Tuesday, July 6, 2010

ಆತ್ಮ ಶುದ್ಧಿ

ತುಂಬ ಬೇಸರವಾದಾಗ ಅಥವ ಮನಸ್ಸಿಗೆ ಎನೋ ಹೊಸತನ ಬೇಕೆನಿಸಿದಾಗ .. ನಾನು ಕೆಲವೊಮ್ಮೆ ಮೊರೆ ಹೋಗುವುದು ಕನ್ನಡ ಪುಸ್ತಕಗಳೆಡೆಗೆ .ಹಲವು ಬಾರಿ ಡಿ.ವಿ.ಜಿ ಯವರ ಕಗ್ಗಕ್ಕೆ. ಅದೆನೋ ಡಿ.ವಿ.ಜಿ ಯವರ ಕಗ್ಗ ಓದುವುದೆಂದರೆ ನನಗೆ ಭಲು ಇಷ್ಟ. ಒಂದು ಕಗ್ಗವನ್ನು ಓದಿ , ಅರ್ಥವನ್ನು ಕಲ್ಪಿಸಿಕೊಂಡು [ ಪ್ರತಿಯೊಂದು ಕಗ್ಗದ ಭವಾರ್ಥವಿರುವ ಪುಸ್ತಕ ಕೂಡ ಇದೆ ] , ಈಗಿನ ದಿನಕ್ಕೆ ಕಗ್ಗದ ಭಾವವನು ಹೊಂದಿಸಿ ಮುದ ಹೊಂದುತ್ತಿರುತ್ತೇನೆ. ಕಗ್ಗದ ಭಾವಗಳು ಚಿರಸತ್ಯ ಮತ್ತು ನಿತ್ಯ ಸ್ಮರಣೀಯ.

ಮೊನ್ನೆ ಹೀಗೊಂದು ಘಟನೆ ನಡೆಯಿತು. ಕೆಲಸದಿಂದ ಬರುವಾಗ ಎನೋ ಒಂದು ತರದ ಕಳವಳ. ಕೆಲಸದ ಒತ್ತಡದಿಂದ ಹೀಗಾಯ್ತೊ ಅಥವ ಮತ್ತೆನೋ ಕಾರಣವೊ ನನಗೆ ತಿಳಿಯದಾಗಿತ್ತು ... ಮನೆಗೆ ಬಂದು ಕೈ ಕಾಲು ಮುಖ ತೊಳೆದು ಹೆಂಡತಿ ಕೊಟ್ಟ ಬಿಸಿ ಬಿಸಿ ಚಹದೊಂದಿಗೆ ಊರಿನಿಂದ ತಂದ ಹಲಸಿನಕಾಯಿ ಸಂಡಿಗೆಯನ್ನು ಮುಗಿಸಿ , ಮಡದಿಯೊಂದಿಗೆ ಒಂದಿಷ್ಟು ಹೊತ್ತು ಹರಟೆ ಹೊಡೆದರು ಮನಸ್ಸಿಗೆ ಸಮಾಧಾನವಾಗಲಿಲ್ಲ.ನಿಜವೆಂದರೆ ಸರಿಯಾಗಿ ಮಾತನಾಡಲೂ ಇಲ್ಲ. ಸುಮ್ಮನೆ ಅತ್ತ ಇತ್ತ ತಿರುಗಾಡಿದೆ .. ಸ್ವಲ್ಪ ಹೊತ್ತು ಹಾಡು ಕೇಳಿದೆ .. ಉಹ್ಮ್ ..ಎನೂ ಪ್ರಯೋಜನ ಇಲ್ಲ .. ಹೆಂಡತಿ ಅಡಿಗೆ ತಯಾರಿ ನಡೆಸಿದ್ದಾಳೆ .. ಸುಮ್ಮನೆ ಅವಳನ್ನು ಕರೆಯೋದು ಬೇಡ ಅಂತಾ ನನ್ನ ಲ್ಯಾಪಟೊಪ್ ಒನ್ ಮಾಡಿ ಇಂಟೆರ್ನೆಟನಲ್ಲಿ ಬ್ಲೊಗ್ ಓದ ತೊಡಗಿದೆ, ಬ್ಲೊಗ್ ಓದಲೂ ಸಹ ಮನಸಾಗಲಿಲ್ಲ .. ಇಮೇಲ್ ನೋಡೋಣವೆಂದು ನನ್ನ ಜಿಮೇಲ್ ತಾಣಕ್ಕೆ ಹೋದೆ. ಅಲ್ಲಿ ಡಿವಿಜಿಯವರ ಕಗ್ಗವೊಂದನ್ನು ಮಿತ್ರ ಪೊಸ್ಟ್ ಮಾಡಿದ್ದ. ಕಗ್ಗವನ್ನು ಓದದೆ ಬಹಳ ದಿನವೇ ಆಗಿ ಹೋಗಿತ್ತು .. ಅದಲ್ಲದೆ ಬೇರೆ ಪುಸ್ತಕಗನ್ನೂ ಸಹ ಓದಿರಲಿಲ್ಲ [ಕೆಲಸದ ಡೊಕ್ಯುಮೆಂಟಗಳನ್ನು ಹೊರತು ಪಡಿಸಿ] , ನನ್ನ ಕನ್ನಡ ಕೃಷಿಗೂ ನೀರೆರೆದಿರಲಿಲ್ಲ , ಆ ಮಿಂಚಂಚೆಯನ್ನು ತೆಗೆದು ನೋಡಿದೆ .. ಈ ಕೆಳಗಿನ ಕಗ್ಗ ಅಲ್ಲಿತ್ತು ,

ಅಂತಾನು ಮಿಂತಾನುಮೆಂತೊ ನಿನಗಾದಂತೆ |
ಶಾಂತಿಯನು ನೀನರಸು ಮನ ಕೆರಳಿದಂದು ||
ಸಂತವಿಡುತೊಮ್ಮೆ ಶಿಕ್ಷಿಸುತೊಮ್ಮೆ ಶಿಶುವೆಂದು |
ಸ್ವಾಂತಮಂ ತಿದ್ದುತಿರು - ಮಂಕುತಿಮ್ಮ ||

ಅರ್ಥ ನಾನು ಕಲ್ಪಿಸಿದಂತೆ :
ಯಾವಾಗಾದರು , ಹೇಗಾದರು ಸರಿ . ನಿನ್ನ ಮಿತಿಯೊಳಗೆ ನಿನಗನಿಸಿದಂತೆ ,|
ಮನಸ್ಸಿಗೆ ಬೆಸರವಾದಾಗ , ಕಳವಳಗೊಂಡಾಗ, ಕೋಪಗೂಂಡಾಗ ನೀ ನಡೆ ಶಾಂತಿ , ನೆಮ್ಮದಿಯಡೆಗೆ.||
ಕೆರಳಿದಮನಕ್ಕೆ ಕೆಲವೊಮ್ಮೆ ಸಾಂತ್ವನವ ನೀಡು , ತಿಳಿಗೊಳಿಸು . ಕೆಲವೂಮ್ಮೆ ಮಗುವನ್ನು ದಾರಿ ತಪ್ಪದಂತೆ
ತಿದ್ದುವಂತೆ ಮನವನ್ನು ತಿದ್ದು , ಶಿಕ್ಷಿಸು |
ನಿನ್ನನ್ನು ನಿನ್ನ ಆತ್ಮವನ್ನು ತಿದ್ದುತಿರು , ಹೊಸತನವ ಕಲಿಸುತ್ತಿರು , ಎಂದೆಂದು ಉನ್ನತಿಯನ್ನು ಹೊಂದು||

ಅಂದರೆ .. ಏಷ್ಟೆ ಬೇಸರವಾಗಲಿ , ಕೋಪವೇ ಬಂದಿರಲಿ ಅದನ್ನು ಹಿಡಿದಿಟ್ಟು , ಬದಿಗೊತ್ತಿ ,ಮುನ್ನಡೆಯುವ ಸೂತ್ರ ನಿನ್ನ ಕೈಯಲ್ಲೆ ಇದೆ .. ಅದನ್ನು ಸೂಕ್ತವಾಗಿ ಬಳಸುವುದನ್ನು ಕಲಿ, ಸರಿಯಾದ ರೀತಿಯಲ್ಲಿ ಪಳಗಿಸುವುದನ್ನು ಅರಿತುಕೊ .. ನಿನ್ನ ಆತ್ಮೋದ್ದಾರಕ್ಕೆ ನೀನೆ ಹೋಣೆ , ಮರ್ಕಟ ಮನಸ್ಸನ್ನು ಹತೋಟಿಗೆ ತರುವ ದಾರಿಯನ್ನು ನೀನೆ ಕಲಿ ಎಂಬರ್ಥವನ್ನು ಡಿ.ವಿ.ಜಿ ಯವರು ಇಲ್ಲಿ ಹೇಳ ಭಯಸುತ್ತಿರ ಬಹುದೇ ಎಂದು ನನಗನಿಸಿತು. ಕಗ್ಗವನ್ನು ಸಂಪೂರ್ಣವಾಗಿ ಮತ್ತೂಮ್ಮೆ ಓದಿ .. ಮನಸ್ಸಿಗನಿಸಿದ ಅರ್ಥವನ್ನು ಬರೆದಿಟ್ಟುಕೊಂಡೆ .

ಮಿಂಚಂಚೆಯನ್ನು ಮುಚ್ಚಿ ಒಮ್ಮೆ ಜೋರಾಗಿ ಉಸಿರೆಳೆದು , ಬಾಗಿಲು ತೆರೆದು ಹೊರಗೆ ಬಂದು ನಿಂತೆ. ಕಪ್ಪು ಮೋಡ , ತುಂತುರು ಮಳೆಯಾಗುತ್ತಿತ್ತು, ಪಶ್ಚಿಮದ ಗಾಳಿ ಸ್ವಲ್ಪ ಜೋರಾಗಿಯೆ ಬರುತ್ತಿತ್ತು ಮೈ ಮನಸ್ಸಿಗೆ ಒಂದು ತರಹದ ಉಲ್ಲಾಸವಾಯಿತು. ಬೇಸರ ಮಾಯವಾದಂತೆ ಇತ್ತು. ಹೇಗಿದ್ದರು ವಾರಾಂತ್ಯ , ಜೊತೆಗೆ ಭಾರತ ಭಂದ್
ಸಾಧ್ಯತೆ ಇದೆ ಅಂದಮೇಲೆ ಮೂರು ದಿನದ ರಜೆ ಕಟ್ಟಿಟ್ಟಿದ್ದು . ಯಾವುದಾದರು ಪುಸ್ತಕ ಓದೆ ತೀರುವುದು ಎಂದು ನಿರ್ಧಾರ ಮಾಡಿದೆ. ಬರಿ ಕಥೆ , ಕಾದಂಬರಿಯೊಂದೆ ಅಲ್ಲ ,ಕೆಲಸಕ್ಕೆ ಸಂಬಂಧ ಪಟ್ಟ ಪುಸ್ತಕವಾದರು ಸರಿ , ಕನ್ನಡ , ಇಂಗ್ಲಿಷ ಯಾವುದಾದರು ಸರಿ ಒಟ್ಟಿನಲ್ಲಿ ಓದ ಬೇಕು ಅಷ್ಟೆ . ನಿರ್ಧಾರ ದೃಡವಾಗಿತ್ತು.ಕಪಾಟು ಹುಡುಕಿದಾಗ ಸಿಕ್ಕಿದ್ದು ಯಾವಾಗಲೊಮ್ಮೆ ಪುಸ್ತಕ ಮಳಿಗೆಗೆ ಹೋದಾಗ ತಂದ ಅಥವಾ ಮಿತ್ರರಿಂದ ಯೆರವಲು ಪಡೆದ ಕೆಲವು ಇನ್ನು ಓದಿರದ ಕನ್ನಡ ಪುಸ್ತಕಗಳು.ಓದಿರದ ಪುಸ್ತಕ ಕಂಡಾಗ ಬಿಡುವುದಾದರು ಹೇಗೆ , ಅಲ್ಲವೇ ಮತ್ತೆ .. !!!!

ನಾನೀಗ ಓದುತ್ತಿರುವ ಪುಸ್ತಕಗಳು ,
೧. ಚೇಳು -- ವಸುಧೇಂದ್ರ

೨. ಯುಗಾದಿ -- ವಸುಧೇಂದ್ರ


ವಿಸೂ: ಕಗ್ಗದ ಅರ್ಥ ಕೇವಲ ನನ್ನ ವಾಖ್ಯಾನ , ಬೇರೆಯ ರೀತಿಯಲ್ಲೂ ಅರ್ಥಗಳು ಇರಬಹುದು , ಎಕೆಂದರೆ ಕಗ್ಗದ ಮಹಿಮೆಯೆ ಅದು. ಹಾಗೇನಾದರು ಇದ್ದಲ್ಲಿ , ತಿಳಿದಲ್ಲಿ ದಯವಿಟ್ಟು ಕಮೆಂಟಿನಲ್ಲಿ ತಿಳಿಸಿ . ಎನಾದರು ತಪ್ಪಿದ್ದರೆ ತಿದ್ದಿ ...

32 comments:

Raghu said...

ಕಗ್ಗ ತುಂಬಾ ಚೆನ್ನಾಗಿದೆ. ಡಿ.ವಿ.ಜಿ ಸ್ಪೆಷಲ್..!
ನಿಮ್ಮವ,
ರಾಘು.

Subrahmanya said...

ಕಗ್ಗದ ತಾತ್ಪರ್ಯವನ್ನು ಬಹಳ ಚೆನ್ನಾಗಿ ಅರ್ಥೈಸಿದ್ದೀರಿ. ಮೂಲದಲ್ಲೂ ಇದಕ್ಕಿಂತ ಭಿನ್ನವಾದುದೇನಿಲ್ಲ.
ಮನಶ್ಯಾಂತಿಯನ್ನು ಎಲ್ಲಿಯೋ ಹುಡುಕಿ ಹೊರಟರೆ ಏನು ಪ್ರಯೋಜನ ? ಅದು ಮನಸ್ಸಿನಲ್ಲೇ ಆವೀರ್ಭವಿಸಬೇಕಲ್ಲವೆ.

ನಿಮ್ಮ ಲೇಖನ ಚೆನ್ನಾಗಿದೆ.

ಈ ಕಗ್ಗದ ಅರ್ಥಕ್ಕೆ ಸರಿಸಮಾನವಾದ ಕಾದಂಬರಿಯನ್ನು ಶ್ರೀ ಎಸ್.ಎಲ್.ಭೈರಪ್ಪ ಬರೆದಿದ್ದಾರೆ. ಹೆಸರು "ನಿರಾಕರಣ". ನೀವು ಓದಿರುತ್ತೀರಿ ಎಂದಂದುಕೊಂಡಿದ್ದೇನೆ. ಇಲ್ಲವಾದರೆ ಒಮ್ಮೆ ಓದಿ ಎಂದು ಕೋರುತ್ತೇನೆ

ಧನ್ಯವಾದಗಳು.

ಚುಕ್ಕಿಚಿತ್ತಾರ said...

channaagide.. kaggada bagegina vivarane...manassige kalavalavaadaaga kagga nijakkoo samaadhaana koduva thaayiyantadu....

shridhar said...

ರಾಘು,
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. ನಿಜ ಕಗ್ಗ ಹಾಗೂ ಡಿ.ವಿ.ಜಿ, ಎಂದೆಂದಿಗೂ ಸ್ಪೆಷಲ್ ..

shridhar said...

ಸುಬ್ರಮಣ್ಯ ಸರ್,
ನಿಜ ಮನಶ್ಯಾಂತಿ ಎಲ್ಲೆಲ್ಲೊ ಹುಡುಕಿದರೆ ಪ್ರಯೋಜನವಿಲ್ಲ .. ಅದು ನಮ್ಮೋಳಗೆ ಇದೆ ..
ಸರಿಯಾಗಿ ಪರೋಕ್ಷಿಸಬೇಕಷ್ಟೆ.
ಎಸ್.ಎಲ್.ಭೈರಪ್ಪನವರ ನಿರಾಕಾರಣ ಈಗಾಗಲೆ ಓದಿದ್ದೇನೆ. ಚೆನ್ನಾಗಿದೆ. ಮನಸ್ಸಿನ ತೊಳಲಾಟದಿಂದ ಕಥಾನಾಯಾಕ ತೆಗೆದು
ಕೊಳ್ಳುವ ನಿರ್ಧಾರಗಳನ್ನು ಉತ್ತಮವಾಗಿ ನಿರ‍ೂಪಿಸಿದ್ದಾರೆ.

ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

shridhar said...

ವಿಜಯಶ್ರೀಯವರೆ ,
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. ನಿಜ ಕಗ್ಗ ಬೇಸರಗೊಂಡ ಮನಕ್ಕೆ ಒಂದು ತರಹದ ಸಾಂತ್ವನ ನೀಡುತ್ತದೆ.

ಸಾಗರದಾಚೆಯ ಇಂಚರ said...

ಮಂಕುತಿಮ್ಮನ ಕಗ್ಗ ನನ್ನ ಇಷ್ಟದ ಪುಸ್ತಕಗಳಲ್ಲೊಂದು

shridhar said...

ಗುರು ಸರ್,
ಕಗ್ಗವನ್ನು ಇಷ್ಟ ಪಡದವರ ನಾ ಕಾಣೆ ...
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

ಸೀತಾರಾಮ. ಕೆ. / SITARAM.K said...

ಕಗ್ಗದ ಅರ್ಥವನ್ನ ಅರ್ಥವತ್ತಾಗೆ ಮಾಡಿದ್ದಿರಾ...!

shridhar said...

ಸೀತಾರಮ ಸರ್,
ಆ ದಿನ ಮನಸ್ಸು ಕೆರಳಿದಂತಾಗಿತ್ತು .. ಹಾಗು ಮಿಂಚಂಚೆಯಲ್ಲಿ ಈ ಕಗ್ಗ ಬಂದಿತ್ತು ..
ಕಾಕತಾಳೀಯವೇ ಸರಿ .. ಆದರು ಮನಸ್ಸು ಹಗುರವಾದದ್ದಂತು ನಿಜ.

ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

ಜಲನಯನ said...

ಕಗ್ಗ - ಮಂಕುತಿಮ್ಮ...ಬಿಡಿಸಲಾಗದ ಜೊತೆ...ಚನ್ನಾಗಿದೆ ವಿವರಣೆ...

ವಿ.ಆರ್.ಭಟ್ said...

ಕಗ್ಗ ಗೀತೆ ಇದ್ದಹಾಗೇ! ಅದರ ಆಳ-ಅಗಲ ಬಹಳ, ಮೊಗೆದಷ್ಟೂ ಮತ್ತೆ ಒಸರುವ ಸಿಹಿನೀರಿನ ಬುಗ್ಗೆ ! ಧನ್ಯವಾದ

Snow White said...

kagga tumba chennagide sir :) :)

shridhar said...

ಆಜಾದ್ ಭಯ್ಯ ..
ನಿಜ , ಕಗ್ಗ ಮತ್ತು ಮಂಕುತಿಮ್ಮ ಬಿಡಸಲಾಗದ ನಂಟು.
ನಿಮ್ಮ ಪ್ರೋತ್ಸಾಹ ನುಡಿಗೆ ಧನ್ಯವಾದಗಳು.

shridhar said...

ವಿ.ಆರ್. ಭಟ್ರೆ ,
ಕಗ್ಗದ ಆಳಕ್ಕೆ ಇಳಿಯುವುದೆಂದರೆ ಮೋಕ್ಷ ದೊರೆತಂತೆ ಎನ್ನುವುದು ನನ್ನ ಅನಿಸಿಕೆ.
ನಿಮ್ಮ ಅನಿಸಿಕೆ ಮತ್ತು ಸ್ಪಂದನಕ್ಕೆ ಧನ್ಯವಾದಗಳು.

shridhar said...

ಸ್ನೋ ವೈಟ್,
ಪ್ರತಿಕ್ರಿಯೆಗೆ ಧನ್ಯವಾದಗಳು,

!! ಜ್ಞಾನಾರ್ಪಣಾಮಸ್ತು !! said...

shridhar ,
ಭಟ್ಟರು ಹೇಳಿದಂತೆ..ಕಗ್ಗ ಮೊಗೆದಷ್ಟೂ ಮತ್ತೆ ಒಸರುವ ಸಿಹಿನೀರಿನ ಬುಗ್ಗೆಯಂತೆಯೇ ಸರಿ..
ಚೆನ್ನಾಗಿದೆ..

ಮನಸು said...

ಕಗ್ಗದ ವಿವರ ಚೆನ್ನಾಗಿ ತಿಳಿಸಿದ್ದೀರಿ.... ವಸುಧೇಂದ್ರ ಅವರ ಚೇಳು ಮತ್ತು ಯುಗಾದಿ ಓದಿ ತುಂಬಾ ಚೆನ್ನಾಗಿದೆ. ನಾನು ನೆನ್ನೆಯಷ್ಟೆ ಎರಡೂ ಪುಸ್ತಕಗಳನ್ನು ೨ನೇ ಬಾರಿ ಓದಿದೆ....ಜೊತೆಗೆ ಹಂಪಿ ಎಕ್ಸ್ ಪ್ರೆಸ್, ಮಿಥುನವನ್ನು ಮತ್ತೊಮ್ಮೆ ಓದಿದೆ.........

sunaath said...

ಶ್ರೀಧರ,
ನಿಮ್ಮ ಲೇಖನದಲ್ಲಿ ತಿಳಿಸಿರುವ ನಿಮ್ಮ ದಿನಚರಿ ಮೆಚ್ಚುಗೆಯಾಯ್ತು. ಮನೋಲ್ಲಾಸಕ್ಕಾಗಿ/ಮನ:ಶಾಂತಿಗಾಗಿ
‘ಮಂಕು ತಿಮ್ಮನ ಕಗ್ಗ’ ಅಥವಾ ನಮ್ಮ ಇತರ ಹಿರಿಯ ಸಾಹಿತಿಗಳ ಸಾಹಿತ್ಯವು ಯೋಗ್ಯವಾದ tonic ಆಗಿದೆ!
ವಸುಧೇಂದ್ರರ ಈ ಕಥಾಸಂಕಲನಗಳು ಚೆನ್ನಾಗಿವೆ. ದಯವಿಟ್ಟು
ಅವುಗಳನ್ನು ಓದಿರಿ.

shridhar said...

ಕಾಕಾ,
ನಿಮ್ಮ ಪ್ರೋತ್ಸಾಹದ ನುಡಿಗಳಿಗೆ ಧನ್ಯವಾದಗಳು.
ನಿಜ ಹಿರಿಯ ಸಾಹಿತಿಗಳ ಬರಹಗಳು ಮನಸ್ಸಿಗೆ ಮುದ ನೀಡುತ್ತವೆ.
ಈಗೀನ ಕೆಲವೊಂದು ಸಾಹಿತ್ಯಗಳು ಸುಂದರವಾಗಿ ಕಂಡು ಬರುತ್ತವೆ.
ಆದರೆ ಹುಡುಕ ಬೇಕಷ್ಟೆ.

ಹ್ಮ್ ವಸುದೇಂದ್ರರ ಪುಸ್ತಕಗಳು ಇಷ್ಟವಾದವು.
ಅವರದೇ ಇನ್ನು ಮೂರು ಪುಸ್ತಕ ತಂದಿದ್ದೇನೆ.

Dileep Hegde said...

ನಿಜ.. ಕಗ್ಗವನ್ನ ಇಷ್ಟ ಪಡದವರು ಯಾರೂ ಇಲ್ಲ...
ಮತ್ತೆ ವಸುದೇಂದ್ರರ ಪುಸ್ತಕಗಳೂ ಚೆನ್ನಾಗಿರ್ತವೆ.. ನಾನು ಈಗಷ್ಟೇ ರಕ್ಷಕ ಅನಾಥ ಓದಿ ಮುಗಿಸಿದೆ.. ತುಂಬಾ ಇಷ್ಟವಾಯ್ತು...

shridhar said...

ದಿಲೀಪ ,
ಕಗ್ಗಕ್ಕೆ ಕಗ್ಗವೇ ಸರಿ ಸಾಟಿ.
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.
ನಾನು ಈಗಾಗಲೆ ವಸುಧೇಂದ್ರರ ಚೇಳು ಮುಗಿಸಿದ್ದೇನೆ.
ಈಗ ಯುಗಾದಿ ಕೈಗೆತ್ತಿ ಕೊಂಡಿದ್ದೇನೆ.

Dr.D.T.K.Murthy. said...

ಶ್ರೀಧರ್;ನೀವು ನನ್ನ ಬ್ಲಾಗಿನಲ್ಲಿ ಮಾಡಿದ ಕಾಮೆಂಟ್ಸ್ ತುಂಬಾ ಇಷ್ಟವಾಯ್ತು.ಮಂಕುತಿಮ್ಮನ ಕಗ್ಗ ಬಹಳ ಇಷ್ಟ.ವಸುಧೇಂದ್ರರ ಸುಮಾರು ಕೃತಿಗಳನ್ನೂ ಓದಿದ್ದೇನೆ.ಧನ್ಯವಾದಗಳು.

Deepasmitha said...

ವಸುಧೇಂದ್ರ ಅವರ ಕಥೆಗಳು ಚೆನ್ನಾಗಿರುತ್ತವೆ

Sri said...

ಭಟ್ಟ,
ಕಗ್ಗದ ಅರ್ಥ ಚೆನ್ನಾಗಿ ವಿವರಿಸಿದ್ಯ ಮಗ.

ಒಂದು ಕೃತಿ, ಅದು ರಚನೆ ಯಾಗುವವರೆಗೆ ಮಾತ್ರ ವಿರಚಕರದ್ದು
ಆನಂತರ ಓದುಗ, ವಿಮರ್ಶಕರ ಕಲ್ಪನೆ, ವಿವರಣೆ ಗಳಿಂದ ಅನಂತವಾಗುತ್ತ ಹೋಗುತ್ತದೆ

ಅದರಲ್ಲಿಯೂ ಮಂಕುತಿಮ್ಮನ ಕಗ್ಗದಂತಹ ಅನರ್ಘ್ಯ ರತ್ನಕ್ಕೆ ಕೊನೆಯೇ ಇಲ್ಲ
ಪ್ರತಿಯೋಮ್ಮೆ ಹೆಕ್ಕಿ ನೋಡಿದರೆ ಪ್ರತಿಯೊಂದು ಕಗ್ಗಕ್ಕೂ ಹೊಸದೊಂದು ಆಯಾಮ, ಹೊಸ ಅರ್ಥ ಹೊಸ ಮಜುಳು ಸಿಗುತ್ತದೆ

ಅದೇ ಕಗ್ಗದ ವಿಶೇಷ :)

shridhar said...

ಡಿಟಿಕೆಮೂರ್ತಿ ಸರ್,
ನನ್ನ ಬ್ಲೊಗಗೆ ಸ್ವಾಗತ.
ನಿಮ್ಮ ಪ್ರೋತ್ಸಾಹದ ನುಡಿಗಳಿಗೆ ಧನ್ಯಾವಾದಗಳು.
ನಿಮ್ಮ ಬ್ಲೊಗನಲ್ಲಿ ನಾನು ಕೊಟ್ಟ ಶೀರ್ಷಿಕೆ ಇಷ್ಟಪಟ್ಟು ಬಳಸಿಕೊಂಡಿದ್ದಕ್ಕೆ
ಧನ್ಯವಾದಗಳು.

shridhar said...

ದೀಪಸ್ಮಿತಾ,
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

shridhar said...

ಶ್ರೀಧರ,
ನನ್ನ ಬ್ಲೊಗಗೆ ಸ್ವಾಗತ.
ನಿಜ ಕಗ್ಗದ ಆಳವನ್ನು ಅಳೆಯುವುದು ಅಸಾಧ್ಯವೇ ...
ಹುಡುಕಿದಷ್ಟು ಸಿಗುವ ಜ್ನಾನ ಭಂಡಾರ ಅದು.

ಸಿಮೆಂಟು ಮರಳಿನ ಮಧ್ಯೆ said...

ಶ್ರೀಧರ್...

ಮಂಕುತಿಮ್ಮನ ಕಗ್ಗ ಒಂದು ಧರ್ಮ ಗ್ರಂಥದ ಹಾಗೆ..
ಓದಿಷ್ಟು..
ತಿಳಿದುಕೊಂಡಷ್ಟೂ... ಮತ್ತಷ್ಟು ಅರ್ಥ ಬರುತ್ತಾ ಇರುತ್ತದೆ...
ನಮ್ಮ ಅನುಭವಗಳ/ತಿಳುವಳಿಕೆಗೆಗಳ ಮಟ್ಟಕ್ಕೆ ಅನುಗುಣವಾಗಿ... ಅಲ್ಲವೆ?

ಅಭಿನಂದನೆಗಳು...

shridhar said...

ಪ್ರಕಾಶಣ್ಣ,
ನಿಜ ಕಗ್ಗ ಪ್ರತಿಯೊಬ್ಬರ ಅನುಭವಕ್ಕೆ ತಕ್ಕಂತ ಅರ್ಥವನ್ನು ಕೊಡುವ ಸಾಮರ್ಥ್ಯ ಹೊಂದಿದೆ.
ನಿಮ್ಮ ಪ್ರತಿಕ್ರಿಯೆ ಹಾಗೂ ಪ್ರೋತ್ಸಾಹಕ್ಕೆ ಧನ್ಯವಾದಗಳು.

ಯಜ್ಞೇಶ್ (yajnesh) said...

ಮನಸ್ಸಿಗೆ ಬೇಸರವಾದಾಗ/ನೋವಾದಾಗ ಒಂದು ಸಣ್ಣ ಸಾಲು ಓದಿದರೂ ಸಾಕು ಮತ್ತೆ ಉತ್ಸಾಹ ಮರಳಿ ಬರೊತ್ತೆ. ಎಷ್ಟೋ ಸಲ ವಿನಾಕಾರಣ ಗೊಂದಲವುಂಟಾಗತ್ತೆ. ಕುಳಿತು ಒಮ್ಮೆ ಯೋಚನೆಗಳತ್ತ ಗಮನ ಹರಿಸಿದರೆ ನಮಗೆ ಅರಿವಾಗತ್ತೆ ತಲೆಯಲ್ಲೋ ಓಡಾಡೋ ಯೋಚನೆಗಳಲ್ಲಿ ತೊಂಬತ್ತು ಬಾಗ ವೇಸ್ಟ್ ಅಂತ.

ಕಗ್ಗದ ಸಾಲುಗಳಿಗೆ ದನ್ಯವಾದಗಳು ಶ್ರೀಧರ. ಚೆನ್ನಾಗಿ ಬರೆದಿದ್ದೀಯ

shridhar said...

ಯಜ್ಞೇಶ್ ,
ನಿಜ ಒಮ್ಮೆ ಸುಮ್ಮನೆ ಕುಳಿತು ಯೋಚಿಸಿದಾಗ ತಿಳಿಯುತ್ತೆ ನಾವು ಆಲೋಚಿಸುವ ಎಷ್ಟೊಂದು ವಿಷಯಗಳು ಅನಗತ್ಯವಾದುದು ಎಂದು. ತಮ್ಮ ಪ್ರತಿಕ್ರಿಯೆಗೆ ಮತ್ತು ಪ್ರೋತ್ಸಾಹಕ್ಕೆ ಧನ್ಯವಾದಗಳು.