Friday, August 14, 2009

ಮಾನ್ಯ ಅಥಿತಿಗಳೇ, ಪುಜ್ಯ ಗುರುಗಳೇ , ಹಾಗೂ ನನ್ನ ಸಹ ಪಾಠಿಗಳೇ


ಅಗಷ್ಟ ೧೫ ರ ಭಾಷಣ , ಧ್ವಜಾರೋಹಣ ಮತ್ತು ಒಂದಿಷ್ಟು ನೆನಪುಗಳು ,
=============

ಮಾನ್ಯ ಅಥಿತಿಗಳೇ, ಪುಜ್ಯ ಗುರುಗಳೇ , ಹಾಗೂ ನನ್ನ ಸಹ ಪಾಠಿಗಳೇ ,
"ಇಂದು ಆಗಷ್ಟ್ ೧೫ ,ಅಂದರೆ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದ ದಿನ . ಇಂದಿಗೆ ಭಾರತಕ್ಕೆ ಸ್ವಾತಂತ್ರ್ಯ ಬಂದು ಸರಿಯಾಗಿ ೪೭ ವರ್ಷಗಳು ಕಳೆದವು.
ಮಹತ್ಮಾ ಗಾಂಧಿ , ಚಾಚಾ ನೆಹರು , ಸುಭಾಶಚಂದ್ರ ಭೋಸ ಮುಂತಾದವರ ಪರಿಶ್ರಮದ ಫಲವಾಗಿ ಆಗಷ್ಟ್ ೧೫ , ೧೯೪೭ರಂದು ನಮಗೆ ಸ್ವತಂತ್ರ್ಯ ದೊರಕಿತು.
.........................

......................... "

ಇದು ನಾನು [ ನನ್ನಂತೆ ಇನ್ನು ಎಷ್ಟೊ ಜನ] ಪ್ರಾಥಮಿಕ ಶಾಲಾ ದಿನಗಳಲ್ಲಿ ಮಾಡಿದ ಭಾಷಣದ ತುಣುಕು. ಇವತ್ತು ಕೆಲ್ಸ ಜಾಸ್ತಿ ಇರ್ಲಿಲ್ಲ ಅದಿಕ್ಕೆ ಸುಮ್ನೆ ಆಗಷ್ಟ ೧೫ರ ಬಗ್ಗೆ ಲೇಖನಗಳನ್ನ ಓದ್ತಾ ಇದ್ದೆ , ಮನಸ್ಸು ಬಾಲ್ಯದ ಕಡೆಗೆ ಜಾರುತ್ತಿತ್ತು .ಹಳೆ ನೆನಪುಗಳೆ ಹಾಗೆ ಬೇಡದ ಸಮಯದಲ್ಲಿ ಬಂದು ಕಾಡುತ್ತವೆ.

ಮೂರನೇ ತರಗತಿಯಲ್ಲಿದ್ದಾಗ ನಾನು ಮಾಡಿದ ಭಾಷಣ , ಅದರ ತಯಾರಿ ಇನ್ನು ಕಣ್ಣಿಗೆ ಕಟ್ಟಿದಂತಿದೆ. ಅದು ನನ್ನ ಮೊದಲ ಸ್ಟೇಜ್ ಅನುಭವ . ಶಾಲೆಯಿಂದ ಬಂದ ತಕ್ಷಣ ಭಾಷಣ ಬರೆದು ಕೊಡು ಎಂದು ಅಕ್ಕನ ಬೆನ್ನು ಬಿದ್ದಿದ್ದೆ. ಅಂತು ಕಾಡಿ ಬೇಡಿ , ಅಮ್ಮನ ಹತ್ತಿರ ಹೇಳಿಸಿದ ಮೇಲೆ ಬರೆದುಕೊಟ್ಟಿದ್ದಳು. ಅದನ್ನು ಬಾಯಿಪಾಠ ಮಾಡುವಾಗ ಆದ ಖುಶಿ ಅಷ್ಟಿಷ್ಟಲ್ಲ.ಆದರೆ ಮರುದಿನ ಎಲ್ಲದುದಿರಿಗೆ ನಿಂತಾಗ ಮಾತ್ರ ಕಣ್ಣ ಮುಂದೆ ಕತ್ತಲೆ ಆವರಿಸಿ ಬಿಟ್ಟಿತ್ತು . ಸೇರಿರುವರ ಕಣ್ಣೆಲ್ಲಾ ನನ್ನ ಮೇಲೆ , ನನಗೆ ಏನು ನೆನಪಾಗುತ್ತಿಲ್ಲ. ಅಪ್ಪ ಹಿಂದಿನ ದಿನವೇ ಹೆಳಿದ್ದರು ಮರೆತರೆ ಹಾಳೇ ನೋಡಿ ಓದು ಅಂತ. ಅದನ್ನ ನೆನಪಿಸಿಕೊಂಡು ಒಮ್ಮೆ ಹಾಳೆಯತ್ತ ಕಣ್ಣಾಡಿಸಿ , ನಡುಗುವ ದನಿಯಲ್ಲಿ ಶುರು ಮಾಡಿದೆ , ಅದೆಲ್ಲಿಂದ ಬಂತೊ ಧೈರ್ಯ ಗೊತ್ತಿಲ್ಲ , " ಜೈ ಹಿಂದ " ಅನ್ನುವವರೆಗೆ ಸರಾಗವಾಗಿ ಭಾಷಣ ಮಾಡಿ ಮುಗಿಸಿದ್ದೆ . ಅದರ ನಂತರ ಏಷ್ಟೆಷ್ಟೋ ಭಾಷಣ , ಹಾಡು , ನಾಟಕ ಮಾಡಿದ್ದೆನೋ ಆದರೆ ಆ ಮೊದಲ ಅನುಭವ ಮಾತ್ರ ಅಚ್ಚಳಿಯದಂತೆ ಮನದ ಮೊಲೆಯಲ್ಲಿ ಸುಪ್ತ ಸ್ಥಿತಿಯಲ್ಲಿ ಇದೆ. ಈಗಲು ಅಷ್ಟೆ ಕೆಲವೊಮ್ಮೆ ಪ್ರೊಜೆಕ್ಟನಲ್ಲಿ ಪ್ರಸೆಂಟೇಶನ್ನ ಕೊಡಬೇಕು ಅಂದಾಗ ಆ ದಿನ ನೆನಪಿಗೆ ಬರುತ್ತದೆ. ಶಾಲೆಯಲ್ಲಿ ಧ್ವಜರೋಹಣದ ನಂತರ ಚಾಕಲೇಟ ತಿಂದು ,ಭಾಷಣ ಮಾಡಿ ಅಥವಾ ಕೇಳಿ , ಪ್ರಭಾತ ಪೇರಿಯನ್ನು ಮುಗಿಸಿ ಮನೆಗೆ ಬಂದರೆ , ಉಳಿದ ದಿನ ರಜೆಯೆ ಸರಿ.

ವಾಸ್ತವಸ್ಥಿತಿಗೆ ಬಂದಾಗ ಅನಿಸಿದ್ದೆಂದರೆ ನಾನು ಧ್ವಜಾರೋಹಣಕ್ಕೆ ಹೋಗಿ ವರುಷಗಳೆ ಸಂದಿದೆ ಎಂದು . ಶಾಲಾ ದಿನಗಳು ಮುಗಿದ ಮೇಲೆ ಯಾವುದೆ ಧ್ವಜರೋಹಣಕ್ಕೆ ಹೊದ ನೆನಪೆ ಇಲ್ಲ. ಇದು ನನ್ನ ಕಥೆ ಒಂದೆ ಅಲ್ಲ , ಎಷ್ಟೋ ಜನರು ಶಾಲಾ ದಿನಗಳ ನಂತರ ಪ್ರಾಯಶಃ ಆಗಷ್ಟ್ ೧೫ರಂದು ಧ್ವಜರೋಹಣಕ್ಕೆ ಹೋಗದಿರುತ್ತಾರೆ.ಕಾಲೇಜು ದಿನಗಳಲ್ಲಿ ರಜ ಬಂತೆಂದರೆ ಕ್ಯಾಂಪಸ್ ನ ಹತ್ತಿರವು ಸುಳಿಯುತ್ತಿರಲಿಲ್ಲ ಇನ್ನು ಧ್ವಜರೋಹಣ ದೂರದ ಮಾತಾಯಿತು. ಇನ್ನು ಕೆಲಸಕ್ಕೆ ಸೇರಿದ ಮೇಲಂತು,ಇದೆಲ್ಲ ಸಾದ್ಯವೇ ಆಗಲಿಲ್ಲ . ಧ್ವಜಾರೊಹಣವೋ ಇಲ್ಲಾ, ಭಾಷಣವೂ ಇಲ್ಲಾ , ರಜೆ ಇದೆ ಎಲ್ಲಿ ಸುತ್ತೊಕೆ ಹೊಗೋಣ ಅಂತ ತಯಾರಿ ನಡೆದಿರುತ್ತೆ. ಈ ಬಾರಿಯಾದರು ನಾನಿರುವಅಪಾರ್ಟಮೆಂಟಿನಲ್ಲಿ ಭಾವುಟ ಹಾರಿಸುವಾಗ ಹೋಗಲೇಬೇಕೆಂದುಕೊಂಡಿದ್ದೆನೆ. ಎನಾಗುತ್ತದೆ ನೋಡೊಣ. ನೀವು ಧ್ವಜಾರೋಹಣಕ್ಕೆ ಬನ್ನಿ.


ಇಷ್ಟು ಹೇಳಿ ನನ್ನ ಭಾಷಣವನ್ನು ಇಲ್ಲಿಗೆ ಮುಗಿಸುತ್ತೇನೆ ,

" ಜೈ ಹಿಂದ್ " ,
" ವಂದೇ ಮಾತರಂ "
ಎಲ್ಲರಿಗೂ ಸ್ವಾತಂತ್ರ್ಯೋತ್ಸವದ ಶುಭಾಷಯಗಳು .

9 comments:

Shweta said...

Wish you happy Independence day Shridhar,
Thanks for a write up which has helped to recall mydays .........

Keep going!!

shivu.k said...

ಶ್ರೀಧರ್,

ಸ್ವತಂತ್ರ ದಿನಾಚರಣೆಯ ಶುಭಾಶಯಗಳು...

shridhar said...

@shivu,
Thanks, Those days were like that ..

Shivu sir,
Thanks, Nanna Blog follow madta irovralli neve modaligaru.Adakkagi mattomme dhanyavadagalu.:)

ಧರಿತ್ರಿ said...

ತಮಗೂ ಶುಭಾಶಯ. ನಾವೂ ಇಂಥ ಮುಗ್ಧ ಅನುಭವಗಳಿಂದ ಹೊರತಾಗಿಲ್ಲ. ನಾನೂ ಇಂಥದ್ದೇ ಒಂದು ಪುಟ್ಟ ಮೆಲುಕು ಹಾಕಿದ್ದೀನಿ ನನ್ನ ಬ್ಲಾಗ್ ನಲ್ಲಿ...
-ಧರಿತ್ರಿ

shridhar said...

ಧರಿತ್ರಿಯವರೇ ,
ನಿಮ್ಮ ಬ್ಲಾಗ್ ಓದಿದೆ . ನಿಜಕ್ಕೂ ಚಿಂತಿಸುವಂತ ವಿಷಯ .
ನನ್ನ blogage spandisiddakke ಧನ್ಯವಾದಗಳು

ಸುಧೇಶ್ ಶೆಟ್ಟಿ said...

ಶ್ರೀಧರ್ ಅವರೇ....

ಹಿ೦ದಿನ ಸಲ ನಿಮ್ಮ ಬ್ಲಾಗ್ ನೋಡಿದಾಗ ಅಪ್ ಡೇಟ್ ಆಗಿರಲಿಲ್ಲ... ಈಗ ಹೊಸ ಬರಹ ಬ೦ದಿದೆ... ಸ್ವಾತ೦ತ್ರ್ಯ ದಿನದ ಮೆಲುಕುಗಳು ತು೦ಬ ಚೆನ್ನಾಗಿ ಬರೆದಿದ್ದೀರಿ... ನನ್ನ ಭಾಷಣದ ನೆನಪು ಮೂಡಿತು...ಇಷ್ಟೇ ಹೆದರಿದ್ದೆ.....

ಹೀಗೆ ಬರೀತಾ ಇರಿ...

Ittigecement said...

ಶ್ರೀಧರ್...

ನಿಮ್ಮ ಲೇಖನ ಓದಿ..
ನನ್ನ ಬಾಲ್ಯದ ಶಾಲಾದಿನಗಳಲ್ಲಿ
ಉರು ಹೊಡೆದು ಮಾಡುವ ಭಾಷಣಗಳ ನೆನಪಾಯಿತು...

ಬರವಣಿಗೆ ಚೆನ್ನಾಗಿದೆ,,...
ಮುಂದುವರೆಸಿರಿ.....

ಪ್ರಕಾಶಣ್ಣ

shridhar said...

Sudhesh and Prakashanna
Thanks for ur comments :)

ದಿನಕರ ಮೊಗೇರ said...

nagaadi nagaadi saakaayitu.... nanna hakeya dina nenapaayitu....