Thursday, October 1, 2009

ದೇವದೂತ

ಗಾಂಧಿ ಜಯಂತಿಯ ಸಂದರ್ಭದಲ್ಲಿ ಶಾಲಾ ದಿನದಲ್ಲಿ ಗೆಳೆಯರೊಂದಿಗೆ ಸೇರಿ ಬರೆದ ಒಂದು ಕವನ.
ಈ ಕವನ ಈಗ ಬಾಲಿಶ ಎನಿಸಬಹುದು ಎಕೆಂದರೆ ಒನ್ದು ಪ್ಯಾರದಿಂದ ಮತ್ತೊಂದಕ್ಕೆ ಲಿಂಕ್ ಸಿಗದು ..
ಆದರು ಶಾಲಾ ದಿನದಲ್ಲಿ ಬರೆದ ಕವನವಾದ್ದರಿಂದ ಯಾವುದೆ ಬದಲಾವಣೆ [ ಕೆಲವು ಶಬ್ದಗಳನ್ನು ಮಾತ್ರ ]
ಮಾಡದೆ ಹಾಗೆಯೇ ಪ್ರಕಟಿಸಿರುವೆ.
=====================================================

ರತ್ನ ಕುಂದಿತು ,ದೀಪ ನಂದಿತು
ಮನೆಯೊಳಗಾಡುತ್ತಿದ್ದ ಕಂದಮ್ಮ
ಕಿಟಾರನೆ ಕಿರುಚಿತು
ಅದೇ ತಾನೆ ಬೆಳಗಿದ ಸ್ವಾತಂತ್ರ್ಯ
ದೀಪದಲಿ ಕೊರತೆ ಕಂಡಿತು
ಬೆಳಗುತ್ತಿದ್ದ ಭಾರತದಲ್ಲಿ ಕತ್ತಲಾವರಿಸಿತು.

ಪೂಜ್ಯ ಬಾಪುಜಿ , ಸತ್ಯತಾವಾದಿ
ಆಕಸ್ಮಿಕವಾಗಿ ಅಗಲಿ
ಮಾಡಿದೆ ದೇಶದ ಜನರನ್ನು ತಬ್ಬಲಿ
ಸಂಚುಕಾರರು ಆ ಆಂಗ್ಲರು
ನಿನ್ನೆದುರಿಗಾದರು ತ್ರುಣ ಸಮಾನರು
ಹೊಡೆದೋಡಿಸಿ ಅವರ ನೀಡಿದೆ ದೇಶಕ್ಕೆ
ಸ್ವಾತಂತ್ರ್ಯ,
ಅರಿಯದೆ ನಡೆದಿತ್ತು ಹಿಂದೆಯೆ ನಿನ್ನ ಕೊಲೆಯ
ತಂತ್ರ.


ಅಂಹಿಸೆಯೇ ನಿನ್ನ ಆಯುಧ
ಕೈಕೋಲೇ ಆ ಪರಶಿವನ ತ್ರಿಶೂಲ
ನಿ ನೇಯ್ದ ಖಾದಿಯೆ ನಿನಗಾಡಂಬರ
ಸರಳ ಜೀವನ ನಿನ್ನ ವ್ಯವಹಾರ
ರಾಮರಾಜ್ಯದ ಕನಸುಗಾರ
ದೇಶಕ್ಕೆ ನೀಡಿದೆ ಹೊಸ ಆಚಾರ
ನಿನ್ನ ಕೊಡುಗೆ ದೇಶಕ್ಕೆ ಅಪಾರ
ಒಟ್ಟಿನಲಿ ನೀನೊಬ್ಬ ದೇವದೂತನ ಅವತಾರ.

10 comments:

ಸಾಗರದಾಚೆಯ ಇಂಚರ said...

ಶ್ರೀಧರ್
ಹೀಗೆಯೇ ಬರೆಯುತ್ತಿರಿ

shridhar said...

ಗುರು,
ನಿಮ್ಮ ಪ್ರೋತ್ಸಾಹ ಸದಾ ಇರಲಿ. ಪ್ರತಿಕ್ರಿಯೆಗೆ ಧನ್ಯವಾದಗಳು.

Ittigecement said...

ಶ್ರೀಧರ..

ಕವಿತೆ ಚೆನ್ನಾಗಿದೆ......
ಇನ್ನಷ್ಟು ಬರೆಯಿರಿ....

shivu.k said...

ಶ್ರೀಧರ್,

ಮಹಾತ್ಮ ಗಾಂದಿಯ ಬಗೆಗಿನ ಕವನ ತುಂಬಾ ಚೆನ್ನಾಗಿದೆ.
ಮೊದಲ ಸಾಲುಗಳು ಚೆನ್ನಾಗಿ ಬರೆದಿದ್ದೀರಿ...

shridhar said...

ಪ್ರಕಾಶಣ್ಣ
ಪ್ರತಿಕ್ರಿಯೆಗೆ ಧನ್ಯವಾದಗಳು

shridhar said...

ಶಿವು ಸರ್,
ಮೊದಲ ಸಾಲುಗಳಿಗೆ ಹೊಂದುವಂತೆ ಉಳಿದ ಸಾಲುಗಳನ್ನು ಬರೆಯಲು ಆಗಲಿಲ್ಲ ಎಂಬ ಖೆದ ಇನ್ನು ಮನಸ್ಸಿನಲ್ಲಿ ಇದೆ.
ಪ್ರತಿಕ್ರಿಯೆಗೆ ಧನ್ಯವಾದಗಳು

ಗೌತಮ್ ಹೆಗಡೆ said...

shaala dinagala nimma prayatna chennagide. illi baalisha ennuvanthaddu enoo illa. aa vayassige nimmadu olleya kavana:)

ದಿನಕರ ಮೊಗೇರ said...

tumbaa cennaagide, heege bareyuttiri.....

ಜಲನಯನ said...

ಶ್ರೀಧರ್, ಗಾಂಧಿ ನನ್ನ ಅತಿಪ್ರಿಯ ನಾಯಕ..ಚೇತನಗಳು ಪರಮಾತ್ಮವಾಗುತ್ತವೆ ಎನ್ನುವುದಾದರೆ ಅದು ಗಾಂಧೀಜಿಯವರಂಥವರಿಂದಲೇ...ನಿಜ ಸೇವೆ ಎನ್ನುವುದರ ಅರ್ಥ...ಇಂಥವರಿಂದಲೇ...ಮಿಕ್ಕವರೆಲ್ಲ ಒಂದಲ್ಲ ಒಂದು ರೀತಿಯಲ್ಲಿ ತಮಗಾಗಿ ಏನನ್ನೋ ಬಯಸಿದವರು...ನಿಮ್ಮ ಕವನ ಇಷ್ಟವಾಯಿತು

shridhar said...

ಬೆನ್ನು ತಟ್ಟಿ ಪ್ರೊತ್ಸಾಹಿಸುತ್ತಿರುವ ನಿಮಗೆಲ್ಲರಿಗೂ ನನ್ನ ಧನ್ಯವಾದಗಳು....