Tuesday, August 11, 2009

ಬ್ಲಾಗಾಯ ತಸ್ಮೈ ನಮಃ

ನಾನು ಪುಸ್ತಕ ಬಿಡುಗಡೆ , ಸಾಹಿತ್ಯ ಅಂತೆಲ್ಲ ತಿರ್ಗಾಡ್ತೀನಿ , ಬರೀತೀನಿ ಅಂದುಕೊಂಡಿರಲಿಲ್ಲ .. ಆದರೆ ಇದೆಲ್ಲ ಸಾಧ್ಯವಾದದ್ದು ಬ್ಲಾಗ್ ಲೋಕಕ್ಕೆ ಕಾಲಿಟ್ಟ ಮೇಲೆ .. ಮುಂಚೆ ಒಂದೆರಡು ಕವನ , ಕಥೆ ಗೀಚಿದ್ದೆ .. ಮತ್ತೆ ಬರೆಯೋ ಆಸಕ್ತಿ ಯಾಕೋ ಕಳೆದು ಹೋಗಿತ್ತು .ಆದ ಕಾರಣ ಈಗ ಬರೆಯಲು ಕುಳಿತರೆ ಏನು ತೋಚದಂತಾಗಿದೆ .. ಸರಿ ಯಾವತ್ತಾದರೂ ಒಮ್ಮೆ ಬರಯೋಣ ಬಿಡಿ .. ಆದರೆ ಬ್ಲಾಗ್ ಲೋಕದಲ್ಲಿ ನಂಗೆ ಇಷ್ಟೊಂದು ಮಿತ್ರರಾಗ ಬಹುದು ಎಂದು ಮಾತ್ರ ಆಲೋಚಿಸಿರಲಿಲ್ಲ .. ಮೊದಲು ಇದರಲ್ಲಿ ಆಸಕ್ತಿ ವಹಿಸಲು ಸಹಾಯ ಮಾಡಿದವಳು ಶ್ವೇತಾ [ http://amidstthesea.blogspot.com/ ] . ನನ್ನ ಒಂದು ಬ್ಲಾಗ್ ಓಪನ್ ಆಗೋಕೆ ಕಾರನೀಕರ್ತಳು ಅವಳೇ . ಹಾಗೇ ಬಹಳ ದಿನದ ನಂತರ ನನ್ನ ಫ್ರೆಂಡ್ ಒಬ್ಬಳು [ Nannake - telprabu] ಬ್ಲಾಗ್ ನೋಡು ಎಂದು ಲಿಂಕ್ ಕಳುಹಿಸಿದಳು , ನನ್ನ ಬ್ಲಾಗ್ ಇಂಟರೆಸ್ಟ್ ಅಲ್ಲಿಂದ ಪ್ರಾರಂಭವಾಯಿತು . ಅಲ್ಲಿ ಬ್ಲಾಗ್ ಓದುತ್ತ ಓದುತ್ತ : ಇಟ್ಟಿಗೆ ಸಿಮೆಂಟ್ , ಛಾಯ ಕನ್ನಡಿ , ಜಲನಯನ , ಧರಿತ್ರಿ , ಮೌನಗಾಳ ಹೀಗೆ ಹತ್ತು ಹಲವು ಬ್ಲೋಗಗಳ ಪರಿಚಯವಾಯಿತು . ಇಷ್ಟೆಲ್ಲಾ ಆದಮೇಲೆ ಎಲ್ಲರನ್ನು ಒಮ್ಮೆ ನೋಡಬೇಕು ಎಂಬ ಹಂಬಲವಾಗ್ತಾ ಇತ್ತು , ಅದಕ್ಕೆ ಒಳ್ಳೆ ಅವಕಾಶ ಕೂಡಿ ಬಂದಿದ್ದು ಮೊನ್ನೆ ಆದಿತ್ಯವಾರ ಸುಶ್ರುತ ಮತ್ತು ಶ್ರೀನಿಧಿಯ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ .. ಅಂದು , ಶಿವೂ ಸರ್, ಪ್ರಕಾಶಣ್ಣ , ಹರ್ಷ , ಮತ್ತು ಹಲವರ ಭೇಟಿ ಆಯಿತು , ಅದರೊಂದಿಗೆ ಮೆಚ್ಚಿನ ನಿರ್ದೇಶಕರಾದ ನಾಗತಿಹಳ್ಳಿ ಚಂದ್ರಶೇಖರ , ಹಿರಿಯ ಕವಿ HSV Murthy ಹಾಗು ಜೋಗಿ ಯವರನ್ನು ನೋಡುವ ಅವಕಾಶವೂ ನನ್ನದಾಯಿತು .. ಹಾಗೆಯೆ ನನ್ನ ಶಾಲಾ ದಿನದ ಹಿರಿಯ ವಿದ್ಯಾರ್ಥಿಯನ್ನು ಸಹ ಭೇಟಿ ಮಾಡುವ ಸಂದರ್ಭ ಒದಗಿ ಬಂತು ..ಇನ್ನು ಹಲವು ಜನರಿದ್ದರು ಆದರೆ ಪರಿಚಯದ ಅಭಾವದಿಂದ ಹಾಗು ಯಾರು ಪರಿಚಯ ಮಾಡಿಕೊಡುವವರು ಇಲ್ಲದ್ದರಿಂದ ಅವರ ಇರುವಿಕೆಯನ್ನು ಮಾತ್ರ ನೋಡಲು ಸಾದ್ಯವಾಯಿತು , ಮುಂದೊಮ್ಮೆ ಭೇಟಿಯಾಗುವ ಬರವಸೆಯೊಂದಿಗೆ , ಹಾಗು ಸೇರಿದ ಅತಿಥಿಗಳ ಮಾತು ಹಾಗು ನುಡಿಮುತ್ತುಗಳನ್ನ ಮೆಲಕು ಹಾಕುತ್ತ ನನ್ನ pulsar ಅನ್ನು ಏರಿ ಮನೆಕಡೆಗೆ ಹೊರಟೆ.
ಇದೆಲ್ಲ ನಾನು ಬ್ಲಾಗ್ ಲೋಕಕ್ಕೆ ಬಂದಿದ್ದರಿಂದಲೇ ಸಾಕಾರವಾಯಿತು ಅನ್ನುವುದು ನನ್ನ ಅನಿಸಿಕೆ . ಹೇಗೆ ನಿಮ್ಮೆಲ್ಲರ ಸಹಕಾರ ಇದ್ದರೆ ಒಂದು ದಿನ ಉತ್ತಮ ಬರವಣಿಗೆ ಮಾಡಬಹುದು ಅನ್ನುವುದು ನನ್ನ ಆಶಯ . ಎಲ್ಲರಿಗೂ ನನ್ನ ಅಭಿನಂದನೆಗಳು .

4 comments:

shivu said...

ಶ್ರೀಧರ್,

ಅಂದು ನಿಮ್ಮ ಬೇಟಿಯಾದಾಗ ನನಗೇ ತುಂಬಾ ಖುಷಿಯಾಯ್ತು...

Shweta Bhat said...

ಭಟ್ರೇ,
ತುಂಬಾ ಥ್ಯಾಂಕ್ಸ್ ...........
ಬರಿಯೋ ಮಾರಾಯ......ಬರೀತೀನಿ ಎಂದೇ ವರ್ಷಗಳು ಕಳೆದವಲ್ಲ..!!!
Keep going .............!

ತೇಜಸ್ವಿನಿ ಹೆಗಡೆ- said...

ಬ್ಲಾಗ್ ಲೋಕಕ್ಕೆ ಸ್ವಾಗತ. ಉತ್ತಮ ಬರಹಗಳ ನಿರೀಕ್ಷೆಯಲ್ಲಿರುವೆ... ಒಳಿತಾಗಲಿ.

shridhar said...

@ ಶಿವು ,
ನಿಜ ಆದಿನವು ನನಗೆ ಸಂತೋಷದ ಕ್ಷಣಗಳಲ್ಲಿ ಒಂದು
@ ಶ್ವೇತ ,
ಬರಿತ್ನೆ , ಇನ್ನಾದ್ರು ನಿಯಮಿತವಾಗಿ ಬರೆಯವು ಅನ್ಕೈನ್ದೆ , ಎಷ್ಟು ಸಫಲನಾಗ್ತೆ ನೋಡವು.
@ತೇಜಕ್ಕ ,
ನನ್ನ ಬ್ಲೋಗಗ್ಗೆ ಸ್ವಾಗತ , ನಿಮ್ಮ ಪ್ರೋತ್ಸಾಹ ಸದಾ ಹೀಗೆ ಇರಲಿ .. ಧನ್ಯವಾದಗಳು .