Monday, July 26, 2010

ಸ್ವಲ್ಪ ತಡಕೊಳ್ಳಿ , ಡಿಸ್ಕೌಂಟ್ ನಲ್ಲಿ ಕೊಡ್ಸ್ತಿನಿ



ಮಳೆಗಾಲ ಬಂತೆಂದರೆ ನಮ್ಮೂರಲ್ಲಿ , ಊರಿನ ಸುತ್ತಮುತ್ತ ಎಲ್ಲರೂ ಒಂದೊಂದು ರೀತಿಯ ಚಟುವಟಿಕೆಗಳಲ್ಲಿ ತೊಡಗಿ ಬಿಡುತ್ತಾರೆ. ಮಕ್ಕಳಿಗೆ ಶಾಲೆಗೆ ಹೋಗೊ ತಯಾರಿ, ಆಳುಗಳಿಗೆ ತೋಟ ಗದ್ದೆಯ ಕೆಲಸ, ತೋಟ ಇರುವವರ ಮನೆ ಗಂಡಸರು ಅಡಿಕೆಗೆ ಕೊಳೆ ಬಾರದಿರಲೆಂಬಂತೆ ಔಷಧಿಯನ್ನು ಹೊಡೆಯುವ ತಯಾರಿ ನಡೆಸುತ್ತಿರುತ್ತಾರೆ, ವಯಸ್ಸಾದವರು ತಮ್ಮದೆ ಲೋಕದಲ್ಲಿ , ಒಟ್ಟಿನಲ್ಲಿ ಎಲ್ಲರೂ ಎನೇನೊ ಮಾಡ್ತಾ ಇರ್ತಾರೆ ಆದರೆ ಹೆಂಗಸರು ಮಾತ್ರ ವರ್ಷವಿಡಿ ತಾವು ಕೂಡಿಟ್ಟ ಹಣ ಎಷ್ಟಾಗಿದೆ ಅಂತಾ ಎಣಿಸ್ತಾ ಇರ್ತಾರೆ. ಈ ಹಣವಾದರು ಸುಮ್ಮನೆ ಬಂದಿದ್ದಲ್ಲ, ತವರಿಂದ ಬಂದ ಅಣ್ಣ ಕೊಟ್ಟಿದ್ದೊ , ದೂರದೂರಲ್ಲಿ ಇರುವ ಮಗ ಮನೆಗೆ ಬಂದಾಗ ಕೊಟ್ಟಿ ಹೋಗಿದ್ದೊ ಅಥವಾ ಗಂಡನ ಬಟ್ಟೆ ಒಗೆಯುವಾಗ ಸಿಕ್ಕ ಚಿಲ್ಲರೆ ಕಾಸುಗಳು ಹಾಗು ಹಾಲು,ತುಪ್ಪಾ ಮಾರಿ ಉಳಿಸಿದಂತ ದುಡ್ಡು ಅದು.

ಹೆಂಗಸರ ಈ ಹರ ಸಾಹಸ ಯಾಕೆ ಅಂತೀರಾ , ಪ್ರತಿ ವರ್ಷ ಮಳೆಗಾಲದಲ್ಲಿ ನಮ್ಮೂರಲ್ಲಿ ಭಾರಿ ಡಿಸ್ಕೌಂಟ್ ಮಾರಾಟ ಇರುತ್ತೆ ಕಣ್ರಿ ...

ರೇಷ್ಮೆ ಸೀರೆಯಿಂದ ಹಿಡಿದು ಚಿಕ್ಕ ಚಿಕ್ಕ ಆದರೆ ಅತ್ಯವಶ್ಯಕ ಒಳ ಉಡುಪುಗಳವರೆಗೂ ಬಾರಿ ಡಿಸ್ಕೌಂಟ್ .. ಅಷ್ಟೆ ಅಲ್ಲ ಕರ್ಚೀಪ್ ಗೆ ಸಹ ಡಿಸ್ಕೌಂಟ್ ಕೊಡ್ತಾರೆ!!!!. ನಮ್ಮೂರ ಹೆಂಗಸ್ರಿಗೂ [ ಕೆಲವು ಗಂಡಸರು/ಮಕ್ಕಳಿಗು ಸಹ] ಅದೇನು ಡಿಸ್ಕೌಂಟ್ ಮೋಹನೊ , ಬೇಸಿಗೆಯಲ್ಲಿ ಮಗ/ಮಗಳು ಎನಾದರು ವಸ್ತ್ರ ಬೇಕು ಅಂತಾ ಹಟ ಮಾಡಿದ್ರೆ ,
" ಸ್ವಲ್ಪ ತಡಕೊಳ್ಳಿ , ಡಿಸ್ಕೌಂಟ್ ನಲ್ಲಿ ಕೊಡ್ಸ್ತಿನಿ" ಅನ್ನೋರೆ ಹೆಚ್ಚು.

ಯಾವತ್ತು ಮನೆಗೆ ಪೇಪರ್ ಬಂದಿದ್ಯ ಇಲ್ವ ಅಂತ ತಿಳಿಯುವ ಉಸಾಬರಿಗೆ ಹೋಗದ ಹೆಂಡ್ತಿ .. ಪದೆ ಪದೆ ಪೇಪರ್ ಬಗ್ಗೆ ಕೆಳ್ತಾ ಇದ್ರೆ ಗಂಡನ ಜೇಬಿಗೆ ಕತ್ರಿ ಬಿತ್ತು ಅಂತಾನೆ ಅರ್ಥ. ಪ್ರಾದೇಶಿಕ ಪೇಪರನಲ್ಲಿ ಯಾವ ಯಾವ ಅಂಗಡಿಯಲ್ಲಿ ಡಿಸ್ಕೌಂಟ ಮಾರಾಟ ಪ್ರಾರಂಭವಾಗಿದೆ ಅಂತ ಹಾಕಿರ್ತಾರೆ ಅದಕ್ಕೆ ಈ ಪರಿ ಕೇಳೊದು. ಮತ್ತೆ ಅಷ್ಟೂಂದು ದುಡ್ಡು ಕೂಡಿ ಹಾಕಿ ಗಂಡನ ಹತ್ರ ಯಾಕೆ ಕೇಳ್ತಾರೆ ಅಂತೀರ .. ಅದೆ ಕಣ್ರಿ ವಿಶೇಷ .. ಅವರು ಕೂಡಿಟ್ಟಿರೊದು ಗಂಡನಿಗೆ ಗೊತ್ತಿಲ್ಲದ ಹಾಗೆ, ಅಲ್ಲದೇ ಅದು ಸ್ಟಾಂಡ್ ಬೈ ಹಣ. ಗಂಡನಿಂದ ಪಡೆದ ಹಣ ಸಾಕಾಗದೆ ಇದ್ದಾಗ ಅಥವಾ ಕೇಳಿದರೆ ಮತ್ತೆ ಸಿಗೋಲ್ಲ ಅನ್ನುವಾಗ ಆ ಹಣ ಹೊರಗೆ ಬರೋದು.

ಪೇಟೆಗೆ ಹೋಗೊದು ಸುಮ್ನೆ ಆಗಲ್ಲ , ಬೆಳಿಗ್ಗೆ ಬೇಗನೆ ಎದ್ದು [ ದಿನಕ್ಕಿಂತ ಅರ್ಧ ಗಂಟೆ ಮುಂಚೆನೆ] , ಮನೆ ಕೆಲಸ ಮುಗ್ಸಿ..ತಿಂಡಿ ತಯಾರು ಮಾಡಿ, ವಯಸ್ಸಾದ ಅತ್ತೆ ಮಾವ ಇದ್ರೆ ಅಡಿಗೆನೂ ತಯಾರಿಸಿಟ್ಟು ,ಗಂಡನ ಮನವಲಿಸಿ ಸಾಧ್ಯ ಆದರೆ ಅವರನ್ನು ಕರೆದುಕೊಂಡು ಹೊರಡ ಬೇಕು ..ನೋಡಿ ಡಿಸ್ಕೌಂಟ್ ಗೆ ಹೊಗೋಕೆ ಎಷ್ಟೊಂದು ವಿಘ್ನ.

ಕೆಲವೊಮ್ಮೆ ಆಚೀಚೆ ಮನೆ ಹೆಂಗಸರೆಲ್ಲಾ ಸೇರಿ ಯಾವದಾದರು ಒಂದು ಜೀಪನ್ನು ಬಾಡಿಗೆಗೆ ಪಡೆದು ಒಟ್ಟಿಗೆ ಪೇಟೆಗೆ ಹೋಗಿ ಬರುವುದು ಇರುತ್ತೆ. ಕೆಲವೊಂದು ಮನೆಯಲ್ಲಿ ಇದಕ್ಕಾಗಿಯೆ ಸಣ್ಣ ಪುಟ್ಟ ಜಗಳವಾಗುವುದು ಇರುತ್ತದೆ. ಎಲ್ಲಾ ಗಂಡಸರು ಹೇಳುವ ಒಂದು ಸಾಮಾನ್ಯ ಮಾತು ಅಂದ್ರೆ " ಸುಮ್ನೆ ದುಡ್ಡು ಜಾಸ್ತಿ ಮಾಡಿ ಆಮೇಲೆ ಡಿಸ್ಕೌಂಟ ಅಂತ ಸ್ಟಿಕ್ಕರ್ ಅಂಟಿಸಿ ಮೋಸ ಮಾಡ್ತಾರೆ , ಅಲ್ಲದೆ ಅದೆಲ್ಲ ಹಳೆ ಶಿಲ್ಕು , ಖಾಲಿ ಮಾಡೊ ಪ್ಲಾನ ಅಷ್ಟೆ . ಅದರ ಬದಲು ನಿಧಾನವಾಗಿ ಆಮೇಲೆ ತಗೋಂಡ್ರೆ ಆಯಿತು ಅಂತ". ಆದರೆ ಹೆಂಗಸರು ಕೇಳ್ಬೇಕಲ್ವ . ಹೋಗ್ಬೇಕು ಅಂದ್ರೆ ಹೋಗ್ಲೆ ಬೇಕು.

ಆದರೆ ಡಿಸ್ಕೌಂಟನಲ್ಲಿ ಇರೋ ೭೦% ಬಟ್ಟೆ ಹಳೆ ಶಿಲ್ಕು ಅನ್ನೋದ್ರೆಲ್ಲಿ ಎರಡು ಮಾತಿಲ್ಲ. ಕೆಲವೊಬ್ಬರಿಗೆ ಒಳ್ಳೆ ಮಾಲು ಸಿಕ್ಕಿರುತ್ತೆ ಇನ್ನು ಕೆಲವೊಬ್ಬರಿಗೆ ಬಹಳ ಕೆಟ್ಟ ಮಾಲು ಸಿಗುವ ಸಾದ್ಯತೆಗಳು ಇರುತ್ತೆ , ಎಷ್ಟಪ್ಪ ಅಂದ್ರೆ ಒಮ್ಮೆ ನೀರಿಗೆ ಹಾಕಿದ್ರೆ ಮುಗಿತು ಮತ್ತೆ ಆ ವಸ್ತ್ರವನ್ನು ತೊಡೊ ಭಾಗ್ಯ ಗ್ಯಾಸ್ ಕಟ್ಟೆಗೊ , ಟಿ.ವಿ , ಪ್ರಿಡ್ಜಗಳಿಗೋ ಅಥವಾ ಕಿಡಕಿ ಬಾಗಿಲುಗಳಿಗೋ ಇರುತ್ತೆ :).

ಒಟ್ಟಿನಲ್ಲಿ ಮಳೆಯಲ್ಲಿ ನೆನೆಯುತ್ತ , ಮೈ ಎಲ್ಲ ಕೆಸರಾದರು ಸಹ ಮಳೆಗಾಲದಲ್ಲಿ ಒಮ್ಮೆ ಆದರು ಡಿಸ್ಕೌಂಟಗೆ ಅಂತ ಪೇಟೆಗೆ ಹೋಗಿ ಬರದಿದ್ದರೆ ನಮ್ಮ ಕಡೆಯವರಿಗೆ ಎನೋ ಒಂದನ್ನ ಕಳೆದು ಕೊಂಡಂತೆ. ಕೆಲವೊಂದು ಮಳೆಗಾಲದ ಖಾದ್ಯಗಳನ್ನಾದರು ಬಿಟ್ಟಾರು . ಈ ಡಿಸ್ಕೌಂಟ ಬಿಡಲೊಲ್ಲರು ....

ನಾವೇನು ಬೆಂಗಳೂರಲ್ಲಿ ಕಮ್ಮಿನೇ ..ಯಾವ ಮಾಲ್ ನಲ್ಲಿ ಎಷ್ಟು ರಿಯಾಯಿತಿ ಅಂತ ತಿಳಿದು ಕೊಂಡು ತಾನೆ ಲಗ್ಗೆ ಹಾಕೋದು. ನಾವು ಖರ್ಚು ಮಾಡುವಷ್ಟು ಸಹ
ಊರಲ್ಲಿ ಯಾರು ಮಾಡೋಲ್ಲ ಅಲ್ವ.ಬೆಂಗಳೂರನಲ್ಲಿ ವರ್ಷವಿಡಿ ಡಿಸ್ಕೌಂಟ್ ಜಾತ್ರೆನೆ. ಅವರಿಗೋ ವರ್ಷಕ್ಕೆ ಒಂದೊ ಎರಡೊ ಮಾತ್ರ .. ಹೋಗ್ಲಿ ಬಿಡಿ , ಮಜಾ ಮಾಡ್ಲಿ :)

ಈ ಡಿಸ್ಕೌಂಟ್ ವಿಷ್ಯ ಬರೆಯ ಹತ್ತಿದರೆ ಒಂದು ಪುಸ್ತಕಾನೆ ಬರಿ ಬಹುದು ಅಷ್ಟು ಸಂಗತಿಗಳು ನೋಡಲು , ಕೇಳಲು ಸಿಗುತ್ತದೆ. ನಾನು ಈಗ ಬರೆದಿದ್ದು ಕೇವಲ ಪೇಟೆಗೆ ಹೋಗೊ ಮುನ್ನ ಆಗುವಂತ ಘಟನೆಗಳನ್ನು ಮಾತ್ರ . ಇಲ್ಲಿ ಬರೆದಿರೋದು ಕಮ್ಮಿನೆ. ಡಿಸ್ಕೌಂಟ ಖರೀದಿ , ಆಮೇಲೆ ಮನೆಗೆ ಬಂದ ನಂತರ ಆಚಿಚೆ ಮನೆಯವರೋಡನೆ ಸಂಭಾಷಣೆ ಹೀಗೆ ಇನ್ನು ಹಲವು ಸ್ವಾರಸ್ಯಕರ ಘಟನೆಗಳು ಇರುತ್ತವೆ. ಎಂದಾದರು ಪುರುಸೊತ್ತಿನಲ್ಲಿ ಅದರೆ ಬಗ್ಗೆ ಬರೆಯುತ್ತೇನೆ.

ವಿ.ಸೂ: ಇದೊಂದು ಕೇವಲ ಲಘು ಬರಹವಷ್ಟೆ .. ಯಾವುದೆ ವ್ಯಕ್ತಿ , ಸ್ಥಳಗಳನ್ನು ನಿಂದಿಸಲು ಬರೆದದ್ದಲ್ಲ. ಅಥವ ನಮ್ಮೂರ ಜನ ಹೀಗೆ ಅಂತ ತೋರಿಸುವದಕ್ಕೂ ಬರೆದದ್ದಲ್ಲ.ಸುಮ್ಮನೆ ತಮಾಷೆಗೆ ಬರೆದದ್ದು ಓದಿ ತಮಾಷೆ ಅನ್ನಿಸಿದರೆ ನಕ್ಕು ಬಿಡಿ , ಕಮೆಂಟನಲ್ಲಿ ನಾಲ್ಕು ಹೋಗಳಿಕೆನೋ , ತೆಗಳಿಕೆನೋ ಎನೋ ಒಂದನ್ನ ಗೀಚಿ :).

ಚಿತ್ರ ಕೃಪೆ : ಅಂತರ್ಜಾಲ

33 comments:

shivu.k said...

ಶ್ರೀಧರ್ ಸರ್,

ನಿಮ್ಮೂರಿನ ಡಿಸ್ಕೌಂಟ್ ಕತೆ ಚೆನ್ನಾಗಿದೆ. ಡಿಸ್ಕೌಂಟ್ ನಂತರದ ಕತೆಗಾಗಿ ಕಾಯುತ್ತಿದ್ದೇನೆ.

Dr.D.T.Krishna Murthy. said...

ಎಲ್ಲರೂ ಒಂದಲ್ಲ ಒಂದು ಸಲ ಡಿಸ್ಕೌಂಟ್ ಜಾಲಕ್ಕೆ ಬಿದ್ದು ಮೋಸ ಹೋದವರೇ!'ಅಗ್ಗದ ದರ ಮುಗ್ಗಿದ ಜೋಳ'ಅಂತ ಗಾದೇನೆ ಇದೆಯಲ್ಲಾ!ನೀವು ಹೇಳುವುದು ನೂರಕ್ಕೆ ನೂರರಷ್ಟು ಸತ್ಯ.ಖಾಲಿಯಾಗದ ಸರಕನ್ನು ಖರ್ಚು ಮಾಡುವ ವಿಧಾನವೇ ಡಿಸ್ಕೌಂಟು!ಲೇಖನ ಚೆನ್ನಾಗಿದೆ.ಧನ್ಯವಾದಗಳು.

ದಿನಕರ ಮೊಗೇರ said...

ಹ್ಹಾ ಹ್ಹಾ... ಏನೂ ಡಿಸ್ಕೌಂಟ್ ಇರಲ್ಲ ಸರ್...... ಮೊದಲು ಇರೋ ರೇಟನ್ನು ಎರಡರಷ್ಟು ಏರಿಸಿ, ನಂತರ ೫೦ % ಡಿಸ್ಕೌಂಟ್ ಕೊಡ್ತಾರೆ... ನಾವು ಮಂಗಗಳಾಗ್ತೇವೆ .... ಚೆನ್ನಾಗಿದೆ ನಿಮ್ಮಡಿಸ್ಕೌಂಟ್ ಪುರಾಣ.....

ಚುಕ್ಕಿಚಿತ್ತಾರ said...

ಚೆನ್ನಾಗಿದೆ ಡಿಸ್ಕೌಂಟ್ ಕತೆ...ಹ್ಹಾ ಹ್ಹಾ.

Dileep Hegde said...

ಇದು ಗೊತ್ತಿದ್ರೂ ಜನ ಮರುಳಾಗ್ತಾರಲ್ಲ.. ಲೇಖನ ಚೆನ್ನಾಗಿದೆ..

sunaath said...

ಶ್ರೀಧರ,
ಡಿಸ್ಕೌಂಟಿನ ಒಳಹೊರಗನ್ನು ಸರಿಯಾಗಿ ವರ್ಣಿಸಿದ್ದೀರಿ.

ಸುಮ said...

ಹ..ಹ..ಹ..ಚೆನ್ನಗಿದೆ ಲೇಖನ.ಡಿಸ್ಕೌಂಟ್ ಜಾಲಕ್ಕೆ ಬಲಿಯಾಗದವರೇ ಇಲ್ಲವೇನೊ...ಗೊತ್ತಿದ್ದೂ ಮೋಸಹೋಗುತ್ತೇವೆ.

shridhar said...

ಶಿವು ಸರ್,
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. ಸಾಧ್ಯವಾದಲ್ಲಿ ಸದ್ಯದಲ್ಲೇ ಮುಂದಿನ ವಿಚಾರಗಳನ್ನು ಬರೆಯಲು ಪ್ರಯತ್ನಿಸುತ್ತೇನೆ.
ಬನ್ನಿ ನಮ್ಮೂರ್ಗೊಮ್ಮೆ , ನಿಮ್ಗೂ ಡಿಸ್ಕೌಂಟ್ ನಲ್ಲಿ ಎನಾದ್ರು ಕೊಡ್ಸ್ತಿನಿ :)

shridhar said...

ಮೂರ್ತಿ ಸರ್,
ಡಿಸ್ಕೌಂಟ್ ಎನ್ನುವುದು ಮಾಯೆ ಇದ್ದ ಹಾಗೆ .. ನಾವು ಪ್ರತಿಯೊಂದು ಕ್ಷೇತ್ರದಲ್ಲೂ ರಿಯಾಯಿತಿಯನ್ನು ಬಯಸುತ್ತೇವೆ ..ನಮ್ಮ ಈ ಗುಣವನ್ನೇ ಕೆಲವೊಬ್ಬ ಜಾಣ ವ್ಯಾಪಾರಿಗಳು ಎನ್ಕ್ಯಾಶ್ ಮಾಡಿಕೊಳ್ತಾರೆ ಅಷ್ಟೆ.
ನಿಮ್ಮ ಪ್ರತಿಕ್ರಿಯೆಗೆ ಮತ್ತು ಲೇಖನ ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು.

shridhar said...

ದಿನಕರ್ ಸರ್ ..
ಒಂದು ಗಾದೆ ಇದೆ .. ಹಗಲು ಕಂಡ ಬಾವಿಯಲ್ಲಿ ರಾತ್ರಿ ಬೀಳುವುದು ಅಂತ .. ನಾವು ಹಾಗೆ ಅಂಗಡಿಯವನು ಮೋಸ ಮಾಡ್ತಾನೆ ಅಂತ ಗೊತ್ತಿದ್ರು ರಿಯಾಯಿತಿ ಇದ್ಯ ಅಂತ ಕೇಳಲ್ವ .. ನೀವು ಹೇಳಿದಂತೆ ನಾವು ಸುಲಭವಾಗಿ ಮಂಗವಾಗ್ತೆವೆ ... :)
ನಿಮ್ಮ ಪ್ರತಿಕ್ರಿಯೆ ಧನ್ಯವಾದಗಳು.

shridhar said...

ವಿಜಯಶ್ರೀಯವರೆ ..
ಎಲ್ಲ ಡಿಸ್ಕೌಂಟ ಮಹಿಮೆ ..ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು.

shridhar said...

ದಿಲೀಪ ಸರ್ ,
ಡಿಸ್ಕೌಂಟಗೆ ಮರುಳಾಗದ ಜನರನ್ನು ನಾನು ಎಲ್ಲೂ ನೋಡಿಲ್ಲ. ನಿಮ್ಮ ಪ್ರತಿಕ್ರಿಯೆಗೆ ಮತ್ತು ಲೇಖನ ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು

shridhar said...

ಕಾಕಾ,
ಡಿಸ್ಕೌಂಟ ಅಂದ್ರೆ ಅಷ್ಟೇ ತಾನೆ .. ಯಾವ ವ್ಯಾಪಾರಿಯೇ ಆಗಲಿ ಲಾಭವನ್ನ ಕಡಿಮೆ ಮಾಡಿಕೊಳ್ಳಲು ಇಷ್ಟ ಪಡ್ತಾನೆ.ಈ ರೀತಿ ಇರೋದು ಬರಿ ಬಟ್ಟೆ/ಪಾತ್ರೆ ವ್ಯಾಪರದಲ್ಲಷ್ಟೇ ಅಲ್ಲ .. ಎಲ್ಲಾ ಕಡೆಯೂ ಇದೆ .. ಶಾಲಾ/ಕಾಲೇಜು ದಾಖಲಾತಿ ,ಆಸ್ತಿ ಪಾಸ್ತಿ ವಿಚಾರ .. ಡಿಸ್ಕೌಂಟ್ ಅಂತ ಹೇಳಿ ತಮ್ಮ ಬಲೆಗೆ ಕೆಡವಿ ಕೊಳ್ತಾರೆ.
ನಿಮ್ಮ ಪ್ರೋತ್ಸಾಹದ ನುಡಿಗಳಿಗೆ ಧನ್ಯವಾದಗಳು.

shridhar said...

ಸುಮ ಮೇಡಮ್,
ನನ್ನ ಬ್ಲೊಗ್ ಗೆ ಸ್ವಾಗತ. ನಿಜ ಈ ಡಿಸ್ಕೌಂಟ್ ಎನ್ನುವುದು ಒಂದು ಜಾಲ ಇದ್ದಂತೆ .. ಪ್ರತಿಯೊಬ್ಬರು ಒಮ್ಮೆ ಆದರು ಬಿದ್ದೇ ಬೀಳುತ್ತಾರೆ. ನಿಮ ಪ್ರತಿಕ್ರಿಯೆಗೆ ಧನ್ಯವಾದಗಳು. ಹೀಗೆ ಬರುತ್ತೀರಿ.

Subrahmanya said...

ಸರಿಯಾಗಿಯೇ ಬರೆದಿದ್ದೀರಿ. ೭೦% ಡಿಸ್ಕೌಂಟ್ ಎಂದು ಬೋರ್ಡ್ ಹಾಕಿದ್ದ ಬಟ್ಟೇ ಅಂಗಡಿಗೆ ನಾನೂ ಹೋಗಿದ್ದೆ. ಒಂದು ಟಿ-ಶರ್ಟಿನ ಬೆಲೆ ೧೦೨೫ ಅಂತು ಲೇಬಲ್ ಇತ್ತು. ಕಳೆದರೆ, ೪೦೦ ರೂ ಆಗ್ತಿತ್ತು. ಅದರ ನಿಖರ ಬೆಲೆ ನೂರು ರೂಪಾಯಿ ಇರಬಹುದು. ಹೇಗಿದೆ ನೋಡಿ ಡಿಸ್ಕೌಂಟ್ ಮಜ !.

ಸಾಗರಿ.. said...

ಹಹಹ, ಶಿರಸಿಯಲ್ಲಂತೂ ಅಗಾಗ ಬರುತ್ತಲೇ ಇರುತ್ತದೆ ಡಿಸ್ಕೌಂಟು ಮಾರಾತಗಳು. ಬಹಳ ಚೆನ್ನಾಗಿ ಹೇಳಿದ್ದೀರಿ. central ನಲ್ಲಿ ಡಿಸ್ಕೌಂಟ್ ಸೇಲ್ ಇದ್ಯಂತೆ ಈ weekend ಹೋಗ್ಬೆಕು :-)

shridhar said...

ಸುಬ್ರಮಣ್ಯ ಸರ್ ,
ಯಾವುದೇ ಅಂಗಡಿಗೆ ಹೋಗಿ ನೋಡಿ ಬಟ್ಟೆಯ ಮೇಲೆ ನಿಖರ ಬೆಲೆ ಕಾಣುವುದು ಕಮ್ಮಿಯಾಗಿದೆ.
ತಮ್ಮ ಅಂಗಡಿಯ ಹೆಸರಿನಲ್ಲಿ ಹಾಕಿದ ಬಾರ್ ಕೋಡ್ ಮತ್ತು ಬೆಲೆ ಮಾತ್ರ ನಮಗೆ ಕಾಣ ಸಿಗುವುದು.
ಆದ್ದರಿಂದ ಅವರು ಹೇಳಿದ್ದೇ ರೆಟ್ ಕೊಟ್ಟಿದ್ದೆ ಡಿಸ್ಕೌಂಟ್ .
ನಿಮ್ಮ ಅನುಭವ ಹಂಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.

shridhar said...

ಸಾಗರಿ ಬ್ಲೊಗ್ ಒಡತಿಯವರೇ,
ಅರೆ ಶಿರಸಿ ಡಿಸ್ಕೌಂಟ ಬಹಳ ಫೇಮಸ್ , ಕುಮಟಾ , ಸಿದ್ದಾಪುರ ಹಾಗು ಯಲ್ಲಾಪುರ ತಾಲೂಕಿನ
ಹಾಗೂ ಸುತ್ತಮುತ್ತಲ ಊರಿನ ಜನ ಸಹ ಅಲ್ಲಿಗೆ ಬರುವುದನ್ನ ನಾನು ನೋಡಿದ್ದೇನೆ.
ಸೆಂಟ್ರಲ್ ನಲ್ಲಿ ನಿಮ್ಗೆ ಒಳ್ಳೆ ರಿಯಾಯಿತಿ ಸಿಗಲಿ .. ಹ್ಹ್ ಹ್ಹ್ ಹ್ಹ್

V.R.BHAT said...

ಡಿಸ್ಕೌಂಟು ವ್ಯವಹಾರ ಸುಮಾರಾಗಿ ಈಗ ಎಲ್ಲರಿಗೂ ಗೊತ್ತಾಗಿದೆ, ಅದರಲ್ಲೂ ಒಂದಕ್ಕೊಂದು ಫ್ರೀ ವ್ಯವಹಾರ ಬಹಳಾ ಗೂಢ! ನಿಮ್ಮ ಘಟನೆ ಚೆನ್ನಾಗಿದೆ

Uday Hegde said...

Nice one sir...even i have experienced this discount mania.

Anonymous said...

nanagantoo modale shopping huchchu,,innu discount andre kelode beda..
paapa nanna yajamaanru..tumbaa sahaneyinda nanna shopping huchchannu sahisikondiddare..

ವನಿತಾ / Vanitha said...

ಹ್ಹ ಹ್ಹ..ಚೆನ್ನಾಗಿದೆ ಡಿಸ್ಕೌಂಟ್:))

shridhar said...

ವಿ ಆರ್ ಭಟ್ಟ್ರೆ ..
ಜನರೂ ಎಲ್ಲಾ ತಿಳಿದು ಕೂಡ ಮೋಸ ಹೋಗ್ತಾರೆ ..
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು

shridhar said...

ಉದಯ,
ನನ್ನ ಬ್ಲೊಗ್ ಗೆ ಸ್ವಾಗತ. Every one would have experience this mania at least once .
But many will fall in this again and again ..
Thanks for your comments...

shridhar said...

ಆಕಾಶಬುಟ್ಟಿ ಬ್ಲೊಗ್ಗೆರ್,
ಈ ಡಿಸ್ಕೌಂಟಗಳು ಶುರುವಾಗೊದೆ ತುಂಬ ಶೊಪ್ಪಿಂಗ ಮಾಡೊರಿಗೆ ಅಂತ .. ನಿಮ್ಮ ಯಜಮಾನ್ರ ಬಗ್ಗೆ ಕನಿಕರ ಅನ್ನಿಸುತ್ತೆ ... [ ತಮಾಷೆಗೆ ]
ಸಧ್ಯ ನನ್ನಾಕೆಗೆ ಇನ್ನು ಅತೀಯಾದ ಶೊಪ್ಪಿಂಗ ಹುಚ್ಚಿ ಶುರು ಆಗಿಲ್ಲ ..ನಾನು ಬಚಾವ್ :)
ನಿಮ್ಮ ಸ್ಪಂದನಕ್ಕೆ ಧನ್ಯವಾದಗಳು..

shridhar said...

ವನಿತಾ ಮೇಡಮ್,
ನನ್ನ ಬ್ಲೊಗ್ ಗೆ ಸ್ವಾಗತ ..ಲೇಖನ ಮೆಚ್ಚಿ ಕೊಂಡಿದ್ದಕ್ಕೆ ಧನ್ಯವಾದಗಳು.

ಸೀತಾರಾಮ. ಕೆ. / SITARAM.K said...
This comment has been removed by the author.
ಸೀತಾರಾಮ. ಕೆ. / SITARAM.K said...

ಡಿಸ್ಕೌಂಟ್ ಮಾರಾಟದಲ್ಲಿ ಒಂದೋ ಹಳೆ ಸವಕಲು ಮಾಲು ಬಿಕರಿ ಮಾಡೋಕ್ಕೆ ಇಲ್ಲಾ ಒಳ್ಳೆಯ ೧೦೦ರೂ ವಸ್ತುವನ್ನ ೨೫೦ ಮಾಡಿ,ಅರ್ಧ ಡಿಸ್ಕೌಂಟ್ ಕೊಟ್ಟು, ಮಾಮೂಲು ಲಾಭಕ್ಕಿಂತಾ ೨೫ ರು ಹೆಚ್ಚು ಹೊಡೆಯುವ ಹುನ್ನಾರ. ಒಂದಕ್ಕೊಂದು ಉಚಿತವೂ ಅಷ್ಟೇ ಎರಡುವರೆಯ ಬೆಲೆ ಒಂದಕ್ಕೆ ಇಟ್ಟಿರುತ್ತಾರೆ.
ಹೆಹೇ
ಚೆಂದದ ಲೇಖನ

ಮನಸಿನಮನೆಯವನು said...

shridhar,

dis count ಚೆನ್ನಾಗಿದೆ

shridhar said...

ಸೀತಾರಾಮ್ ಸರ್,
ಬ್ಲೊಗ್ ಗೆ ಸ್ವಾಗತ .. ಇಲ್ಲಿಗೆ ಬಂದು ನಿಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು.

shridhar said...

ಕತ್ತಲೆ ಮನೆ ..
ಬ್ಲೊಗ್ ಗೆ ಸ್ವಾಗತ ..ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

ಮನಮುಕ್ತಾ said...

:)ಚೆನ್ನಾಗಿದೆ..ಡಿಸ್ಕೌ೦ಟಾಯಣ..ನ೦ತರದ ಕತೆಯನ್ನು ಬರೆಯಿರಿ..

shridhar said...

ಮನಮುಕ್ತಾ ಅವರೇ,
ಲೇಖನ ಮೆಚ್ಚಿಕೊಂಡಿದ್ದಕ್ಕೆ ಧನ್ಯವಾದಗಳು. ಈಗಾಗಲೇ ಹಲವಾರು ಪ್ರತಿಕ್ರಿಯೆಯಲ್ಲಿ ಮುಂಬರುವ ಚಿತ್ರಣಗಳು
ಕಂಡು ಬಂದಿದೆ .. ಆದರೂ ಏನಾದರು ವಿಭಿನ್ನವಾಗಿ ಬರೆಯಲು ಯತ್ನಿಸುತ್ತೇನೆ.
ಪ್ರತಿಕ್ರಿಯೆಗೆ ಧನ್ಯವಾದಗಳು.