Monday, August 23, 2010

ಭೇಟಿ

ನಿನ್ನೆಯ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಬಂದಂತಹ ಎಲ್ಲರೂ ತಮ್ಮ ಬ್ಲೊಗನಲ್ಲಿ ತಮ್ಮ ಅನುಭವಗಳನ್ನು ಬರೆದೆ ಬರೆಯುತ್ತಾರೆ.
ನಾನೇನು ಬೇರೆ ವಿಶೇಷವಾಗಿ ಬರೆಯುತ್ತಿಲ್ಲ ಬಿಡಿ. ಅದೆ ಸುದ್ದಿ ಆದರೆ ಅಪೂರ್ಣ , ಯಾಕಂತೀರ ... ಕಾರಣಾಂತರಗಳಿಂದ ನಾನು ಕಾರ್ಯಕ್ರಮವನ್ನು ಪೂರ್ಣ ನೋಡಲಾಗಲಿಲ್ಲ. ಮನೆಗೆ ನೆಂಟರು ಬಂದಿದ್ದರಿಂದ ಮಡದಿಯ ಕರೆಗೆ ಓಗೊಟ್ಟು ಮಧ್ಯದಲ್ಲೆ ಹೊರಡಬೇಕಾಯ್ತು. ಎಷ್ಟೊಂದು ಕಾರ್ಯಕ್ರಮಗಳು , ಮನರಂಜನೆಗಳು ..ತಪ್ಪಿದವೋ ನಾನರಿಯೆ .. ಇನ್ಯಾರಾದರು ತಮ್ಮ ಬ್ಲೊಗನಲ್ಲಿ ಸಂಪೂರ್ಣ ವರದಿಯನ್ನು ಹಾಕಿದರೆ ಅದನ್ನು ಓದಿ ಬೇಸರಿಸುವ ಸರದಿ ನನ್ನದು. ಆದರೂ ಅಲ್ಲಿ ಇದ್ದಷ್ಟೇ ಸಮಯ ಮಾತ್ರ ಮರೆಯಲಸಾಧ್ಯ.

ಕನ್ನಡ ಭವನ ಹೊಕ್ಕುತ್ತಿದ್ದಂತೆ ಮೊದಲಿಗೆ ಸಿಕ್ಕಿದವರು ಪ್ರಕಾಶಣ್ಣ. ಅವರೇ ನನ್ನನ್ನು ಕರೆದೊಯ್ದು ಸೀತಾರಮ ಸರ್ ಮತ್ತೆ ಸುಮನಾ ಮೇಡಮ್ ಪರಿಚಯಮಾಡಿ ಕೊಟ್ಟರು. ಅಷ್ಟರಲ್ಲೆ ಶಿವಪ್ರಕಾಶ ಕೈ ಮಿಲಾಯಿಸಿ ತಮ್ಮನ್ನು ಪರಿಚಯಿಸಿ ಕೊಂಡರು.ಹಾಗೆಯೆ ನಂಜುಂಡ , ಚೇತನಾ ಭಟ್ಟ ಅವರ ಪರಿಚಯವಾಯಿತು. ಪುಸ್ತಕ ಬಿಡುಗಡೆಯ ಈ ಸಮಯದಲ್ಲೇ ತಾವು ಭಾರತಕ್ಕೆ ಬಂದಿರುವುದು ತುಂಬ ಖುಷಿಯಾಗ್ತ ಇದೆ, ಎಲ್ಲರನ್ನು ಬೇಟಿ ಮಾಡುವ ಅವಕಾಶ ಸಿಕ್ತು ಅಂತ ನಂಜುಂಡರವರು ಹೇಳಿದರು.

ಆಮೇಲೆ ಒಂದಿಷ್ಟು ಹರೆಟೆ .. ಫೊಟೊ .. ಬಿಸಿ ಬಿಸಿ ಕಾಪಿ ...

ಅತ್ತಿತ್ತ ಸುತ್ತುತ್ತ ಪರಿಚಯದ ಮುಖಗಳನ್ನು ಹುಡುಕುತ್ತಿದ್ದಾಗ ಕಂಡಿದ್ದು ಪ್ರಗತಿ ಹೆಗಡೆ ಮತ್ತಿ ದಿಲೀಪ ಹೆಗಡೆ [ ನವ ದಂಪತಿಗಳು] ,ಮದುವೆಗೆ ಹೋಗಿರಲಿಲ್ಲ ಹಾಗಾಗಿ ಇಲ್ಲಿ ಬೇಟಿ ಮಾಡಿ ಶುಭ ಹಾರೈಸುವ ಸಂದರ್ಭ ಒದಗಿ ಬಂತು. ಇಷ್ಟೊತ್ತಾದರು ಕಾರ್ಯಕ್ರಮದ ಮುಖ್ಯ ಮುಖಗಳಾದ ಆಜಾದ ಸರ್ ಹಾಗೂ ಶಿವು ಸರ್ ಕಂಡು ಬರಲಿಲ್ಲ. ಛಲ ಬಿಡದೆ ಹುಡುಕಿ ಕೈ ಮಿಲಾಯಿಸಿ , ಶುಭಾಶಯಗಳನ್ನು ತಿಳಿಸಿ ಹೊರಬಂದರೆ ಎದುರಿಗೆ ಕಂಡಿದ್ದು ವಿ.ಆರ್ ಭಟ್ಟ ಸರ್ ..ಅವರೊಡನೆ ಸ್ವಲ್ಪ ಮಾತುಕಥೆ. ನಂತರ ನಾರಾಯಣ ಭಟ್ಟ , ನಾಗರಾಜ ,ನವೀನ , ಮಲ್ಲಿಕಾರ್ಜುನ ಮತ್ತೂ ಹಲವರ ಮುಖ ಬೇಟಿ ,ಪರಿಚಯವಾಯ್ತು.

ಕಾರ್ಯಕ್ರಮ ಪ್ರಾರಂಭವಾಗುವುದೆಂದು ಒಳಗೆ ಹೋದಾಗ ..ಮೂರ್ತಿ ಸರ್ ಮತ್ತು ನಾರಾಯಣ ಭಟ್ಟ ಅವರು ನನ್ನ ಪಕ್ಕದಲ್ಲೆ ಕುಳಿತರು. ಈ ಅವಕಾಶ ಬಿಡೋದೆ .. ನಾನೆ ಖುದ್ದಾಗಿ ಅವರನ್ನು ಮಾತನಾಡಿಸಿದೆ .. ಪರಿಚಯ ಹೇಳಿಕೊಂಡೆ.. ಮಾತನಾಡಿ ತುಂಬ ಖುಷಿಯಾಯ್ತು .. ಕೆಲವೊಂದು ಅನುಭವದ ಮಾತುಗಳನ್ನು ಹೇಳಿದರು. ಆಮೇಲೆ ದಿನಕರ ಮೊಗೇರ ಅವರನ್ನು ಬೇಟಿ ಮಾಡಲು ಮತ್ತೆ ಹೊರಗಡೆ ಹೋದೆವು. ಪತ್ನಿ ಸಮೇತರಾಗಿ ಆಗಮಿಸಿದ ದಿನಕರ ಅವರ ಬಳಿ ಸಾಗಿ ಕುಶಲೋಪಚರಿಗಳಾದ ಮೇಲೆ ನನ್ನ ಮತ್ತು ಭಟ್ಕಳದ ಬಾಂಧವ್ಯದ ನೆನಪುಗಳನ್ನು ಮಾತಾಡಿ ತಾಜಾ ಮಾಡಿಕೊಂಡೆ.

ಮತ್ತೆ ಒಳ ಬರುವಷ್ಟರಲ್ಲಿ ನಾವು ಮೊದಲು ಕುಳಿತ ಸ್ಥಳವನ್ನಾಗಲೇ ಬೇರೆಯವರು ಆಕ್ರಮಿಸಿದ್ದರು . ಸಭಾಂಗಣ ತುಂಬಿ ಹೋಗಿತ್ತು , ಜನಗಳು ಇನ್ನು ಬರುತ್ತಲೇ ಇದ್ದರು.ಅಲ್ಲೆ ಒಂದು ಸ್ಥಳ ಹುಡುಕಿ ಕುಳಿತೆ. ಎದುರಿಗೆ ಕಂಡಿದ್ದು ಸುಶ್ರುತ ಮತ್ತು ಗೌತಮ್ ..ಅವರನ್ನು ಮಾತನಾಡಿಸುವಷ್ಟರಲ್ಲಿ ಕಾರ್ಯಕ್ರಮ ಪ್ರಾರಂಭವಾಗಿತ್ತು ..ನನ್ನ ಕ್ಯಾಮರಾಕ್ಕೆ ಸ್ವಲ್ಪ ಕೆಲಸ ಕೊಡೋಣವೆಂದು ನಾನು ಸ್ಟೆಜ ಹತ್ತಿರ ಹೋದೆ .. ಅಲ್ಲಿ ಬಾಲು ಸರ್ ಮತ್ತು ಪ್ರವೀಣರವರ ಬೇಟಿ ಆಯಿತು.

ಒಂದೆರಡು ಫೊಟೊ ಕ್ಲಿಕ್ಕಿಸಿದೆ .. ವಾಣಿ ಕೂಗತೊಡಗಿತ್ತು ...ಮನೆಗೆ ಬರುವಂತೆ ಕರೆ ಬಂದಿತ್ತು ...ಇನ್ನು ಹಲವರನ್ನು ಬೇಟಿ ಮಾಡುವುದಿತ್ತು ... ಕಾರ್ಯಕ್ರಮವನ್ನು ಬಿಟ್ಟು ಮನೆಯ ಕಡೆ ಹೊರಟಿದ್ದೆ ... ಮುಂದಿನ ಬಾರಿ ಸ್ವಲ್ಪ ಸಮಯ ಇಟ್ಟು ಕೊಂಡು ಬಂದು ಎಲ್ಲರ ಪರಿಚಯ ಮಾಡಿಕೊಳ್ಳಬೇಕು.

ಹೊರಡುವ ಮುನ್ನ ಪುಸ್ತಕವನ್ನು ಕೊಳ್ಳುವುದನ್ನು ಮರೆಯಲಿಲ್ಲ. ಅಷ್ಟೆ ಅಲ್ಲ ಪ್ರವೀಣ ಅವರ ಸಹಾಯದಿಂದ ಲೇಖಕರ ಹಸ್ತಾಕ್ಷರ ಸಹ ಪಡೆದು ಕೊಂಡೆ ನಾನು ಹೊರ‍ಟಿದ್ದು.ಬಂದಿದ್ದಕ್ಕೆ ಇಷ್ಟಾದರು ಸಂತೋಷ ಪಡುವಂತಾಯಿತು.

ಫೊಟೊಗಳನ್ನು ಇನ್ನು ಕಂಪ್ಯೂಟರ್ ಗೆ ಟ್ರಾನ್ಸ್ಪರ ಮಾಡಲಾಗದ್ದರಿಂದ ಇಲ್ಲಿ ಹಾಕುತ್ತಿಲ್ಲ ,,ಸಾಧ್ಯವಾದಲ್ಲಿ ಇಂದು ಸಂಜೆಯೆ ಅಪ್ಲೋಡ್ ಮಾಡುತ್ತೇನೆ.

12 comments:

sunaath said...

ಪ್ರಗತಿ ಹೆಗಡೆ ಹಾಗು ದಿಲೀಪ ಹೆಗಡೆಯವರ ಮದುವೆಯಾದದ್ದು ಈಗ ನಿಮ್ಮ ಮೂಲಕ ತಿಳಿದಂತಾಯ್ತು. ನಿಮ್ಮ blog ಮೂಲಕವೇ ಅವರಿಗೆ ಶುಭಾಶಯಗಳನ್ನು ಹೇಳುತ್ತೇನೆ.

ಶಿವಶಂಕರ ವಿಷ್ಣು ಯಳವತ್ತಿ said...

naanu kooda allige bandidde.. gottaytha sir?

inti
yalavathi

www.shivagadag.blogspot.com

shivu.k said...

ಶ್ರೀಧರ್ ಸರ್,

ನೀವು ಬೇಗ ಹೊರಟ ಮೇಲೆ ನಡೆದ fun ಗಳನ್ನು ಬ್ಲಾಗಿನಲ್ಲಿ ಹಾಕಿದ್ದೇನೆ. ನೋಡಿನಗಲು ಬನ್ನಿ.

ಸಾಗರದಾಚೆಯ ಇಂಚರ said...

ನೀವೆಲ್ಲರೂ ಬ್ಲಾಗ್ ನಲ್ಲಿ ಬರೆದದ್ದು ಓದಿ ನಂಗೆ ಕಾರ್ಯಕ್ರಮಕ್ಕೆ ಹೋದಂತೆ ಆಯಿತು

ತಿಳಿಸಿದ್ದಕ್ಕೆ ಧನ್ಯವಾದಗಳು

Shweta said...

naanu miss madikonde due to an emergency..Urge hogidde:(..innu Bangaore serilla....

Raghu said...

ತುಂಬಾ ಅಪರೂಪದ ಭೇಟಿ. ಒಳ್ಳೆಯ ಅನುಭವ..
ನಿಮ್ಮವ,
ರಾಘು.

ಸೀತಾರಾಮ. ಕೆ. / SITARAM.K said...

ಆದರೂ ಸಾಕಷ್ಟು ಪಾಲ್ಗೊಂಡಿದ್ದಿರಲ್ಲಾ...ಇನ್ನೂ ಇದ್ದಿದ್ದರೆ ಚೆನ್ನಾಗಿತು... ಎಲ್ಲರ ಬ್ಲಾಗ್ ಓದಿ.. ಮಜಾ ಮಾಡಿ...

ದಿನಕರ ಮೊಗೇರ.. said...

sir, nimmannu bheTi aagi tumbaa tumbaa khushi aagittu..... bhatkalakke sambhanda nimage iddiddu, haleya nenapugaLannu taajaa maaDitu.....

nivu hoda nantaraddu bereye loka..... antu nimmannellaa bheti aagi sakkat khushi aaytu...

nimma blog update nanage bandiralilla....

shridhar said...

ನಿಜ ಇದ್ದಷ್ಟೇ ಹೊತ್ತು ಸಂತೋಷ ಪಟ್ಟಿದ್ದೇನೆ .. ಇನ್ನು ಅಲ್ಲೇ ಇದ್ದಿದ್ದರೆ ಅದರ ಸಂತೋಷವೇ ಬೇರೆ ಇರುತ್ತಿತ್ತೇನೊ ..

ಪ್ರತಿಕ್ರಿಯಿಸಿದ ಎಲ್ಲರಿಗೂ ವಂದನೆಗಳು.

shridhar said...

ಬೆರೆಯವರ ಬ್ಲೊಗನಲ್ಲಿನ ಲೇಖನ, ಫೋಟೊಸ್ ನೋಡಿ ಖುಶಿ ಪಟ್ಟಿದ್ದೇನೆ .. ನನ್ನ ಹತ್ತಿರವು ಕೆಲವು ಫೋಟೊ ಇದೆ ..
ಒಟ್ಟಿನಲ್ಲಿ ಎಲ್ಲರನ್ನೂ ಒಂದೆಡೆ ನೋಡಿ ಬಹಳ ಖುಶಿ ಆಗಿತ್ತು ..

ಶಿವಪ್ರಕಾಶ್ said...

neevu book release aadamele irabekittu.. we had lot of fun.. :)

Anonymous said...

naanu poorti kaaryakrama aaguva varegu irlillaa...so dont worry.. u hav company :P

bheti aagiddu tumbaa khushi aaytu.. heege anubandha munduvareeli!