದ ಕವನವಾದ್ದರಿಂದ ಯಾವುದೆ ಬದಲಾವಣೆ [ ಕೆಲವು ಶಬ್ದಗಳನ್ನು ಮಾತ್ರ ]
ಮಾಡದೆ ಹಾಗೆಯೇ ಪ್ರಕಟಿಸಿರುವೆ.
=====================================================

ರತ್ನ ಕುಂದಿತು ,ದೀಪ ನಂದಿತು
ಮನೆಯೊಳಗಾಡುತ್ತಿದ್ದ ಕಂದಮ್ಮ
ಕಿಟಾರನೆ ಕಿರುಚಿತು
ಅದೇ ತಾನೆ ಬೆಳಗಿದ ಸ್ವಾತಂತ್ರ್ಯ
ದೀಪದಲಿ ಕೊರತೆ ಕಂಡಿತು
ಬೆಳಗುತ್ತಿದ್ದ ಭಾರತದಲ್ಲಿ ಕತ್ತಲಾವರಿಸಿತು.

ಪೂಜ್ಯ ಬಾಪುಜಿ , ಸತ್ಯತಾವಾದಿ
ಆಕಸ್ಮಿಕವಾಗಿ ಅಗಲಿ
ಮಾಡಿದೆ ದೇಶದ ಜನರನ್ನು ತಬ್ಬಲಿ
ಸಂಚುಕಾರರು ಆ ಆಂಗ್ಲರು
ನಿನ್ನೆದುರಿಗಾದರು ತ್ರುಣ ಸಮಾನರು
ಹೊಡೆದೋಡಿಸಿ ಅವರ ನೀಡಿದೆ ದೇಶಕ್ಕೆ
ಸ್ವಾತಂತ್ರ್ಯ,
ಅರಿಯದೆ ನಡೆದಿತ್ತು ಹಿಂದೆಯೆ ನಿನ್ನ ಕೊಲೆಯ
ತಂತ್ರ.


ಅಂಹಿಸೆಯೇ ನಿನ್ನ ಆಯುಧ
ಕೈಕೋಲೇ ಆ ಪರಶಿವನ ತ್ರಿಶೂಲ
ನಿ ನೇಯ್ದ ಖಾದಿಯೆ ನಿನಗಾಡಂಬರ
ಸರಳ ಜೀವನ ನಿನ್ನ ವ್ಯವಹಾರ
ರಾಮರಾಜ್ಯದ ಕನಸುಗಾರ
ದೇಶಕ್ಕೆ ನೀಡಿದೆ ಹೊಸ ಆಚಾರ
ನಿನ್ನ ಕೊಡುಗೆ ದೇಶಕ್ಕೆ ಅಪಾರ
ಒಟ್ಟಿನಲಿ ನೀನೊಬ್ಬ ದೇವದೂತನ ಅವತಾರ.