Friday, September 25, 2009

ಭಾಂಧವ್ಯ
--- ತೊರೆಯುವ ಮುನ್ನ ಅಳಿಯದ ನೆನಪು -- ಒಂದು ನೀಳ್ಗತೆ

ವಿಕ್ಕಿ "ತೊಡಾ ಚಾಯ್ ಬನಾವೊನಾ , ಸಿರ್ ದರ್ದ್ ಕರ್ ರಹಾ ಹೈ" ,

ವಿಕ್ರಮ್ ಎನೊ ಹೆಳ್ತಾ ಇದ್ದ , ನನಗೆ ಅದಾವುದರ ಪರಿವೆಯೆ ಇರಲಿಲ್ಲ .. ಬೆಳಿಗ್ಗೆ ಇಂದ ಎನೊ
ತಳಮಳ , ಮನಸ್ಸು ಹಿಡಿತಕ್ಕೆ ಸಿಕ್ತಾ ಇಲ್ಲ .. ನಾನು ನಾನಾಗಿಲ್ಲ ಅನಿಸ್ತ ಇತ್ತು . ಯಾಕೆ ಎನಾಗ್ತಾ ಇದೆ ಅಂತಾನು
ತಿಳಿತ ಇಲ್ಲ. ಮನದಲ್ಲಿ ಎನೇನೊ ಆಲೋಚನೆ , ಒಂದು ರೀತಿಯ ಭಯ ಆವರಿಸುತ್ತ ಇತ್ತು ,

"ಯೆ ಲೆ ಚಾಯ್ ," ಅಂತ ವಿಕ್ಕಿ ಕರೆದಾಗಲೆ ಮತ್ತೆ ಎಚ್ಚರವಾದದ್ದು , "ಥ್ಯಾಂಕ್ಸ್" ಅನ್ನುತ್ತ ಚಹ ಇಸ್ಕೊಂಡೆ
ಚಹ ಕೊಡುತ್ತ ಅವನೆ ಮಾತು ಮುಂದುವರೆಸಿದ " ಜಲ್ದಿ ಕತಮ್ ಕರ್ , ಕಹಿ ಗುಮ್ನೆ ಚಲ್ತೆ ಹೈ , ತುಮ್ಹೆ ಶೂ ಲೇನಾತಾನಾ , ಮಾರತಹಳ್ಳಿ ಚಲ್ತೆ ಹೈ , ಪಿರ್ ಶ್ಯಾಮ್ಕೊ ಪಿವಿಆರ್ ಮೆ ಮೂವಿ ದೆಖ್ಕೆ , ಸಿಲ್ವರ್ ಮೆಟ್ರೊಮೆ ಖಾನಾ ಖಾಕೆ ಆಯೆನ್ಗೆ ಚಲೋ "
ಅವನು ಕರೀತಾ ಇದ್ರು ನನಗೆ ಹೊಗೋ ಮನಸಿಲ್ಲ , " ಯಾರ್ ಆಜ್ ನಹಿ , ತಬಿಯತ್ ಕುಚ್ ಠೀಕ್ ನಹಿ ಹೈ "

" ಕ್ಯಾ ಬಾತ್ ಹೈ , ಸುಭ್ಹಸೆ ಉದಾಸ್ ಹೊ ಕ್ಯಾ ಹುಆ , ಡೊಕ್ಟರ ಕೆ ಪಾಸ್ ಲೆಚಲೂ .... "

ವಿಕ್ರಮ ಮಾತಡುತ್ತಿದ್ದ ಆದರೆ ನಾನು ಮಾತ್ರ ಹಿಂದೆ ಹಿಂದೆ ಸಾಗುತ್ತಿದ್ದೆ, ನೆನಪಿನ ಅಂಗಳಕ್ಕೆ ಜಾರಿದ್ದೆ,

ನಾನು ಮತ್ತೆ ವಿಕ್ರಮ್ ಮೂರು ವರ್ಷಗಳ ಹಿಂದೆ ಬೆಟ್ಟಿ ಆಗಿದ್ದು , ಆ ಭೇಟಿ ಒಂದು ಆಕಸ್ಮಿಕವೇ ಸರಿ ...
ನನಗೆ ಅವನ ಪರಿಚಯ ಇಲ್ಲ , ಅವನಿಗೆ ನನ್ನ .ಇಬ್ಬರು ಬೆಂಗಳೂರಿಗೆ ಹೊಸಬರು ಎನ್ನುವುದು ತಿಳಿದಿದ್ದು ಈ ಘಟನೆಯಿಂದಾಗಿ,

ಕಂಪನಿಯ ಮೊದಲ ದಿನ , ಇಂಡಕ್ಷನ್ ಮುಗಿಸಿಕೊಂಡು ಹೊರಡುವಾಗ ಸರಿ ಸುಮಾರು ೭ ಗಂಟೆ , ತುಂತುರು ಮಳೆ ಬೇರೆ ,
ಎಲ್ಲರು ಬಸ್ಸಿಗಾಗಿ ಕಾಯ್ತಾ ಇದ್ದರು , ನನಗೆ ಮೆಜೆಸ್ಟಿಕ್ ಗೆ ಹೋಗಿ ಅಲ್ಲಿಂದ ಬೇರೆ ಬಸ್ಸು ಹಿಡಿಯಬೆಕಿತ್ತು , ಆದರೆ ಹೇಗೆ ಹೋಗುವುದು ಗೊತ್ತಿಲ್ಲ ಅಲ್ಲೆ ಪಕ್ಕದಲ್ಲೆ ನಿಂತಿದ್ದ ಒಬ್ಬನನ್ನು ಕೇಳೊಣವೆಂದು ತಿರುಗಿದೆ ಅನಾಮತ್ತಾಗಿ ಮತ್ತೊಂದು ವ್ಯಕ್ತಿ
" ಎಕ್ಸಕ್ಯುಸ್ಮಿ , ಮೆಜೆಸ್ಟಿಕ್ ಕೊ ಕೌನ್ಸ ಬಸ್ಸ್ ಲೆನಾ ಹೈ " ಅಂತ ನಾನು ಕೇಳಬೆಕೆಂದುಕೊಂಡಿರುವ ಪ್ರಶ್ನೆಯನ್ನೆ ನನಗೆ ಕೇಳಿದ ,
ನಾನು ಮುಜುಗರದಿಂದ " ಐ ಡೊಂಟ್ ನೊ" ಅಂದೆ . ಇಬ್ಬರಿಗೂ ಹೋಗಬೇಕಾಗಿರುವುದು ಒಂದೆ ಕಡೆ ಆದರೆ ಬಸ್ಸ್ ನಂಬರ್ ಗೊತ್ತಿಲ್ಲ . ಅವನೇ ಮತ್ತೆ " ಆಪ್ ಕನ್ನಡ್ ಜಾಂತೆ ಹೊ ತೊ , ಜರಾ ಬಸ್ಸ ಕಾ ಬೋರ್ಡ್ ದೆಕಕೆ ಬತಾಒನಾ ಪ್ಲೀಸ್ " ಅಂದ.
ಟೆನ್ಶ್ಯನ್ ಲ್ಲಿ ನನಗೆ ಈ ವಿಚಾರ ಹೊಳೆದೆ ಇರಲಿಲ್ಲ . ಒಂದು ಬಸ್ಸ್ ಬಂತು ,
ಒಮ್ಮೆಗೆ ಅವನು " ಕ್ಯಾ ಲಿಖ್ಹಾ ಹೈ " ಅಂದ .
ನಾನು ಬೋರ್ಡ ಮೇಲೆ ಕಣ್ಣಾಡಿಸಿ " ಕೆ ಆರ್ ಮಾರ್ಕೆಟ್ " ಅಂದೆ , ಅದೆಲ್ಲಿ ಅಂತಾನು ನನಗೆ ಗೊತ್ತಿಲ್ಲ .
ಅಷ್ಟರಲ್ಲಿ ಪಕ್ಕದವರೊಬ್ಬರು , ನೀವು ಈ ಬಸ್ಸ್ ಹತ್ತಿ ಟವ್ನ್ ಹಾಲ್ ಇಳಿರಿ , ಅಲ್ಲಿಂದ ಮೆಜೆಸ್ಟಿಕ್ ಗೆ ಬಹಳ ಬಸ್ಸು ಸಿಗುತ್ತೆ ಅಂದರು.
ಸರಿ ಅಂತು ಆ ಬಸ್ಸು ಹತ್ತಿ , ಎಲ್ಲೆಲ್ಲೊ ಇಳಿದು , ನಾನು ಉಳಿದುಕೋಡಿರುವವರ ಮನೆ ಸೇರಿದಾಗ ೯ ಗಂಟೆ.

ನಂತರದ ಕೆಲವು ದಿನ ಅವನ ಭೇಟಿ ಆಗಿರಲಿಲ್ಲ. ನಿಜವೆಂದರೆ ಆವತ್ತು ಟೆನ್ಶನಲ್ಲಿ ಅವನ ಮುಖ ಸರಿ ನೋಡಿರಲಿಲ್ಲ .ಹಾಗಾಗಿ ಎದುರಿಗೆ ಬಂದರು ಅವನೇ ಅನ್ನುವುದು ಕಷ್ಟವಾಗ್ತಿತ್ತು. ಸ್ವಲ್ಪ ದಿನದ ನಂತರ ಒಂದಿನ ಕ್ಯಾಂಟಿನಲ್ಲಿ ಒಬ್ಬ ನನ್ನ ಕಂಡು , " ಉಸ್ ದಿನಕೆಲಿಯೆ ಥ್ಯಾಂಕ್ಸ್ , ಆ ಯಮ್ ವಿಕ್ರಮ್ " ಅಂದ , ನನಗೆ ಒಮ್ಮೆಲೆ ಎನು ಗೊತ್ತಾಗಲೆ ಇಲ್ಲ. ನನ್ನ ಮುಖ ನೋಡಿ ಅವನೆ ಹೇಳಿದ , ಫಸ್ಟ ಡೇ , ಬಸ್ ಸ್ಟ್ಯಾಂಡ್ ಆಂತೆಲ್ಲಾ ಗೊಣಗಿದಾಗ ನನಗೆ ನೆನಪಾಯಿತು.ನಾನು ನನ್ನ ಹೆಸರು ಹೇಳಿ ಕೈ ಕುಲುಕಿ ನಡೆದೆ .
ಮಧ್ಯಾನ್ಹ ಮತ್ತೆ ಸಿಕ್ಕಿದವ "ಯಹಾ ಪರ್ ನಯಾ ಹೂನ್ , ಕಿಸಿಕೊ ಜಾನತಾ ನಹಿ ಇಸ್ಲಿಯೆ ಆಪ್ ಕಾ ರೂಮ್ ಮೆ ಜಗಾ ಹೈ ತೊ ಮೈ ಆಪ್ ಕೆ ಸಾತ ರೆಹ್ನೆ ಆವು, " ಅಂದ.ಇನ್ನು ಸರಿ ಪರಿಚಯವೇ ಆಗಿಲ್ಲ ಆಗಲೆ ಜೊತೆಗೆ ರೂಮ್ ಮಾಡೋಣ ಅಂತಿದಾನಲ್ಲ ಅನಿಸ್ತು. ನಾನು ಇನ್ನು ಪರಿಚಯದವರ ಮನೆಯಲ್ಲಿ ಉಳಿದಿದ್ದು , ರೂಮ್ ಹುಡುಕ್ತಾ ಇದ್ದೆ . ಅವನಿಗೂ ಅದನ್ನೆ ಹೇಳಿ ಅಲ್ಲಿಂದ ಜಾಗ ಖಾಲಿಮಾಡಿದೆ .ನಮ್ಮ ಕಡೆಯವರ ಜೊತೆ ರೂಮ್ ಮಾಡಿದ್ರೆ ಅನುಕೂಲ ಅಂತ ಅವನನ್ನ ಮರೆತಿದ್ದೆ. ಮತ್ತೆ ಮರುದಿನ ಸಿಕ್ಕಿದವನೇ,
" ಎಕ್ ರೂಮ್ ಮಿಲಾ ಹೈ ,ರೆಂಟ್ ಬಿ ಕಮ್ ಹೈ , ತುಮ್ ಕಹೊ ತೊ ಬಾತ್ ಕರೂಂಗಾ , ಕ್ಯಾ ಖಯಾಲ್ ಹೈ " ಅಂದ .
ಇವನೊಳ್ಳೆ ಗಂಟು ಬಿದ್ದನಲ್ಲಾ ಅನಿಸ್ತು . " ಇಲ್ಲ ನಿನ್ನ್ ಜೊತೆ ಇರೊಲ್ಲ " ಅಂತಾ ಹೇಳೊಣ ಅನಿಸಿಬಿಡ್ತು . ಆದರೆ ಯಾಕೋ ಗೊತ್ತಿಲ್ಲ " ಠೀಕ ಹೈ " ಅಂದುಬಿಟ್ಟೆ. ಆಮೇಲೆ ತಪ್ಪು ಮಾಡಿದೆನಾ ಅನಿಸ ತೊಡಗಿತ್ತು. ನೋಡಿದರೆ ಶ್ರೀಮಂತ ಮನೆ ಹುಡುಗನ ತರಹ ಇದ್ದ , ಉತ್ತರ ಭಾರತದವನು ಬೇರೆ , ಹೇಗೆ ಹೊಂದಿಕೊಳ್ಳೊದು ಅನ್ನುವ ಭಯ.
ಮರುದಿನ ಕಾಲ್ ಮಾಡ್ತಿನಿ ಅಂದವನು ನಾಪತ್ತೆ , ವೀಕೆಂಡ್ ಅಂತಾ ಮಜಾ ಮಡ್ತಾ ಇದಾನೆ ಅಂದುಕೊಂಡೆ. ಆದರೆ ನಾನು ಬೇರೆ ರೂಮ್ ಹುಡುಕ ಬೇಕು ,ಅವನಿಗೆ ತಿಳಿಸೋಣ ಅಂದರೆ ಫೊನ್ ನಂಬರ ಸಹ ಇಲ್ಲ, ನನ್ನ ನಂಬರ್ ಅವನಿಗೆ ಕೊಟ್ಟಿದ್ದೆ ಆದರೆ ಅವನ ನಂಬರ ಪಡೆದಿರಲಿಲ್ಲ. ಸರಿ ಅವನು ನೋಡಲಿ, ನಾನು ಒಂದು ರೂಮ್ ನೋಡಿ ಯಾವುದು ಬೇಕೊ ನಿರ್ಧರಿಸಿದರಾಯಿತು ಅಂತಾ , ವೀಕೆಂಡ ಪೂರ್ಣ ಸುತ್ತಿದ್ದೆ ಸುತ್ತಿದ್ದು. ಎಷ್ಟು ಸುತ್ತಿದರು ನನ್ನ ಬಡ್ಜೆಟಗೆ ತಕ್ಕ ರೂಮ್ ಸಿಗಲಿಲ್ಲ . ಏಜೆಂಟೆ ಹಿಡಿದರೆ ಅವರಿಗೆ ಒಂದು ತಿಂಗಳ ರೆಂಟ್ ಕೊಡಬೇಕು. ದುಬಾರಿ ಜೀವನ ಅನಿಸಿಬಿಡ್ತು. ಸುತ್ತಿ ಸುತ್ತಿ ಬೇಜಾರಾಗಿ ಕಡೆಗೂ ಏಜೆಂಟನ ಹಿಡಿಯ ಬೇಕಾಯ್ತು.

ಸೋಮವಾರ ಬೆಳಿಗ್ಗೆ ಕಂಪನಿಯಲ್ಲಿ ಸಿಕ್ಕಿದವನೆ "ಸೊರಿ" ಅಂದ. ನನ್ನ ಚಹರೆ ನೋಡಿಯೆ ತಿಳಿದಿರ ಬೇಕು ಬೇಜಾರಗಿದೆ ಅಂತ, ಅವನೆ ಮತ್ತೆ, "ಪೆಹಲಾ ವೀಕೆಂಡತಾನಾ , ಇಸ್ಲಿಯೆ ದೊಸ್ತೊಂಕೆ ಸಾತ್ ಕಮರ್ಷಿಯಲ್ಲ ಸ್ಟ್ರೀಟ್ ಗಯಾ ಥಾ , ಬೂರಾ ಮತ್ತ್ ಮಾನನಾ " ಅಂದ.ನನ್ನ ಪರಿಸ್ಥಿತಿ ನನಗೆ , ಮೊದಲು ನೆಂಟರ ಮನೆ ಬಿಡಬೇಕು , ಆದರೆ ಇ ಆಸಾಮಿ ರೂಮ್ ನೋಡೆ ಇಲ್ಲ ಅನಿಸುತ್ತೆ ಬದಲು ಸುತ್ತೋಕೆ ಹೋಗಿದಾನೆ,ಆ ಪ್ರೆಂಡ್ಸ್ ಜೊತೆನೆ ಇರ್ಬೆಕಿತ್ತು ಅಂತ ಹೇಳೋಷ್ಟು ಕೋಪ ಬಂದಿತ್ತು ಆದರು ಸಾವರಿಸಿಕೊಂಡು , "ಠೀಕ್ ಹೈ , ಒನರ್ ಸೆ ಬಾತ್ ಹುಯಿ " ಅಂತ ಕೇಳಿದೆ,ಅವನು
" ನಹಿ ಯಾರ್ , ವೊ ರೂಮ್ ಠೀಕ್ ನಹಿ ಹೈ , ಕಹಿ ಔರ್ ಡೂಂಡತೆ ಹೈ "
ನಾನು " ಮೈ ಎಕ್ ರೂಮ್ ದೆಖ್ಹಾ ಹುಂ , ಒನರ್ ಸೆ ಬಾತ್ ಹುಯಿ ಹೈ , ತುಮ್ ಚಾಹೆತೂ ಆಕ್ ದೆಕಲೂ , ಮೇರಾ ವಹಾ ಜಾನಾ ಕನ್ಪರ್ಮ್ ಹೈ "ಅಂದೆ ."ಕ್ಯಾ ಯಾರ್ ವೀಕೇಂಡ್ ಮೆ ಯಹಿ ಕಿಯಾ ಕ್ಯಾ , ಗೂಮನೆ ನಹಿ ಗಯಾ ಕ್ಯಾ" ಅಂತಾ ಕೇಳಿದ,
ನನ್ನ ಸಿಟ್ಟು ಇಷ್ಟರಲ್ಲೆ ನೆತ್ತಿಗೇರಿತ್ತು , ಮತ್ತಷ್ಟು ಕೂಪದಲ್ಲಿ "ದೆಕನಾ ಹೈ ತೊ ಕಾಲ್ ಕರ್ " ಅಂತ ಹೇಳಿ ಅಲ್ಲಿಂದ ನಡೆದೆ.
ನನ್ನ ಹಿಂದೆ ಓಡಿ ಬಂದು " ಗುಸ್ಸ ಮತ್ತ್ ಕರೊ ಜಾನ್ , ಆಜ್ ಶ್ಯಾಮ್ಕೊಹಿ ಚಲ್ತೆ ಹೈ" ಅಂದ.
ನನಗು ಬೇರೆ ಯಾರು ಸಿಕ್ಕಿಲ್ಲವಾದ್ದರಿಂದ , ಸರಿ ಇವನಾದ್ರೆ ಇವನು , ಗುಣ ಹೇಗೊ ಗೊತ್ತಿಲ್ಲ, ಆದರೆ ಭಾಷೆಗೆ ತೊಂದರೆ ಇಲ್ಲ ಸ್ವಲ್ಪ ದಿನ ಇದ್ದರಾಯಿತು ಅಂತ ಅಲೋಚಿಸಿ ಸಂಜೆ ಸಿಗುವುದಾಗಿ ಹೇಳಿ ಕೆಲಸಕ್ಕೆ ತೆರಳಿದ್ದೆ.
ಇದಾದ ಸ್ವಲ್ಪವೆ ದಿನದಲ್ಲಿ ಇಬ್ಬರು ನಾನು ನೋಡಿದ ರೂಮನಲ್ಲೆ ಇರತೊಡಗಿದೆವು. ಅವನ ಹಾಸ್ಯ ಬರಿತಾ ಮಾತು , ಪೋಲಿ ಜೋಕ್ ಗಳು, ನಡತೆ , ಮೊದಲ ಭೇಟಿಯ ಭಯವನ್ನು ಓಡಿಸಿ ಬಿಟ್ಟಿತ್ತು. ಪರ್ವಾಗಿಲ್ಲ ಮನುಷ್ಯ ಒಳ್ಳೆಯವನೆ ಅನ್ನೊಷ್ಟು ಆಪ್ತವಾಗ ತೊಡಗಿದ್ದ. ನನ್ನ ನಿರ್ಧಾರ ತಪ್ಪಾಗಲಿಲ್ಲ ಅಂತ ಅಂದು ಕೊಳ್ಳುತ್ತಿದ್ದೆ.

ಆದರೆ ಅಂದು ನಡೆದ ಘಟನೆ , ನನ್ನ ನಿರ್ಧಾರವನ್ನೆ ಬುಡಮೇಲಾಗಿಸುವದರಲ್ಲಿತ್ತು .....

ಮುಂದುವರೆಯುತ್ತದೆ ......
====================================================

ಕಥೆಗಾರ ನಾನಲ್ಲ , ಆದರೂ ನನ್ನ , ಮತ್ತು ಕೆಲವು ಮಿತ್ರರ ಅನುಭವಗಳಿಗೆ ಸ್ವಲ್ಪ ಖಾರ , ಮಸಾಲೆ ಸೇರಿಸಿ ಕಥಾ ರೂಪ ಕೊಟ್ಟು ಬರೆಯಲು ಪ್ರಯತ್ನಿಸಿದ್ದೆನೆ.ಏಷ್ಟು ಭಾಗ ಆಗಬಹುದು ಎಂದು ಇನ್ನು ನಿರ್ಧರಿಸಿಲ್ಲ , ನಿಮ್ಮೆಲ್ಲರ ಅಭಿಪ್ರಾಯವನ್ನು ನೋಡಿ ಬರೆಯೋಣವೆಂದುಕೊಂಡಿದ್ದೇನೆ. ಇಷ್ಟು ಸುಧೀರ್ಘ ಕಥೆಗೆ ಇದೆ ಮೊದಲ ಬಾರಿ ಪ್ರಯತ್ನಿಸುತ್ತಿರುವುದು. ಹೇಗಿದೆ ಅಂತ ಸ್ಪಂದಿಸಿ , ತಪ್ಪಿದ್ದಲ್ಲಿ ತಿದ್ದಿ ,ಕಥಾ ಶೈಲಿ ಕೊಂಚ ವಿಭಿನ್ನವಾಗಿದೆ,ಹಿಂದಿ ಭಾಷೆಯ ಬಳಕೆ ಬಹಳ ಇದೆ , ಸಹಕರಿಸಿ , ಅಭಿಪ್ರಾಯ ತಿಳಿಸಿ.ನಾನಿನ್ನು ಬರಹ ಲೋಕದಲ್ಲಿ ಅಂಬೆಗಾಲಿಡುತ್ತಿರುವ ಹಸುಗೂಸು .. ಕೈ ಹಿಡಿದು ನಡೆಸುವಿರೆಂದು ನಂಬಿದ್ದೇನೆ .
=====================================================

9 comments:

Dileep Hegde said...

ಶ್ರೀಧರ್,

ಕಥೆಗಾರ ನಾನಲ್ಲ ಅಂತ ಹೇಳ್ತಾನೇ ಒಳ್ಳೇ ಕಥೆ ಬರೀತಿದೀರಾ..
ಹಿಂದಿ ಭಾಷೆಯ ಬಳಕೆ ಜಾಸ್ತಿಯಿದ್ದರೂ, ಅದು ಕಥೆಗೆ ಸಹಜತೆಯ ರೂಪ ಕೊಟ್ಟಿದೆ....
ಶೈಲಿ ಇಷ್ಟವಾಯ್ತು..
ಆ ದಿನ ನಡೆದ ಘಟನೆಯಾದ್ರೂ ಏನು..? ತಿಳಿಯುವ ಕುತೂಹಲ ಜಾಸ್ತಿಯಾಗ್ತಿದೆ..
ಬೇಗ ಮುಂದಿನ ಭಾಗ ಬರಲಿ... :)

ದಿಲೀಪ್ ಹೆಗಡೆ

shivu.k said...

ಶ್ರೀಧರ್,

ಮೊದಲು ಓದಿದಾಗ ನಿಮ್ಮ ಕತೆಯೇ ಅನ್ನಿಸಿತು. ಕೊನೆಯಲ್ಲಿ ಕತೆಗಾರ ನಾನಲ್ಲ ಅಂದಿದ್ದೀರಿ. ಆದ್ರೆ ಕುತೂಹಲದಿಂದ ಓದಿಸಿಕೊಂಡು ಹೋಗುತ್ತಿದೆ..ಮುಂದುವರಿಸಿ..

Ittigecement said...

ಶ್ರೀಧರ್...

ಸೊಗಸಾಗಿದೆ...
ನಿಮ್ಮ ಶೈಲಿಯೂಕೂಡ...

ಮುಂದೇನಾಯಿತು ಅನ್ನೋ ಕುತೂಹಲ...

ಮುಂದು ವರೆಸಿರಿ....

shridhar said...

ದಿಲೀಪ,
ಹಲವರ ಅನುಭವ ಈ ಕಥೆಗೆ ಕಾರಣ ಎನ್ನ ಬಹುದು, ಇಲ್ಲಿ ಬರೆದಿರುವುದು ಯಾವುದೇ ಉತ್ತರ ಭಾರತದ ವ್ಯಕ್ಥಿಯನ್ನು ಹೀಯಳಿಸುವುದಕ್ಕಲ್ಲಾ , ಯಾವ ರೀತಿಯಲ್ಲಿ ತಪ್ಪು ಕಲ್ಪನೆ ಸ್ನೇಹ ಸ್ನೇಹಿತರನ್ನು ದೂರ ಮಾಡಬಹುದು ಅನ್ನುವುದನ್ನು ತೋರಿಸಲಿಕ್ಕೆ ಮಾತ್ರ. ನಾನು ಉತ್ತರ ಭಾರತದಲ್ಲಿ ವಿದ್ಯಾಭ್ಯಾಸ ಮಾಡಿರುವುದರಿಂದ , ಹಿಂದಿ ಭಾಷೆಯನ್ನು ಬಳಸಲು ಅನೂಕುಲವಾಯಿತು.
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

shridhar said...

ಶಿವು,
ಇದನ್ನು ಬರೆದಿದ್ದು ನಾನೆ ಆಗಿದ್ದರೂ,. ಇದರಲ್ಲಿ ಕೇಲವು ಅನುಭವಗಳ ಎರವಲು ಕೂಡ ಇದೆ. ಇಷ್ಟು ದೀರ್ಘ ಬರಹ ಇದೆ ಮೊದಲ
ಬಾರಿಗೆ ಅದಿಕ್ಕೆ ಅಂದಿದ್ದು ನಾನು ಕಥೆಗಾರ ಅನ್ನಿಸಿಕೊಳ್ಳುವಷ್ಟು ಇನ್ನು ಬೆಳೆಯಲಿಲ್ಲ ಎಂದು.
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

shridhar said...

ಪ್ರಕಾಶಣ್ಣ,
ಶೈಲಿಯನ್ನು ನಿಮ್ಮೆಲ್ಲರ ಬರಹವನ್ನು ನೋಡಿಯೆ ಕಲಿಯುತ್ತಿರುವುದು.
ನಿಮ್ಮ ಪ್ರೊತ್ಸಾಹ ಎಂದಿನಂತೆ ಅಗತ್ಯವಾದುದು. ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

Shweta said...

ಭಟ್ಟನ್ನ ......
ಸಕ್ಕತ್ತಾಗಿದ್ದು...ನಂಗೆ ಹಿಂದಿ ಬತ್ತಿಲ್ಲೆ ಮಾರಾಯ...ಕನ್ನಡ ಪ್ಲೀಸ್....
ಭಾಳ ಲೇಟ್ ಆಗಿ ಹೇಳಿದ್ದೆ.. ಅದಿಕ್ಕೆ , ಮುಂದಿನ ಭಾಗದಲ್ಲಿ ಕಾಮೆಂಟ್ ಬರಿತೆ...

-ಶ್ವೇತಾ

Anonymous said...

nimma shaili chennagiddu,, ishta aatu.. kathe kutoohala keraLstaa iddu..
innoo aneka barahagaLanna nimminda oduva haange aagli..:)

Anonymous said...

hi, mundina baaga bega barali