Wednesday, December 30, 2009

ಭಾಂಧವ್ಯ -- ೨

[ ಮದುವೆಯ ತಯಾರಿಯಲ್ಲಿ ಬ್ಲೊಗ ಕಡೆ ಲಕ್ಶ್ಯಕೊಡಲ್ಲಾಗಲಿಲ್ಲ. ಕ್ಷಮೆ ಇರಲಿ. ಭಾಂದವ್ಯ ಕಥೆಯ ಎರಡನೆ ಭಾಗವನ್ನು ಈಗ
ನಿಮ್ಮ ಮುಂದೆ ಇಟ್ಟಿದ್ದೇನೆ. ಬರೆಯುವಗ ಯಾಕೊ ಮೊದಲಿನ ಸತ್ವ ಇಲ್ಲದಂತೆ ಕಾಣುತ್ತಿದೆ. ಆದರು ನಿಮ್ಮ ಸ್ಪಂದನ, ಸಹಕಾರ ಮುಂಚಿನಂತೆ ಅಗತ್ಯ. ತಪ್ಪುಗಳನ್ನು ಸರಿ ಮಾಡುತ್ತಿರಿ ಅಲ್ವಾ :: ]

( ಭಾಂಧವ್ಯ-೧ --- ಓದಿ )


ನಾವಿಬ್ಬರು ಸೇರಿ ರೂಮ್ ಮಾಡಿ ಅದಾಗಲೆ ವರುಷ ಕಳೆದಿತ್ತು. ಇಬ್ಬರಲ್ಲು ಎಲ್ಲಿಲ್ಲದ ಹೊಂದಾಣಿಕೆ. ಸುಖ ದುಖಕ್ಕೆ ಆಗುವ ಮಿತ್ರರಾಗಿ ಬಿಟ್ಟಿದ್ದೆವು. ನನಗೊ ಒಂದು ಒಳ್ಳೆ ಮಿತ್ರ ಸಿಕ್ಕನಲ್ಲ ಎಂಬ ಸಂತಸ ಇತ್ತು . ಈ ಬಾರಿಯ ಜಾತ್ರೆಗೆ ಅವನನ್ನು ಊರಿಗೆ ಕರೆದೊಯ್ಯುವ ಆಲೋಚನೆ ಮಾಡಿದ್ದೆ . ಅವನಿಗೆ ಇನ್ನು ತಿಳಿಸಿರಲಿಲ್ಲ. ಸರ್ಪ್ರೈಸ್ ಕೋಡುವ ಎಂದು ಸುಮ್ಮನಿದ್ದೆ.
ಇತ್ತೀಚೆಗೆ ವಿಕ್ಕಿಯ ದಿನಚರ ಬದಲಾಗ ತೊಡಗಿತ್ತು .. ನಾನು ಕೆಲಸದ ಒತ್ತಡ ಇರಬಹುದು ಎಂದು ಸುಮ್ಮನಿದ್ದೆ . ಕೆಲವೊಮ್ಮೆ ಕುಡಿದು ಬರುತ್ತಿದ್ದ. ಆಗೆಲ್ಲ ನಾನು ಅವನಿಗೆ ಸ್ವಲ್ಪ ತಿಳಿಹೇಳಲು ಪ್ರಯತ್ನಿಸುತ್ತಿದ್ದೆ. ಹೇಳಿದಾಗ ಒಮ್ಮೆ ಆಯಿತು ಎಂದು ಸುಮ್ಮನಿರುತ್ತಿದ್ದ.ಆದರೆ ಕುಡಿಯಿವುದು ನಿಲ್ಲಿಸಿರಲಿಲ್ಲ. ನನಗೆ ಅವನು ಕುಡಿಯುವುದು ಇಷ್ಟವಿಲ್ಲವೆಂದಲ್ಲ ಯಾಕೆಂದರೆ ನಾನು ಒಮ್ಮೆ ಅವನ ಜೊತೆ ವಿಸ್ಕಿಯ ರುಚಿ ನೋಡಿದ್ದೆ. ಅದೇಕೊ ಇಷ್ಟವಾಗಿರಲಿಲ್ಲ. ಅವನಿಗೆ ಬೇಡವೆನ್ನಲು ನನಗೆ ಸಾಧ್ಯವಾಗಿರಲಿಲ್ಲ.ನಾನು ಮೊದಲು ಎಣಿಸಿದಂತೆ ಆತ ಶ್ರೀಮಂತ ಮನೆಯ ಹುಡುಗನಾಗಿರಲಿಲ್ಲ. ಮನೆಯ ಪರಿಸ್ತಿತಿ ಎಲ್ಲ ಮಧ್ಯಮವರ್ಗದ ಜನರಂತೆಯೆ ಇತ್ತು .ಇವ್ನಿಗೆ ಮಾತ್ರ ಸ್ವಲ್ಪ ಮಜ ಮಾಡುವ ಹಂಬಲ. ರಿಸೆಶನ ಎಂಬ ಭಯವಾಗಲೆ ಐಟಿಯಲ್ಲಿ ಶುರುವಾಗಿತ್ತು. ಅದಕ್ಕಾಗಿಯೆ ನಾನು ಅವನಿಗೆ ಅಷ್ಟೊಂದು ವ್ಯಯ ಮಾಡಬೇಡವೆಂದು ಹೇಳುತ್ತಿದ್ದೆ ಅಷ್ಟೆ. ನನ್ನ ಎದುರಿಗೆ ಆತ ಆಯಿತು ಎಂದು ಒಪ್ಪಿಕೊಳ್ಳುತ್ತಿದ್ದ ಆದರು ನಾನು ಹಾಗೆ ಹೇಳುವುದು ಇಷ್ಟವಾಗುವುದಿಲ್ಲ ಎಂದು ಅವನ ನಡತೆಯಿಂದಲೇ ಗೊತ್ತಾಗುತ್ತಿತ್ತು.ಅದಲ್ಲದೆ ಹಣವನ್ನು ಕೇಳತೊಡಗಿದ್ದ. ಪ್ರಾರಂಭದಲ್ಲಿ ಕೊಡುತ್ತಿದ್ದೆ. ಒಮ್ಮೊಮ್ಮೆ ಹಿಂದಿರಿಗಿಸಿತ್ತಿದ್ದ . ಆದರೆ ಪದೆ ಪದೆ ಕೇಳತೊಡಗಿದಾಗ ಇಲ್ಲವೆಂದು ಬೈದು ಬಿಟ್ಟಿದ್ದೆ. ಯಾಕೆ ಕೇಳುತ್ತಿರ ಬಹುದು ಎಂದು ಸಹ ನಾನು ಆಲೋಚನೆ ಮಾಡಿರಲಿಲ್ಲ.ಇತ್ತೀಚೆಗೆ ನಾನು ಸುಮ್ಮನಾಗಿ ಬಿಟ್ಟಿದ್ದೆ. ಹಾಗೆಂದು ಗೆಳೆತನದಲ್ಲಿ ಯಾವುದೇ ಬಿರುಕು ಬಂದಿರಲಿಲ್ಲ.
ಅವತ್ತು ಕಂಪನಿಯಂದ ರೂಮಿಗೆ ಬೇಗ ಬಂದಿದ್ದೆ .. ಸ್ವಲ್ಪ ತಲೆ ನೋವು , ಜ್ವರ ಬಂದ ಹಾಗೆ ಆಗಿತ್ತು .. ವಿಕ್ಕಿ ಇನ್ನು ಬಂದಿರಲಿಲ್ಲ.ಮಾತ್ರೆ ತಗೊಂಡು ನಿದ್ದೆ ಹೋಗಿದ್ದೆ.ಸ್ವಲ್ಪ ಸಮಯದ ನಂತರ ಏಕೊ ಎಚ್ಚರವಾಯಿತು , ಕಣ್ಣು ತೆರೆದರೆ ಮಬ್ಬುಗತ್ತಲೆ ..ಒಹ್ ಬಹಳ ಹೂತ್ತಾಗಿರಬೇಕು ಮಲಗಿ ..ಆಗಲೆ ಸಂಜೆಯಾಗಿ ಬಿಟ್ಟಿದೆ. ಊಟದ ತಯಾರಿ ಮಾಡಬೇಕು. ಇಷ್ಟೊತ್ತಾದರು ವಿಕ್ಕಿಯ ಸುಳಿವಿಲ್ಲ. ಸರಿ ಎನೋ ಒಂದು ಬೆಯಿಸಿದರಾಯ್ತು ಎಂದು ಅಡಿಗೆಮನೆಯತ್ತ ನಡಿದೆ. ಅಡಿಗೆ ಮನೆ ಪೂರ್ತಿ ಕೊಳಕಾಗಿದೆ .. ಕೆಲವು ಸಾಮಾನುಗಳೆಲ್ಲ ಚೆಲ್ಲಾಪಿಲ್ಲಿಯಾಗಿವೆ . ನನಗೆ ಆಶ್ಚರ್ಯ , ಏಕೆಂದರೆ ಬೆಳಿಗ್ಗೆ ಎಲ್ಲ ಸರಿಯಾಗಿ ಇಟ್ಟಿದ್ದೆ ಸಂಜೆ ಆಗುವಷ್ಟರಲ್ಲಿ ಹೀಗೆ .ಅಂದ್ರೆ ವಿಕ್ಕಿ ರೂಮ್ ಗೆ ಬಂದಿದ್ದನೆ?. ಯಾವಗ ಬಂದಿರ ಬಹುದು?. ನಾನು ಮಲಗಿರುವಾಗಲೆ ಅಥವ ಅದಕ್ಕು ಮೊದಲೆ? .. ಆದ್ರು ಈ ರೀತಿ ಕೊಳಕು ಮಾಡಿದ್ದದರು ಏಕೆ?. ಮೊದಲೆ ತಲೆ ನೊಯುತ್ತಿತ್ತು ಈಗ ಇದು ಬೇರೆ, ಎನು ತಿಳಿಯದಂತಾಗಿ ಮತ್ತೆ ಹಾಸಿಗೆಯ ಮೇಲೆ ಪವಡಿಸಿದ್ದೆ. ಆಲೋಚಿಸುತ್ತಲೆ ನಿದ್ದೆಗೆ ಜಾರಿದ್ದು ಗೊತ್ತಾಗಲೆ ಇಲ್ಲ.
ಕಿಲ ಕಿಲ ನಗುವಿನ ಶಬ್ದ ಕೇಳಿ ಒಮ್ಮೆಗೆ ಎಚ್ಚರವಾಯಿತು.. ಯಾರಿರ ಬಹುದು ಎಂದು ನೋಡೋಣ ಎಂದು ಎದ್ದು ಹೊರ ಬಂದರೆ
ಅಲ್ಲಿ ವಿಕ್ಕಿ ಯಾರೊಂದಿಗೊ ಮಾತಾಡುತ್ತಿದ್ದ ಮದ್ಹ್ಯೆ ಕಿಲ ಕಿಲ ನಗು. ಯಾರಿರ ಬಹುದು ನನಗೂ ಕೂತುಹಲ ..


.... ಮುಂದುವರೆಯುವುದು....

8 comments:

ಗೌತಮ್ ಹೆಗಡೆ said...

tumbaa curiocity agta ide mundenaagutto anta:)

manamukta said...

ಕಥೆ ಚೆನ್ನಾಗಿದೆ. ಬೇಗನೆ ಮು೦ದುವರೆಸಿ.
ನವದ೦ಪತಿಗಳಿಗೆ ಹೊಸ ವರ್ಷದ ಶುಭ ಹಾರೈಕೆಗಳು.

ದಿನಕರ ಮೊಗೇರ.. said...

kathe chennaagide........... munduvaresi.......... nimma dampati jeevanakke shubhaashayagalu.......

Snow White said...

ಕಥೆ ತುಂಬಾ ಚೆನ್ನಾಗಿದೆ .. :) ಮದುವೆಯ ಶುಭಾಶಯಗಳು ನಿಮಗೆ ಮತ್ತು ನಿಮ್ಮ ಪತ್ನಿಗೆ :)
ಹೊಸ ವರ್ಷದ ಹಾರ್ದಿಕ ಶುಭಾಶಯಗಳು :)

ಚುಕ್ಕಿಚಿತ್ತಾರ said...

ಕಥೆ ಚೆನ್ನಾಗಿದೆ. ಹೊಸ ವರುಷ , ಹೊಸಜೀವನ ಸದಾ ಸ೦ತಸ ತರಲಿ.

ಜಲನಯನ said...

ಶ್ರೀಧರ್ ನಮಗೆ ಮದುವೆ ಊಟ ಮಿಸ್ ಆಯ್ತಾ..?? ಸರಿ ಬಿಡಿ ಪರ್ವಾಗಿಲ್ಲ...ನಿಮ್ಮ ವೈವಾಹಿಕ ಜೀವನಕ್ಕೆ ನಮ್ಮ ಹೃದಯಪೂರ್ವಕ ಶುಭಕಾಮನೆಗಳು. ಕಥೆ...ಮದುವೆಯನಂತರ ನಿಮ್ಗೇ ಸರಿ ಕಾಣ್ತಿಲ್ಲವೋ ಅಥವಾ ನಮಗೆ ಸರಿ ಎನಿಸದಿರಬಹುದು ಅಂತ ಗುಮಾನೀನೋ..? ಬರ್ಲಿ ಮುಂದಿನ ಕಂತು...

ಸಾಗರದಾಚೆಯ ಇಂಚರ said...

ಮುಂದಿನ ಭಾಗಕ್ಕೆ ಕಾಯ್ತಾ ಇದ್ದೇವೆ
ಬೇಗ ಹಾಕಿ

shridhar said...

ನಿಮ್ಮ ಸ್ಪಂದನಕ್ಕೆ ಹಾಗು ಪ್ರೋತ್ಸಾಹಕ್ಕೆ ಧನ್ಯವಾದಗಳು ..
ಮುಂದಿನ ಕಂತು ಸದ್ಯದಲ್ಲೇ ಬರಲಿದೆ ..

ಹಾರೈಸಿದ ಎಲ್ಲರಿಗೂ ಧನ್ಯವಾದಗಳು