Saturday, July 9, 2011

YOSEMITE NATIONAL PARK

ಅಂತೂ ಹಲವು ವರುಷಗಳ ನಂತರ ನಾನೀಗ ಅಮೆರಿಕ ದೇಶದ ಕ್ಯಾಲಿಫೋರ್ನಿಯಾ ರಾಜ್ಯದ ಸ್ಯಾನ್ ಹೋಸೆ [ San Jose ] ಎಂಬಲ್ಲಿಗೆ ಕಾರ್ಯ ನಿಮಿತ್ತ ಬಂದಿದ್ದೇನೆ . ನಾನು ಬೇರೆ ದೇಶಕ್ಕೆ ಹೋಗುತ್ತಿದ್ದೇನೆ ಇಲ್ಲಿ ಊಟ ತಿಂಡಿ ಸಮಸ್ಯೆ ಆಗಬಹುದು ಎಂದೆಲ್ಲ ಅನಿಸಿತ್ತು ಆದರೆ ಇಲ್ಲಿ ಬಂದ ಮೇಲೆ ನನಗೆ ಆ ಸಮಸ್ಯಯೆ ಉಂಟಾಗಲಿಲ್ಲ ಏಕೆಂದರೆ ಇಲ್ಲಿ ಭಾರತದವರ ಜನ ಸಂಖ್ಯೆ ತುಂಬಾನೇ ಇದೆ . ಮೊದಲೇ ಇದು ಸಿಲಿಕಾನ್ ವ್ಯಾಲಿ .. ಅಂದಮೇಲೆ ಕೇಳಬೇಕೆ ... ಇಲ್ಲಿಯ ವಾತಾವರಣ ಕೂಡ ನಮ್ಮಲ್ಲಿಯಂತೆ ..ದೇಸಿ ಅಂಗಡಿಗಳು .. ದೇಸಿ ಹೋಟೆಲಗಳು .. ಯಾವುದಕ್ಕೂ ತಲೆ ಕೆಡಿಸಿಕೊಳ್ಳುವ ಸಮಸ್ಯಯೆ ಇಲ್ಲ .. ಆದರೆ ಒಂದೇ ಸಮಸ್ಯೆ ಅಂದರೆ ಜನ ನಮ್ಮವರಾದರು ....... ಹೋಗಲಿ ಆ ವಿಷಯ ಬೇಡ ಈಗ ...

ಬಂದು ೧ ತಿಂಗಳಾಗುತ್ತಾ ಬಂದರು ಎಲ್ಲಿಯೂ ಹೊರಗಡೆ ತಿರುಗಾಡಲು ಹೋಗಲು ಆಗಿರಲಿಲ್ಲ ... ಅಂತೂ ಸಮಯ ಹೊಂದಿಸಿ YOSEMITE NATIONAL PARK ಗೆ ಗೆಳೆಯರೆಲ್ಲರೂ ಸೇರಿ ಹೊರಟು ನಿಂತೆವು ..ನಾವಿರುವ ಜಾಗದಿಂದ ಸುಮಾರು ೩೫೦ ಕಿಮಿ ದೂರ ..ಕಾರಿನಲ್ಲಿ ಕ್ರಮಿಸಿದರೆ ೪ ಗಂಟೆಗಳ ಪ್ರಯಾಣ ..ಇದೊಂದು ದೊಡ್ಡ ಕಣಿವೆ .. ಮದ್ಯದಲ್ಲಿ ರಭಸವಾಗಿ ಹರಿಯುವ ನದಿ . ದೊಡ್ಡ ದೊಡ್ಡ ಬೆಟ್ಟಗಳು .. ಚಾರಣ ಪ್ರಿಯರಿಗೆ ಚಾರಣಕ್ಕೆ ಅವಕಾಶ ..Rock climbing .. kayaking ... Cycling .. picnic spot ಎಲ್ಲವು ಇದೆ .. ಒಟ್ಟಿನಲ್ಲಿ ಒಂದು ಸುಂದರ ತಾಣ ..
ಅಲ್ಲಿಯ ಕೆಲವು ಫೋಟೋಗಳು .....

ಪ್ರಾರಂಭದಲ್ಲಿ ಸಿಗುವ ಮರ್ಸೆಡ್ ನದಿ ಮತ್ತು ಜಲಪಾತ ... ಈಗಷ್ಟೆ ಬೇಸಿಗೆ ಶುರುವಾದ್ದರಿಂದ ಬೆಟ್ಟದ ಮೇಲಿನ ಹಿಮವೆಲ್ಲ ಕರಗಿ ನದಿಯಲ್ಲಿ ನೀರು ತುಂಬಾನೇ ಇದೆ .. ಮುಟ್ಟಲು ಆಗದಷ್ಟು ತಂಪು ..


ಈ ಜಲಪಾತದ ಹೆಸರು Bridal veil -- ಇಲ್ಲಿನ ಮದುವೆಯಲ್ಲಿ ಹುಡುಗಿಯ ಮುಖ ಮುಚ್ಚುವ ಪರದೆಯಂತೆ ನೀರು ದುಮ್ಮುಕ್ಕುವುದರಿಮ್ದ ಈ ಹೆಸರು ..Upper and Lower Yosemite falls

Mirror Lake
Nice valley View adn me :)Frozen lake , My first ever Snow experience :)


Mono Lake [ Panoramic view ]ಮುಂದಿನ ವಾರ ಇನ್ನೆಲ್ಲಿ ಎಂದು ನೋಡಬೇಕು ... :)

Thursday, March 24, 2011

ಸೃಷ್ಟಿಯ ವೈಚಿತ್ರ್ಯಹಿಂದಿನ ತಿಂಗಳು ಊರಿಗೆ ಹೋದಾಗ ರಸ್ತೆ ಬದಿಯಲ್ಲಿ ಕಂಡು ಬಂದ ಮಿಡತೆ [??!!] ...ನಮ್ಮನ್ನು ಕಾಣುತ್ತಿದ್ದಂತೆ ತನ್ನ
ಎರಡು ಕೈಗಳನ್ನು ಮೇಲಕ್ಕೆತ್ತಿಕೊಂಡಿತು. ತಾನು ನಿರಾಯುಧನಾಗಿದ್ದೇನೆ/ಶರಣಾಗಿದ್ದೇನೆ ಎನ್ನುವಂತೆ ತೋರಿಸುತ್ತಿರುವುದೋ ಅಥವ ಎದುರಿಸಲು ಸನ್ನದ್ಧವಾಗಿರುವುದೋ ಅದಕ್ಕೆ ತಿಳಿಯ ಬೇಕು ...ಸೃಷ್ಟಿಯ ವೈಚಿತ್ರ್ಯಕ್ಕೆ ಸಾಟಿ ಯಾರು ....

ಕೈಯಲ್ಲಿದ್ದದು 2mp ಮೊಬೈಲ್ ಕ್ಯಾಮರ ಮಾತ್ರ .. ಆದ್ದರಿಂದ ಇನ್ನಷ್ಟು ಫೋಟೋ ತೆಗೆಯಲು ಆಗಲಿಲ್ಲ

Monday, January 24, 2011

ಪ್ರಕೃತಿಯ ಮಡಿಲಲ್ಲಿ

ಶಿವಗಂಗಾ ಫ಼ಾಲ್ಸ್-ಶಿರಸಿನವಿಲು ಹೂವುಮೋಡದ ಒಳಗೆ


ದೇವಿಮನೆ ಘಾಟ್ [ಶಿರಸಿ-ಕುಮಟಾ ರಸ್ತೆ]ಮಾಗೋಡ ಫ಼ಾಲ್ಸ್ [ಯಲ್ಲಾಪುರ]


ಜೇನುಕಲ್ಲು ಗುಡ್ಡ - ಸುಂದರ ಕಣಿವೆಯ ನೋಟ [ ಯಲ್ಲಾಪುರ]


Thursday, December 23, 2010

ಸಂತಸದ ಕ್ಷಣ ...

ಬಡ್ತಿ ಸಿಕ್ಕಿತು ಎನಗೆ ನೀ ಮಡದಿಯಾಗೆ
ಕೈ ಹಿಡಿದೆ ನೀನು ಮನಕೆ ಸಂತಸ ತಂದೆ
ಮದುರ ಕ್ಷಣವದು ಬೆರೆತಂತೆ ಹಾಲು ಜೇನು
ತನುಮನದ ರೋಮಾಂಚನ ಅರಿಯದಾದೆನು

ಕಳೆದಿದೆ ವರುಷ ತುಂಬಿ ಮನೆಮನದಲ್ಲಿ ಹರುಷ

ಒಮ್ಮೆ ಕೇಳಿದ್ದೆ ನಿನಗೆ ಕೊಡುವೆಯೆನನ್ನು
ಮೊದಲ ವರ್ಷಕ್ಕೆ ಮರೆಯದ ಕೊಡುಗೆ ...
ನಗುತ ನೀ ಹೇಳಿದೆಯನಗೆ ಕರೆದೊಯ್ಯುವೆ
ಇನ್ನೊಂದು ಬಡ್ತಿಯೆಡೆಗೆ..

ಸಂತಸದ ಕ್ಷಣವಿದು ನಾಮರೆಯೆ ಎಂದು
ಮೀಸೆ ತಿರುವುತ ಹೇಳುತಿಹೆ
ಗಂಡು ಮಗುವಿನ ತಂದೆ ನಾನಿಂದು..

ಸುಖ ಶಾಂತಿ ಅಭಿವೃದ್ಧಿ ನಮ್ಮದಾಗಿರಲಿ
ಭಗವಂತನ ದಯೆ ಎಂದೆಂದು ಹೀಗೆ ಇರಲಿ !!!!!

ಸುಮಾರು ೩ ತಿಂಗಳಿನಿಂದ ಬ್ಲಾಗ್ ಲೋಕಕ್ಕೆ ಬಂದಿರಲಿಲ್ಲ. ಈಗ ಈ ಕುಶಿಯ ಕ್ಷಣವನ್ನು ನಿಮ್ಮೊಡನೆ ಹಂಚಿಕೂಳ್ಳಬೇಕೆನಿಸಿತು
ಅದಕ್ಕೆ ಸುಮ್ಮನೆ ಮನಸ್ಸಿಗೆ ಬಂದ ಶಬ್ದಗಳನ್ನು ಪ್ರಯೋಗಿಸಿ ಕುಶಿಯನ್ನು ಹಂಚಿಕೊಂಡಿದ್ದೇನೆ. ನಿಮ್ಮೆಲ್ಲರ ಹಾರೈಕೆ
ಆಶೀರ್ವಾದ ಸದಾ ನಮ್ಮೊಂದಿಗಿರಲಿ :).

ಸಂತಸದ ಕ್ಷಣವನ್ನು ಅನುಭವಿಸಲು ಮತ್ತೆ ಬ್ಲಾಗ ಲೋಕದಿಂದ ಸ್ವಲ್ಪ ದಿನ ದೂರವಾಗುತ್ತಿದ್ದೇನೆ.
ಮತ್ತಷ್ಟು ವಿಷಯಗಳೊಡನೆ ಮರಳಿ ಅಪ್ಪಳಿಸುವೆ .. ಅಲ್ಲಿವರೆಗೆ ..............!!! ಹೊಸ ವರುಷದ ಶುಭಾಶಯಗಳು!!!

Sunday, September 5, 2010

ತೋಟದಲ್ಲೊಂದು ಸುತ್ತು

ಬಹಳ ತಿಂಗಳುಗಳ ನಂತರ ಬೇಸಿಗೆಯಲ್ಲಿ ಅಜ್ಜಿ ಮನೆಗೆ ಹೋಗಿದ್ದೆ ... ಮಾವನ ಮಗಳ ಮದುವೆ ಇತ್ತು .. ಒಂದು ದಿನ ಮೊದಲೇ ಹೋಗಿದ್ದರಿಂದ ಬಹಳ ನೆಂಟರು ಇನ್ನು ಬಂದಿರಲಿಲ್ಲ.. ಯಾಕೋ ಬಹಳ ಬೇಜಾರು ಬರುತ್ತಿತ್ತು ... ಅದಕ್ಕೆ ತೋಟಕ್ಕೆ, ಬೆಟ್ಟಕ್ಕೆ ಒಂದು ಸುತ್ತು ಹೋಗಿ ಬರೋಣವೆಂದು ನಾನು ಮತ್ತು ನನ್ನ ಕಸಿನ್ ಕ್ಯಾಮರಾ ಹಿಡಿದು ಹೊರಟೆವು ...

ಕೆಲವೊಂದು ಕ್ಲಿಕ್ಸ್ ಇಲ್ಲಿವೆ ....

ಕೂಗಿ ಕರೆದರೆನಗೆ ಕೋಕೊ ..
ಸಾಗಿ ಹೋದರು ನೀಡಿ ಕೊಕ್ಕೋಕೊ ಕಾಯಿ ... ಮುಂಚೆ ಹಲವಾರು ತೋಟಗಳಲ್ಲಿ ಹೇರಳವಾಗಿ ಕಾಣುತ್ತಿದ್ದ ಇದು ಈಗ ಬಹಳ ವಿರಳವಾಗಿದೆ ... ಅಲ್ಲೊ ಇಲ್ಲೊ ಒಂದೆರಡು ಮನೆಯ ತೋಟಗಳಲ್ಲಿ ಕಂಡು ಬರುತ್ತದೆ ...ಮಾರ್ಕೆಟನಲ್ಲಿ ಇದರ ಬೇಡಿಕೆ ಕಮ್ಮಿ ಆಗಿದೆ ಮತ್ತು ಇದನ್ನು ಪ್ರೊಸೆಸ್ ಮಾಡಿ ಮಾರುವುದು ಕಷ್ಟ ಆದ್ದರಿಂದ ಬೆಳೆಯುತ್ತಿಲ್ಲ ಎಂದು ನನ್ನ ಮಾವನನ್ನು ಕೇಳಿದಾಗ ತಿಳಿಯಿತು ..

ಮರ ಅಣಬೆ ...

ನೆಲ ಬಿರಿದು ಮೇಲೆರಿ ,,,

ಕಾಫಿ ಹಣ್ಣು

ಈ ಹಣ್ಣು ನೋಡಲು ಕೆಂಪು,,
ಒಣಗಿಸಿದರೆ ನೀಡುವುದು ಕಂಪು ...
ಪುಡಿ ಮಾಡಿ ಕುಡಿದರೆ ..ಮನಸ್ಸಿಗೆ ತಂಪು ..

ನೀರ‍ ಗುಳ್ಳೆಯಲ್ಲವಿದು ... ಹೊಳೆವ ಮುತ್ತು ...
ತೇಲುತಿಹುದೆಲೆಯ ಮೇಲೆ .. ಇದು ಯಾರ ಸೊತ್ತುಎಳೆಯ ಮೈ ,, ಬಿರಿಬಿಸಿಲು ..
ಹೋಗದಿರಲೆನ್ನ ಉಸಿರು .,ಆಗ ಬೇಕಿದೆ ನಾನಿನ್ನು ಹಸಿರು ..ಮೀಸೆಯನೆತ್ತಿ ,,ಚುಂಬಿಸುವ ತವಕದಿ ಗಗನವ ,,,
ಯಾವುದೀ ಕಿರೀಟಬಾಗಿದೆ ಎನ್ನ ಸೊಂಟ ,, ತುಂಬಿ ಹಲಸ , ಕಾಲಿಂದ ತಲೆ ಗುಂಟ ..ರಸ್ತೆಯ ಬದಿಯಲ್ಲಿ ಕೂತು .. ತೋರುತಿಹುದೆನನ್ನು ಈ ಮರದ ತೂತು ,,,
ಸಾಗುತಾ ದೂರ ದೂರ ..

Thursday, August 26, 2010

ಅಪರೂಪದ ಫೋಟೊ

ಇದೊಂದು ಮಿಂಚಂಚೆಯಲ್ಲಿ ಬಂದ ಫೋಟೊ .. ಮೂಲ ಛಾಯಚಿತ್ರಕಾರ ಯಾರು ಎಂದು ತಿಳಿಯದು .. ಆದ್ದರಿಂದ all credit goes to original photographer ... ನಾನು ಕೇವಲ ಇದನ್ನು ಎಲ್ಲರೊಡನೆ ಹಂಚಿಕೂಳ್ಳ ಬೇಕೆನಿಸಿತು ಅದಿಕ್ಕೆ ಬ್ಲೊಗನಲ್ಲಿ ಹಾಕಿದ್ದೇನೆ ..ಚಿತ್ರಕೃಪೆ :ಮಿಂಚಂಚೆ .. ಅಂತರ್ಜಾಲದಲ್ಲೂ ಸಹ ಇದೆ .. [ click on the photo to see it in large scale ]


ಇದರಲ್ಲಿ ಎಲ್ಲರನ್ನೂ ನಾನು ಗುರುತಿಸಲು ಆಗಲಿಲ್ಲ .. ಬಲ್ಲವರು ತಿಳಿಸುವೀರಾ ...

ಎಡದಿಂದ ಬಲ :

೧: ಶ್ರೀ ಮಾಸ್ತಿ ವೆಂಕಟೇಶ ಅಯ್ಯಂಗಾರ
೨. ಶ್ರೀ ವಿ ಕೃ ಗೋಕಾಕ್ ಅಥವಾ ಶ್ರೀ ಡಿ.ವಿ.ಗುಂಡಪ್ಪ
೩. ಶ್ರೀ ಕು.ವೆಂ.ಪು
೪. ಶ್ರೀ
೫. ಶ್ರೀ ಶಿವರಾಮ ಕಾರಂತ
೬. ಶ್ರೀ
೭. ಶ್ರೀ ಜಿ.ಪಿ.ರಾಜರತ್ನಮ್[ ಈ ಛಾಯಾಚಿತ್ರದ ಹೆಚ್ಚಿನ ಮಾಹಿತಿಗಾಗಿ ಸುಶ್ರುತನ ಕಮೆಂಟ್ಸ ನೋಡಿ ...]

Monday, August 23, 2010

ಭೇಟಿ

ನಿನ್ನೆಯ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಬಂದಂತಹ ಎಲ್ಲರೂ ತಮ್ಮ ಬ್ಲೊಗನಲ್ಲಿ ತಮ್ಮ ಅನುಭವಗಳನ್ನು ಬರೆದೆ ಬರೆಯುತ್ತಾರೆ.
ನಾನೇನು ಬೇರೆ ವಿಶೇಷವಾಗಿ ಬರೆಯುತ್ತಿಲ್ಲ ಬಿಡಿ. ಅದೆ ಸುದ್ದಿ ಆದರೆ ಅಪೂರ್ಣ , ಯಾಕಂತೀರ ... ಕಾರಣಾಂತರಗಳಿಂದ ನಾನು ಕಾರ್ಯಕ್ರಮವನ್ನು ಪೂರ್ಣ ನೋಡಲಾಗಲಿಲ್ಲ. ಮನೆಗೆ ನೆಂಟರು ಬಂದಿದ್ದರಿಂದ ಮಡದಿಯ ಕರೆಗೆ ಓಗೊಟ್ಟು ಮಧ್ಯದಲ್ಲೆ ಹೊರಡಬೇಕಾಯ್ತು. ಎಷ್ಟೊಂದು ಕಾರ್ಯಕ್ರಮಗಳು , ಮನರಂಜನೆಗಳು ..ತಪ್ಪಿದವೋ ನಾನರಿಯೆ .. ಇನ್ಯಾರಾದರು ತಮ್ಮ ಬ್ಲೊಗನಲ್ಲಿ ಸಂಪೂರ್ಣ ವರದಿಯನ್ನು ಹಾಕಿದರೆ ಅದನ್ನು ಓದಿ ಬೇಸರಿಸುವ ಸರದಿ ನನ್ನದು. ಆದರೂ ಅಲ್ಲಿ ಇದ್ದಷ್ಟೇ ಸಮಯ ಮಾತ್ರ ಮರೆಯಲಸಾಧ್ಯ.

ಕನ್ನಡ ಭವನ ಹೊಕ್ಕುತ್ತಿದ್ದಂತೆ ಮೊದಲಿಗೆ ಸಿಕ್ಕಿದವರು ಪ್ರಕಾಶಣ್ಣ. ಅವರೇ ನನ್ನನ್ನು ಕರೆದೊಯ್ದು ಸೀತಾರಮ ಸರ್ ಮತ್ತೆ ಸುಮನಾ ಮೇಡಮ್ ಪರಿಚಯಮಾಡಿ ಕೊಟ್ಟರು. ಅಷ್ಟರಲ್ಲೆ ಶಿವಪ್ರಕಾಶ ಕೈ ಮಿಲಾಯಿಸಿ ತಮ್ಮನ್ನು ಪರಿಚಯಿಸಿ ಕೊಂಡರು.ಹಾಗೆಯೆ ನಂಜುಂಡ , ಚೇತನಾ ಭಟ್ಟ ಅವರ ಪರಿಚಯವಾಯಿತು. ಪುಸ್ತಕ ಬಿಡುಗಡೆಯ ಈ ಸಮಯದಲ್ಲೇ ತಾವು ಭಾರತಕ್ಕೆ ಬಂದಿರುವುದು ತುಂಬ ಖುಷಿಯಾಗ್ತ ಇದೆ, ಎಲ್ಲರನ್ನು ಬೇಟಿ ಮಾಡುವ ಅವಕಾಶ ಸಿಕ್ತು ಅಂತ ನಂಜುಂಡರವರು ಹೇಳಿದರು.

ಆಮೇಲೆ ಒಂದಿಷ್ಟು ಹರೆಟೆ .. ಫೊಟೊ .. ಬಿಸಿ ಬಿಸಿ ಕಾಪಿ ...

ಅತ್ತಿತ್ತ ಸುತ್ತುತ್ತ ಪರಿಚಯದ ಮುಖಗಳನ್ನು ಹುಡುಕುತ್ತಿದ್ದಾಗ ಕಂಡಿದ್ದು ಪ್ರಗತಿ ಹೆಗಡೆ ಮತ್ತಿ ದಿಲೀಪ ಹೆಗಡೆ [ ನವ ದಂಪತಿಗಳು] ,ಮದುವೆಗೆ ಹೋಗಿರಲಿಲ್ಲ ಹಾಗಾಗಿ ಇಲ್ಲಿ ಬೇಟಿ ಮಾಡಿ ಶುಭ ಹಾರೈಸುವ ಸಂದರ್ಭ ಒದಗಿ ಬಂತು. ಇಷ್ಟೊತ್ತಾದರು ಕಾರ್ಯಕ್ರಮದ ಮುಖ್ಯ ಮುಖಗಳಾದ ಆಜಾದ ಸರ್ ಹಾಗೂ ಶಿವು ಸರ್ ಕಂಡು ಬರಲಿಲ್ಲ. ಛಲ ಬಿಡದೆ ಹುಡುಕಿ ಕೈ ಮಿಲಾಯಿಸಿ , ಶುಭಾಶಯಗಳನ್ನು ತಿಳಿಸಿ ಹೊರಬಂದರೆ ಎದುರಿಗೆ ಕಂಡಿದ್ದು ವಿ.ಆರ್ ಭಟ್ಟ ಸರ್ ..ಅವರೊಡನೆ ಸ್ವಲ್ಪ ಮಾತುಕಥೆ. ನಂತರ ನಾರಾಯಣ ಭಟ್ಟ , ನಾಗರಾಜ ,ನವೀನ , ಮಲ್ಲಿಕಾರ್ಜುನ ಮತ್ತೂ ಹಲವರ ಮುಖ ಬೇಟಿ ,ಪರಿಚಯವಾಯ್ತು.

ಕಾರ್ಯಕ್ರಮ ಪ್ರಾರಂಭವಾಗುವುದೆಂದು ಒಳಗೆ ಹೋದಾಗ ..ಮೂರ್ತಿ ಸರ್ ಮತ್ತು ನಾರಾಯಣ ಭಟ್ಟ ಅವರು ನನ್ನ ಪಕ್ಕದಲ್ಲೆ ಕುಳಿತರು. ಈ ಅವಕಾಶ ಬಿಡೋದೆ .. ನಾನೆ ಖುದ್ದಾಗಿ ಅವರನ್ನು ಮಾತನಾಡಿಸಿದೆ .. ಪರಿಚಯ ಹೇಳಿಕೊಂಡೆ.. ಮಾತನಾಡಿ ತುಂಬ ಖುಷಿಯಾಯ್ತು .. ಕೆಲವೊಂದು ಅನುಭವದ ಮಾತುಗಳನ್ನು ಹೇಳಿದರು. ಆಮೇಲೆ ದಿನಕರ ಮೊಗೇರ ಅವರನ್ನು ಬೇಟಿ ಮಾಡಲು ಮತ್ತೆ ಹೊರಗಡೆ ಹೋದೆವು. ಪತ್ನಿ ಸಮೇತರಾಗಿ ಆಗಮಿಸಿದ ದಿನಕರ ಅವರ ಬಳಿ ಸಾಗಿ ಕುಶಲೋಪಚರಿಗಳಾದ ಮೇಲೆ ನನ್ನ ಮತ್ತು ಭಟ್ಕಳದ ಬಾಂಧವ್ಯದ ನೆನಪುಗಳನ್ನು ಮಾತಾಡಿ ತಾಜಾ ಮಾಡಿಕೊಂಡೆ.

ಮತ್ತೆ ಒಳ ಬರುವಷ್ಟರಲ್ಲಿ ನಾವು ಮೊದಲು ಕುಳಿತ ಸ್ಥಳವನ್ನಾಗಲೇ ಬೇರೆಯವರು ಆಕ್ರಮಿಸಿದ್ದರು . ಸಭಾಂಗಣ ತುಂಬಿ ಹೋಗಿತ್ತು , ಜನಗಳು ಇನ್ನು ಬರುತ್ತಲೇ ಇದ್ದರು.ಅಲ್ಲೆ ಒಂದು ಸ್ಥಳ ಹುಡುಕಿ ಕುಳಿತೆ. ಎದುರಿಗೆ ಕಂಡಿದ್ದು ಸುಶ್ರುತ ಮತ್ತು ಗೌತಮ್ ..ಅವರನ್ನು ಮಾತನಾಡಿಸುವಷ್ಟರಲ್ಲಿ ಕಾರ್ಯಕ್ರಮ ಪ್ರಾರಂಭವಾಗಿತ್ತು ..ನನ್ನ ಕ್ಯಾಮರಾಕ್ಕೆ ಸ್ವಲ್ಪ ಕೆಲಸ ಕೊಡೋಣವೆಂದು ನಾನು ಸ್ಟೆಜ ಹತ್ತಿರ ಹೋದೆ .. ಅಲ್ಲಿ ಬಾಲು ಸರ್ ಮತ್ತು ಪ್ರವೀಣರವರ ಬೇಟಿ ಆಯಿತು.

ಒಂದೆರಡು ಫೊಟೊ ಕ್ಲಿಕ್ಕಿಸಿದೆ .. ವಾಣಿ ಕೂಗತೊಡಗಿತ್ತು ...ಮನೆಗೆ ಬರುವಂತೆ ಕರೆ ಬಂದಿತ್ತು ...ಇನ್ನು ಹಲವರನ್ನು ಬೇಟಿ ಮಾಡುವುದಿತ್ತು ... ಕಾರ್ಯಕ್ರಮವನ್ನು ಬಿಟ್ಟು ಮನೆಯ ಕಡೆ ಹೊರಟಿದ್ದೆ ... ಮುಂದಿನ ಬಾರಿ ಸ್ವಲ್ಪ ಸಮಯ ಇಟ್ಟು ಕೊಂಡು ಬಂದು ಎಲ್ಲರ ಪರಿಚಯ ಮಾಡಿಕೊಳ್ಳಬೇಕು.

ಹೊರಡುವ ಮುನ್ನ ಪುಸ್ತಕವನ್ನು ಕೊಳ್ಳುವುದನ್ನು ಮರೆಯಲಿಲ್ಲ. ಅಷ್ಟೆ ಅಲ್ಲ ಪ್ರವೀಣ ಅವರ ಸಹಾಯದಿಂದ ಲೇಖಕರ ಹಸ್ತಾಕ್ಷರ ಸಹ ಪಡೆದು ಕೊಂಡೆ ನಾನು ಹೊರ‍ಟಿದ್ದು.ಬಂದಿದ್ದಕ್ಕೆ ಇಷ್ಟಾದರು ಸಂತೋಷ ಪಡುವಂತಾಯಿತು.

ಫೊಟೊಗಳನ್ನು ಇನ್ನು ಕಂಪ್ಯೂಟರ್ ಗೆ ಟ್ರಾನ್ಸ್ಪರ ಮಾಡಲಾಗದ್ದರಿಂದ ಇಲ್ಲಿ ಹಾಕುತ್ತಿಲ್ಲ ,,ಸಾಧ್ಯವಾದಲ್ಲಿ ಇಂದು ಸಂಜೆಯೆ ಅಪ್ಲೋಡ್ ಮಾಡುತ್ತೇನೆ.