ಕೆಲವೊಂದು ಕ್ಲಿಕ್ಸ್ ಇಲ್ಲಿವೆ ....
ಕೂಗಿ ಕರೆದರೆನಗೆ ಕೋಕೊ ..
ಸಾಗಿ ಹೋದರು ನೀಡಿ ಕೊಕ್
ಕೋಕೊ ಕಾಯಿ ... ಮುಂಚೆ ಹಲವಾರು ತೋಟಗಳಲ್ಲಿ ಹೇರಳವಾಗಿ ಕಾಣುತ್ತಿದ್ದ ಇದು ಈಗ ಬಹಳ ವಿರಳವಾಗಿದೆ ... ಅಲ್ಲೊ ಇಲ್ಲೊ ಒಂದೆರಡು ಮನೆಯ ತೋಟಗಳಲ್ಲಿ ಕಂಡು ಬರುತ್ತದೆ ...ಮಾರ್ಕೆಟನಲ್ಲಿ ಇದರ ಬೇಡಿಕೆ ಕಮ್ಮಿ ಆಗಿದೆ ಮತ್ತು ಇದನ್ನು ಪ್ರೊಸೆಸ್ ಮಾಡಿ ಮಾರುವುದು ಕಷ್ಟ ಆದ್ದರಿಂದ ಬೆಳೆಯುತ್ತಿಲ್ಲ ಎಂದು ನನ್ನ ಮಾವನನ್ನು ಕೇಳಿದಾಗ ತಿಳಿಯಿತು ..
ಮರ ಅಣಬೆ ...
ನೆಲ ಬಿರಿದು ಮೇಲೆರಿ ,,,
ಕಾಫಿ ಹಣ್ಣು
ಈ ಹಣ್ಣು ನೋಡಲು ಕೆಂಪು,,
ಒಣಗಿಸಿದರೆ ನೀಡುವುದು ಕಂಪು ...
ಪುಡಿ ಮಾಡಿ ಕುಡಿದರೆ ..ಮನಸ್ಸಿಗೆ ತಂಪು ..
ನೀರ ಗುಳ್ಳೆಯಲ್ಲವಿದು ... ಹೊಳೆವ ಮುತ್ತು ...
ತೇಲುತಿಹುದೆಲೆಯ ಮೇಲೆ .. ಇದು ಯಾರ ಸೊತ್ತು
ಎಳೆಯ ಮೈ ,, ಬಿರಿಬಿಸಿಲು ..
ಹೋಗದಿರಲೆನ್ನ ಉಸಿರು .,ಆಗ ಬೇಕಿದೆ ನಾನಿನ್ನು ಹಸಿರು ..
ಮೀಸೆಯನೆತ್ತಿ ,,
ಚುಂಬಿಸುವ ತವಕದಿ ಗಗನವ ,,,
ಯಾವುದೀ ಕಿರೀಟ
ಬಾಗಿದೆ ಎನ್ನ ಸೊಂಟ ,, ತುಂಬಿ ಹಲಸ , ಕಾಲಿಂದ ತಲೆ ಗುಂಟ ..
ರಸ್ತೆಯ ಬದಿಯಲ್ಲಿ ಕೂತು .. ತೋರುತಿಹುದೆನನ್ನು ಈ ಮರದ ತೂತು ,,,
ಸಾಗುತಾ ದೂರ ದೂರ ..
24 comments:
ಶ್ರೀಧರ್, ಊರಕಡೆಗೆ ಹೋಗಿ ಬಂದ ಅನುಭವವಾಯ್ತು, ಎಲ್ಲಾ ಫೋಟೋಗಳೂ ಚೆನ್ನಾಗಿವೆ!
ಶ್ರೀಧರ್,
ಒನ್ದೆರದು ಫೊಟೊ ಸೂಪರ್.. ಹಳ್ಳಿಗಳಲ್ಲಿ ಬೆಳೆಯುವ ತರ್ಕಾರಿಗಳ ಬದಲಾಗಿ ಈಗ ಹೈ ಬ್ರೀಡ್ ಬರ್ತಾ ಇದೆ....
superb pics :) hanchikondidakke dhanyavadagalu :)
ಇಲ್ಲಿ ತೋರಿಸಿದ ಕೆಲವು ಸಸ್ಯಗಳನ್ನು ನಾನು ನೋಡಿರಲಿಲ್ಲ. ತುಂಬ ಸುಂದರವಾದ ಚಿತ್ರಗಳನ್ನು ಕೊಟ್ಟಿದ್ದೀರಿ.
ಅಪರೂಪದ ಅನುಪಮ ಚಿತ್ರಗಳು ಜೊತೆಗೆ ಒಪ್ಪ ಶೀರ್ಷಿಕೆ.
ಧನ್ಯವಾದಗಳು.
ವಿ.ಆರ್ .ಭಟ್ರೆ ..
ಮೊದಲ ಸ್ಪಂದನಕ್ಕೆ ವಂದನೆಗಳು . ಇನ್ನು ಹಲವು ಫೋಟೊಗಳಿದ್ದವು ಎಲ್ಲವನ್ನು ಹಾಕಲಾಗಲಿಲ್ಲ ....ಫೋಟೊ ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು.
ದಿನಕರ ಸರ್,
ನಿಜ ಇತ್ತೀಚೆಗೆ ಊರಿನಲ್ಲೂ ಸಹ ಮೊದಲಿನಂತೆ ತರೆವಾರಿ ತರಕಾರಿ , ಕಾಯಿ ಪಲ್ಲೆ ಬೆಳೆಯುವುದನ್ನ ನಿಲ್ಲಿಸಿದ್ದಾರೆ ..ಎಲ್ಲವೂ ಮಾರುಕಟ್ಟೆಯಲ್ಲಿ ಲಭ್ಯವಿರುವಾಗ
ಕಷ್ಟ ಪಡುವವರು ಯಾರು ..ಅಲ್ಲವೇ ???
ಫೋಟೊ ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು
Snow White
ಫೋಟೊ ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು
ಕಾಕಾ,
ಮಲೆನಾಡು ಹಲವು ಸಸ್ಯ ಪ್ರಭೇದಗಳಿಗೆ ಹೆಸರುವಾಸಿಯಾಗಿದೆ .. ಉತ್ತಮ ಔಷಧಿ ಸಸ್ಯಗಳು ಕೂಡ
ಹೇರಳವಾಗಿದೆ .. ಪೋಷಕರ ಕೊರತೆಯಿಂದಾಗಿ ಈಗೀಗ ಕೆಲವು ಸಂತತಿಗಳು ನಾಶವಾಗುವ ಸ್ಥಿತಿಯಲ್ಲಿದೆ ..
ಜಮೀನ ಇದ್ದರೂ ಕೆಲಸ ಮಾಡಲು ಜನರಿಲ್ಲದಂತಾಗಿದೆ ..
ಇಷ್ಟಪಟ್ಟು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು ...
ಸೀತಾರಾಮ್ ಸರ್,
ಮೊದಲ ಬಾರಿಗೆ ಪೋಟೊಗಳ ಜೊತೆ ಒಂದಿಷ್ಟು ಶೀರ್ಷಿಕೆಗಳನ್ನು ಬರೆದಿದ್ದೇನೆ ..
ಇಷ್ಟಪಟ್ಟಿದಕ್ಕೆ ಧನ್ಯವಾದಗಳು ..
ನಿಮ್ಮೆಲ್ಲರ ಅಭಿಪ್ರಾಯವೇ ನನಗೆ ಸ್ಪೂರ್ಥಿ ..
ಎಲ್ಲ ಫೋಟೊಗಳು...
ಅಡಿ ಟಿಪ್ಪಣೆಗಳು ಸೊಗಸಾಗಿದೆ..
ಅಡಿಕೆ ಮರದ ಫೋಟೊಗಳಂತೂ ಸೂಪರ್ !!
ಅಭಿನಂದನೆಗಳು...
ಶ್ರೀಧರ್ ಸರ್,
ನಿಮ್ಮೂರಿನ ಫೋಟೊಗಳು ತುಂಬಾ ಚೆನ್ನಾಗಿವೆ...
ಪ್ರಕಾಶಣ್ಣ,
ನಿಮ್ಮ ಮೆಚ್ಚುಗೆಯ ನುಡಿಗೆ ಧನ್ಯವಾದಗಳು ...
ಶಿವು ಸರ್,
ಊರಿನ ಪ್ರಶಾಂತ ವಾತವರಣ , ಸುಂದರ ಪರಿಸರ ಯಾರನ್ನಾದರು ಸೆಳೆದು ಬಿಡುತ್ತದೆ ,
ದಣಿದ ಮನಕ್ಕೆ ಸಾಂತ್ವನ ನೀಡುವಂತಿರುತ್ತದೆ ...
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು ...
ಶ್ರೀಧರ್,
ಪೋಟೋಗಳು ಚೆನ್ನಾಗಿ ಬಂದಿವೆ..
ಅವುಗಳಿಗೆ ನೀವು ಕೊಟ್ಟ ಅಡಿಬರಹ ಸಹ
ಹೀಗೆ ಬರೆಯುತ್ತಾ ಇರಿ
-ಪಾತರಗಿತ್ತಿ
ನನಗೂ ಅಜ್ಜನ ಮನೆಗೆ ಹೋಗಿ ಬಂದ ಅನುಭವವಾಯ್ತು. ಚೆನ್ನಾಗಿವೆ ಫೋಟೋಗಳು.
ಶಿವ ,
ನನ್ನ ಬ್ಲಾಗ್ ಗೆ ಸ್ವಾಗತ . ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. ಬರುತ್ತಿರಿ.
ವಿಕಾಸ,
ನಿನ್ನ ಮೆಚ್ಚಿಗೆಯ ನುಡಿಗೆ ಧನ್ಯವಾದಗಳು.
ಸೊಗಸಾದ ಚಿತ್ರಗಳು..
ಅವಕ್ಕೆ ತಕ್ಕಂತ ಸೊಗಸಾದ ಸಾಲುಗಳು..
ಶ್ರೀಧರ್ ಸರ್,
ತಡವಾಗಿ ಬಂದಿದ್ದಕ್ಕೆ ಕ್ಷಮೆ ಇರಲಿ,
ಎಲ್ಲ ಫೋಟೋಗಳನ್ನು ನೋಡಿ ತುಂಬಾ ಖುಷಿಯಾಯಿತು. ಈಗ ತಾನೆ ಊರಿಂದ ಬಂದ ನನಗೆ ಮತ್ತೆ ಊರಿಗೆ ಹೋದಂತ ಅನುಭವ ಕೊಟ್ಟಿತು.
ಧನ್ಯವಾದಗಳು.
ಚಿಕ್ಕವರಿದ್ದಾಗ ಕೊಕ್ಕೋ ಮರಗಳಿಗೆ ಜೋತುಬಿದ್ದು ಅಂಟಂಟು ಬೀಜಗಳನ್ನು ಬಾಯ್ತುಂಬ ಸವಿಯುತ್ತಿದ್ದುದು, ಕಾಪಿ ಹಣ್ಣುಗಳನ್ನು ಗಿದಮುರಿಯುವುದನ್ನೂ ಲೆಕ್ಕಿಸದೆ ತಿನ್ನುತ್ತಿದ್ದುದು,ಮೊನ್ನೆ ಊರಿಗೆ ಹೋದಾಗ ಕೂಡ ಮೀಸೆಯೆತ್ತಿ ಹಾಯ್ ಎಂದ ತರಗೆಲೆ ಹುಳವನ್ನು ಬಿಟ್ಟಕಣ್ಣು ಬಿಟ್ಟಂತೆ ನೋಡಿದ್ದು ಎಲ್ಲ ಎಲ್ಲ ಮತ್ತೆ ನೆನಪಾಯಿತು.. ಧನ್ಯವಾದಗಳು
ಬರೆಗಣ್ಣಿಗಿಂತಾ, ನಿನ್ನ ,ಸಂದೀಪಣ್ಣನ ಕ್ಯಾಮರಾದಲ್ಲೆ ಊರು ಮಸ್ತ್ ಕಣ್ತು...ಅರಸಾಪುರದ ಆ ಮರದ್ ಫೋಟೊ ಸಕತ್ ಛೊಲೋ ಇದ್ದು!!!!
ಮಲೆನಾಡು ಮತ್ತು ಕರಾವಳಿ ಪ್ರದೇಶಗಳು ಎಷ್ಟು ವರ್ಣಿಸಿದರೂ ಸಾಲದು. ಅಲ್ಲಿರುವ ಸಸ್ಯಪ್ರಭೇದ, ಗಿರಿಕಣಿವೆಗಳು ಕವಿಗಳಿಗೆ, ಕಲಾವಿದರಿಗೆ ಎಂದೂ ಸ್ಫೂರ್ತಿ
Post a Comment