Friday, November 27, 2009

ಮದುವೆಯ ಈ ಬಂಧ .....

ದಿನ ಎಷ್ಟು ಬೇಗ ಸಾಗುತ್ತಿದೆ .. ನೋಡು ನೋಡುತ್ತಿದ್ದಂತೆ , ಇಂದು ನಿನ್ನೆಯಾಗಿ , ನಿನ್ನೆ ಮೊನ್ನೆಯಾಗಿ ಕಾಲ ಚಕ್ರ ಸಾಗುತ್ತಿದೆ.
ಏನು ಸಮಸ್ಯೆ ಅಂತೀರ , .. ಇನ್ನು ಸರಿಯಾಗಿ ೧೦ ದಿನಕ್ಕೆ ನಾನು ಒಬ್ಬ ಸಂಸಾರಿಗಳ ಸಾಲು ಸೇರಿ ಹೊಗ್ತಿನಿ.
ಹುಡುಗಾಟ, ತಿರುಗಾಟ ..... ಮತ್ತೇನೆನೋ ಆಟ ಆಡಿಕೊಂಡಿದ್ದ ನಾನು ಈಗ ಮದುಮಗ .. ನನಗೆ ನಂಬೊಕೆ ಆಗ್ತ ಇಲ್ಲ :)
ಎರ್ಡು ತಿಂಗಳ ಹಿಂದೆ ಸುಮ್ಮನೆ ಮನೆಯಲ್ಲಿ ಹುಡುಗಿ ನೋಡೊಣ ಅಂದಾಗ ಹುಂ ಅಂದಿದ್ದೆ .. ಆದರೆ ಅವಕಾಶ ನಾನು ಹುಂಮ್
ಅನ್ನೊದೆ ಕಾಯ್ತ ಇತ್ತು ಅಂದು ಕೊಂಡಿರಲಿಲ್ಲ .. ಸಮಯ ಕಳೆಯೋಣ ಅಂತ , ಬ್ಲೊಗ್ ತೆರೆದೆ, ಒಂದಿಷ್ಟು ಗೀಚಿದೆ ..
ಹಲವರು ಓದಿ ಬೆನ್ನು ತಟ್ಟಿದರು .. ಹಲವರ ಸ್ನೇಹವಾಯ್ತು ..ಬೇರೆ ಬ್ಲೊಗ್ ಒದಿ ಹೆಚ್ಚು ವಿಷಯಗಳನ್ನು ತಿಳಿದೆ ..
ಬರೆಯಲು ಸ್ಪೂರ್ತಿ ಸಾಲದೆ ಬ್ಲೊಗ್ ಕದ ಮುಚ್ಚಿದೆ , ಈಗ ಮತ್ತೆ ಸ್ಪೂರ್ತಿಯಾಗಿ , ನನ್ನ ಕೈ ಹಿಡಿದು ನಡೆಸುವ
ಸಲುವಾಗಿ ,ನನ್ನವಳಾಗಿ ಶ್ರುತಿ ಎಂಬ ಕನ್ಯೆಯೊಂದಿಗೆ , ಇದೆ ದಿನಾಂಕ ೦೯-೧೨-೨೦೦೯ ರಂದು ಸಿರ್ಸಿಯ
ತೋಟಗಾರ ಕಲ್ಯಾಣ ಮಂಟಪದಲ್ಲಿ ಪಾಣಿಗ್ರಹಣ ಮಾಡುತ್ತಿದ್ದೇನೆ .. ಈ ಶುಭ ಸಂದರ್ಭದಲ್ಲಿ
ನನ್ನ ಎಲ್ಲಾ ಬ್ಲೊಗ್ ಮಿತ್ರರು , ತಮ್ಮ ಪರಿವಾರ ಹಾಗು ಮಿತ್ರರೊಂದಿಗೆ ಆಗಮಿಸಿ ಆಶಿರ್ವದಿಸಬೇಕೆಂದು
ಕೋರುವ ...

ತಮ್ಮವ,
ಶ್ರೀಧರ ಭಟ್ಟ

ವಿಸೂ: ಇದನ್ನೆ ವಯಕ್ತಿಕ ಆಮಂತ್ರಣವೆಂದು ತಿಳಿದು , ಆಗಮಿಸಿ ಹಾರೈಸಿ.

9 comments:

shivu.k said...

ಶ್ರೀಧರ್,

ಮದುವೆಯ ಸಂಭ್ರಮಕ್ಕೆ ಶುಭಾಶಯಗಳು.

ಗೌತಮ್ ಹೆಗಡೆ said...

ಹೊಸ ಬಾಳು ಕೈಬೀಸಿ ಕರೆಯುತಿದೆ
ಬಾಳ ಪಯಣಕೆ ಜೋಡಿ ಹೆಜ್ಜೆ
ಜೊತೆಯಾಗುತಿದೆ .
ಸಾಗಲಿ ಪಯಣ
ನೆಮ್ಮದಿಯ ನೆರಳಲಿ
ಸುಖ ಸಂತೋಷದ ಹೂವ ದಾರಿಯಲಿ ..
ಜೀವವೆರಡು ಉಸಿರೊಂದೆ ಆಗಲಿ
ಅತಿ ಶೀಘ್ರ ನಿಮ್ಮ ಪಯಣದಿ
ಇನ್ನೊಂದು ಪುಟ್ಟ ಜೋಡಿ ಹೆಜ್ಜೆ
ಸೇರಿಕೊಳ್ಳಲಿ :):)

ಶುಭಾಶಯಗಳು ...

Raghu said...

ಶ್ರೀಧರ್,
ಹೊಸ ಜೀವನಕ್ಕೆ ಬೆಸ್ಟ್ ಆಫ್ ಲಕ್ ಸರ್..
ನಿಮ್ಮವ,
ರಾಘು.

ದಿನಕರ ಮೊಗೇರ said...

ಶ್ರೀಧರ್ ಸರ್,
ಮದುವೆಯ ಶುಭಾಶಯ ..... ಸ್ಫೂರ್ತಿ, ಸುಖ, ನಲಿವಿನಿಂದ ಕೂಡಿರಲಿ ನಿಮ್ಮ ಜೀವನ ಎಂದು ಹಾರೈಸುತ್ತೇನೆ.....

ಮೂರ್ತಿ ಹೊಸಬಾಳೆ. said...

ಶ್ರೀಧರ ಭಟ್,
ಮದುವೆಯ ಶುಭಾಶಯಗಳು.

ಸಾಗರದಾಚೆಯ ಇಂಚರ said...

ಶ್ರೀಧರ್ ಭಟ್ ಸರ್
ಮದುವೆಯ ಆತ್ಮೀಯ ಕರೆಯೋಲೆಗೆ ಧನ್ಯವಾದ
ಹೊಸ ಬಾಳಿಗೆ ಶುಭ ಹಾರೈಕೆ
ಬಾಳು ಹಸಿರಾಗಿರಲಿ

shridhar said...

ನಿಮ್ಮೆಲ್ಲರ ಶುಭ ಹಾರೈಕೆಗೆ ಧನ್ಯವಾದಗಳು .. ಮದುವೆಗೆ ಭರ್ತಿರಿ ತಾನೆ :)
ಮದುವೆ ನಂತರ ಹೆಣ್ಣು ನೋಡಲು ಹೊದಾಗಿನಿಂದ ಹಿಡಿದು ಮದುವೆ ತಯಾರಿವರೆಗಿನ
ಎಲ್ಲಾ ವಿಚರಗಳನ್ನು ಬರೆಯಬೆಕೆಂದು ಕೊಂಡಿದ್ದೆನೆ .. ಹಳ್ಳಿ ಕಡೆಯ ಬಹಳ ಮಜವಾದ ವಿಚಾರಗಳಿವೆ ..
ನನ್ನ ಶ್ರೀಮತಿ ಅವಕಾಶ ಕೊಡ್ತಾಳೊ ನೋಡೊಣ .. ಹೆ ಹೆ ಹೆ ....

Ittigecement said...

ಶ್ರೀಧರ್...
ತುಂಬಾ ತಡವಾಗಿ ಹೇಳುತ್ತಿದ್ದೇನೆ... ಬೇಸರಿಸ ಬೇಡಿ....

"ನೂರು ವರ್ಷ ಚೆನ್ನಾಗಿ ಬಾಳಿ"

ಶುಭಾಶೀರ್ವಾದಗಳು...

ಪ್ರಕಾಶಣ್ಣ...

ಚುಕ್ಕಿಚಿತ್ತಾರ said...

ಶ್ರೀಧರ್
ಹೊಸ ಜೀವನಕ್ಕೆ ಶುಭಾಶಯಗಳು.
ವರ್ಗಾಸರದ ಶ್ರುತಿಯೆ ನಿಮ್ಮವಳು...?