ಬಡ್ತಿ ಸಿಕ್ಕಿತು ಎನಗೆ ನೀ ಮಡದಿಯಾಗೆ
ಕೈ ಹಿಡಿದೆ ನೀನು ಮನಕೆ ಸಂತಸ ತಂದೆ
ಮದುರ ಕ್ಷಣವದು ಬೆರೆತಂತೆ ಹಾಲು ಜೇನು
ತನುಮನದ ರೋಮಾಂಚನ ಅರಿಯದಾದೆನು
ಕಳೆದಿದೆ ವರುಷ ತುಂಬಿ ಮನೆಮನದಲ್ಲಿ ಹರುಷ
ಒಮ್ಮೆ ಕೇಳಿದ್ದೆ ನಿನಗೆ ಕೊಡುವೆಯೆನನ್ನು
ಮೊದಲ ವರ್ಷಕ್ಕೆ ಮರೆಯದ ಕೊಡುಗೆ ...
ನಗುತ ನೀ ಹೇಳಿದೆಯನಗೆ ಕರೆದೊಯ್ಯುವೆ
ಇನ್ನೊಂದು ಬಡ್ತಿಯೆಡೆಗೆ..
ಸಂತಸದ ಕ್ಷಣವಿದು ನಾಮರೆಯೆ ಎಂದು
ಮೀಸೆ ತಿರುವುತ ಹೇಳುತಿಹೆ
ಗಂಡು ಮಗುವಿನ ತಂದೆ ನಾನಿಂದು..
ಸುಖ ಶಾಂತಿ ಅಭಿವೃದ್ಧಿ ನಮ್ಮದಾಗಿರಲಿ
ಭಗವಂತನ ದಯೆ ಎಂದೆಂದು ಹೀಗೆ ಇರಲಿ !!!!!
ಸುಮಾರು ೩ ತಿಂಗಳಿನಿಂದ ಬ್ಲಾಗ್ ಲೋಕಕ್ಕೆ ಬಂದಿರಲಿಲ್ಲ. ಈಗ ಈ ಕುಶಿಯ ಕ್ಷಣವನ್ನು ನಿಮ್ಮೊಡನೆ ಹಂಚಿಕೂಳ್ಳಬೇಕೆನಿಸಿತು
ಅದಕ್ಕೆ ಸುಮ್ಮನೆ ಮನಸ್ಸಿಗೆ ಬಂದ ಶಬ್ದಗಳನ್ನು ಪ್ರಯೋಗಿಸಿ ಕುಶಿಯನ್ನು ಹಂಚಿಕೊಂಡಿದ್ದೇನೆ. ನಿಮ್ಮೆಲ್ಲರ ಹಾರೈಕೆ
ಆಶೀರ್ವಾದ ಸದಾ ನಮ್ಮೊಂದಿಗಿರಲಿ :).
ಸಂತಸದ ಕ್ಷಣವನ್ನು ಅನುಭವಿಸಲು ಮತ್ತೆ ಬ್ಲಾಗ ಲೋಕದಿಂದ ಸ್ವಲ್ಪ ದಿನ ದೂರವಾಗುತ್ತಿದ್ದೇನೆ.
ಮತ್ತಷ್ಟು ವಿಷಯಗಳೊಡನೆ ಮರಳಿ ಅಪ್ಪಳಿಸುವೆ .. ಅಲ್ಲಿವರೆಗೆ ..............
!!! ಹೊಸ ವರುಷದ ಶುಭಾಶಯಗಳು!!!
15 comments:
abhinadanegalu.
monne nangoo gottaatu..:):)
ಶುಭಾಶಯ ಗುರುವೇ.. ಬೆಪ್ಪ ಆಗಿದ್ದಕ್ಕೆ. :-)
congrats
abhinandanegalu
ಬಡ್ತಿ ಸಿಕ್ಕಿದ್ದಕ್ಕಾಗಿ ಅಭಿನಂದನೆಗಳು. ಬಡ್ತಿ ಮರುಕಳಿಸಲಿ ಎಂದು ಹಾರೈಸಲೆ? ಹೊಸ ವರುಷದ ಶುಭಾಶಯಗಳು.
congrats ಶ್ರೀಧರಣ್ಣ & ಅತ್ತಿಗೆ...
Oye Shridharappooo,
Congrats,Treatu nagokkellava?
'Shreyas' ge olledaagali.
ಅನಂತ ಅಭಿನಂದನೆಗಳು ಸರ್...
-ಚಿತ್ರಾ
ಶ್ರೀಧರ್ ಅವರೇ,
ಅಭಿನಂದನೆಗಳು ನಿಮಗೆ ಮತ್ತು ನಿಮ್ಮ ಮನೆಯವರಿಗೆ !!
ಒಳ್ಳೆಯದಾಗಲಿ..
ಹಾರೈಸಿ , ಆಶೀರ್ವದಿಸಿ ,ಅಭಿನಂದಿಸಿದ ಎಲ್ಲರಿಗೂ ಧನ್ಯವಾದಗಳು.
ನನ್ನ ಮಗನಿಗೆ ಶ್ರೇಯಸ್ ಎಂದು ನಾಮಕರಣ ಮಾಡಿದ್ದೇನೆ.
ಶ್ರೀಧರ್ ನಿಮಗೆ ಭಡ್ತಿ ಸಿಕ್ಕಿದಕ್ಕೆ ಅಭಿನಂದನೆಗಳು. ಹೊಸವರ್ಷದ ಶುಭಾಶಯಗಳು. ನನ್ನಪುಟಕ್ಕೆ ಬಂದು ಕಾಮೆಂಟ್ ಬರೆದದಕ್ಕೆ ಥ್ಯಾಂಕ್ಸ್.
ನಿಮಗೆ ಅಭಿನ೦ದನೆಗಳು ಹಾಗೂ ಹೊಸವರ್ಷದ ಶುಭಾಶಯಗಳು.
೨೦೧೧ರಲ್ಲಿ ಸಿಹಿಕ್ಷಣಗಳು ಎದುರಾಗಲಿ.
abhinandanegalu.mattu shubhaashayagalu.
abhinandanegalu.mattu shubhaashayagalu.
Post a Comment