Thursday, January 7, 2010

ಯಶಸ್ಸಿನತ್ತ ಪಯಣ

[ ಚಿತ್ರ:ಗೂಗಲ್ ಇಮೆಜಸ್ ]



ಯಶಸ್ಸಿನತ್ತ ಪಯಣ..
ಸುಗಮವೋ ದುರ್ಗಮವೋ
ನಾನರಿಯೆ;
ಅಭೆಧ್ಯವೇನಲ್ಲ , ಅಸಾಧ್ಯವು ಅಲ್ಲ


ಒಂದೊಂದೇ ಮೆಟ್ಟಿಲೇರುತ್ತ
ತಲುಪಬೇಕು ಉತ್ತುಂಗದತ್ತ




ಹನಿಹನಿಕೂಡಿದರೆ ಹಳ್ಳ
ಮನಸ್ಸೊಂದಿದ್ದರೆ ಸಾಧ್ಯವೂ ಎಲ್ಲಾ,
ಕಣ ಕಣವೂ ಸಾರುತ್ತಿದೆ
ಇದು ನನ್ನಿಂದ ಸಾಧ್ಯ ....ಸಾಧ್ಯ....

ಇಂದು ಇಲ್ಲಿ, ನಾಳೆ ಅಲ್ಲಿ
ರವಷ್ಟಾದರೂ ಪ್ರಗತಿ ...

ಆಹಾ! ಕಾಣುತ್ತಿದೆ ದೂರದಲ್ಲಿ
ಅಭಿವೃದ್ಧಿಯ ಬೆಳಕು
ಆದರೂ ಮನದ ಮೂಲೆಯಲ್ಲಿ,
ಹುದುಗಿಹುದು ಅಳುಕು....

ಯಶಸ್ಸಿನತ್ತ ಪಯಣ, ಒಂದೇ ಪ್ರಶ್ನೆ
ಈಗ ನಾನಿರುವುದೆಲ್ಲಿ?

9 comments:

ಚುಕ್ಕಿಚಿತ್ತಾರ said...

ಈಗ ನಾನಿರುವುದೆಲ್ಲಿ?

ಉತ್ತರ: ಯಶಸ್ಸಿನ ದಾರಿಯಲ್ಲಿ....

ಸಾಗರದಾಚೆಯ ಇಂಚರ said...

ತುಂಬಾ ಚೆನ್ನಾಗಿದೆ ಸರ್
ಪಯಣ ಎಂದಿಗೂ ಯಶಸ್ಸಿನತ್ತವೆ ಇರಲಿ ಎಂಬ ಆಶಯ
ಇಷ್ಟವಾಯಿತು

ಮನಮುಕ್ತಾ said...

ನಿಜ. ಮನಸ್ಸೊ೦ದಿದ್ದರೆ ಎಲ್ಲವೂ ಸಾಧ್ಯ.

ಕವನ ತು೦ಬಾ ಚೆನ್ನಾಗಿದೆ..
ಬರೆಯುತ್ತಿರಿ..

ಜಲನಯನ said...

ಶ್ರೀಧರ್, ಪಯಣ ಯಶಸ್ಸಿನತ್ತ ಎಂದು ಮೊದಲೇ ನಿರ್ಧರಿಸಿದ್ದು ಒಳ್ಲೆಯದೇ ಆದ್ರೆ ಆ ದಿಕ್ಕಿನಲ್ಲಿ ನಡೆಯುತ್ತಾ..ಒಂದುಕಡೆ ಈ ಪ್ರಶ್ನೆ ಕಾಡಿದ್ದು ಏಕೆ?? ಅರ್ಥವಾಗಲಿಲ್ಲ...ಗೊಂದಲಮಯ ಯೋಜನೆಯಾದರೆ ಹೀಗಾಗೋ ಸಾಧ್ಯತೆ ಇದೆ...ಏನಂತೀರಿ..? ಕವನದ ಸಾಲುಗಳಲ್ಲಿ ಮುಚ್ಚಿಟ್ಟ ಮನಸ್ಸು ತ್ರೆರೆದುಕೊಳ್ಳುತ್ತೆ...ತನಗೆ ಎಲ್ಲಿದ್ದೇನೆಮ್ದು ತಿಳಿಯದಾದಾಗ

Raghu said...

ಕವನ ತುಂಬಾ positive ಆಗಿ ಇದೆ.. ಎಲ್ಲರ ಪಯಣ ಯಶಸ್ಸಿನತ್ತ ಆದರೆ ದಾರಿಗಳು ಬೇರೆ ಅಸ್ಟೇ... ಚೆನ್ನಾಗಿದೆ ಕವನ.. ಸದಾ ಬರೆಯುತ್ತಿರಿ..
ನಿಮ್ಮವ,
ರಾಘು.

shridhar said...

ವಿಜಯಶ್ರೀ ಅವರೆ,
ಹೌದು ಪ್ರಯಾಣ ಯಶಸ್ಸಿನತ್ತವೆ.
ನಿಮ್ಮ ಸ್ಪಂದನಕ್ಕೆ ಧನ್ಯವಾದಗಳು.ಹೀಗೆ ಬರುತ್ತಿರಿ.

ಸಾಗರದಾಚೆಯ ಇಂಚರ [ ಗುರು] ಸರ್,
ನಮ್ಮ ಆಶಯ ಯಶಸ್ಸಿನತ್ತ ಇದ್ದರೆ ಮಾತ್ರ ಮುಂದೆ ಹೋಗಲು ಸಾಧ್ಯ ಅಲ್ಲವೆ ?.ಬರುತ್ತಿರಿ.
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

ಮನಮುಕ್ತಾ ಅವರೆ,
ಮನಸ್ಸಿಲ್ಲದೆ ಮಾಡುವ ಯಾವ ಕೆಲಸವು ಸೂಕ್ತವಾಗಿ ಆಗುವುದಿಲ್ಲ.
ಅದಕ್ಕೆ ಮನಸೊಂದಿದ್ದರೆ ಸಾಧ್ಯವು ಎಲ್ಲ >
ಪ್ರತಿಕ್ರಿಯೆಗೆ ಧನ್ಯವಾದಗಳು.ಬರುತ್ತಿರಿ.

ಜಲನಯನ [ ಆಜಾದ] ಸರ್,
ಪ್ರಯಾಣವೇನೊ ಯಶಸ್ಸಿನತ್ತ ನಿಜ , ಆದರೆ ಸಾಗುವ ಹಾದಿ ಸರಿಯಿದೆಯೆ,
ಇದು ಗೊಂದಲ ಅಲ್ಲದಿದ್ದರೂ , ಆತ್ಮಪರೀಕ್ಷೆ ಅನ್ನುವುದು ನನ್ನ ಆಶಯ.
ನಿಮ್ಮ ಪ್ರೀತಿ , ಸಹಕಾರ ಹಾಗೂ ಸ್ಪಂದನ ಸದಾ ಅಗತ್ತ್ಯ.
ಧನ್ಯವಾದಗಳು.ಬರುತ್ತಿರಿ.

ರಾಘು,
ನದಿಗಳು ಹರಿಯುವುದು ಹಲವು ಕವಲುಗಳಲ್ಲಾದರು ಸೇರುವುದು ಮಾತ್ರ ಸಮುದ್ರಕ್ಕೆ ಅಲ್ಲವೆ.
ಧನ್ಯವಾದಗಳು. ಬರುತ್ತಿರಿ.

Snow White said...

ಕವನ ತುಂಬಾ ಚೆನ್ನಾಗಿದೆ :) ಹುರಿದುಂಬಿಸುವ ಕವನ :)

ಗೌತಮ್ ಹೆಗಡೆ said...

mast:)

Anonymous said...

ಯಶಸ್ಸಿನತ್ತ ಕವಿತೆ ನಡೆಯುತ್ತಿದೆ...