ನನ್ನ ಬದುಕಿನ ಮಜಲಿನಲ್ಲಿ ಬರುವ ಎರಡು ಪ್ರದೇಶಗಳು .ಊರು ಸುಂದರ ಕರಾವಳಿ ತೀರದಲ್ಲಿ .ಮೊದಲ ಹೆಜ್ಜೆ ಇಟ್ಟಿದ್ದು ಮಲೆನಾಡಿನಲ್ಲಿ .ಹೀಗೆ ಎರಡು ಪ್ರದೇಶದ ಸವಿಯನ್ನು ಸವಿಯೋ ಅವಕಾಶ ಕೆಲವೇ ಮಂದಿಗೆ ಸಿಗುತ್ತೆ.ಅಂತವರಲ್ಲಿ ನಾನು ಒಬ್ಬ .
Friday, August 14, 2009
ಮಾನ್ಯ ಅಥಿತಿಗಳೇ, ಪುಜ್ಯ ಗುರುಗಳೇ , ಹಾಗೂ ನನ್ನ ಸಹ ಪಾಠಿಗಳೇ
ಅಗಷ್ಟ ೧೫ ರ ಭಾಷಣ , ಧ್ವಜಾರೋಹಣ ಮತ್ತು ಒಂದಿಷ್ಟು ನೆನಪುಗಳು ,
=============
ಮಾನ್ಯ ಅಥಿತಿಗಳೇ, ಪುಜ್ಯ ಗುರುಗಳೇ , ಹಾಗೂ ನನ್ನ ಸಹ ಪಾಠಿಗಳೇ ,
"ಇಂದು ಆಗಷ್ಟ್ ೧೫ ,ಅಂದರೆ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದ ದಿನ . ಇಂದಿಗೆ ಭಾರತಕ್ಕೆ ಸ್ವಾತಂತ್ರ್ಯ ಬಂದು ಸರಿಯಾಗಿ ೪೭ ವರ್ಷಗಳು ಕಳೆದವು.
ಮಹತ್ಮಾ ಗಾಂಧಿ , ಚಾಚಾ ನೆಹರು , ಸುಭಾಶಚಂದ್ರ ಭೋಸ ಮುಂತಾದವರ ಪರಿಶ್ರಮದ ಫಲವಾಗಿ ಆಗಷ್ಟ್ ೧೫ , ೧೯೪೭ರಂದು ನಮಗೆ ಸ್ವತಂತ್ರ್ಯ ದೊರಕಿತು.
.........................
......................... "
ಇದು ನಾನು [ ನನ್ನಂತೆ ಇನ್ನು ಎಷ್ಟೊ ಜನ] ಪ್ರಾಥಮಿಕ ಶಾಲಾ ದಿನಗಳಲ್ಲಿ ಮಾಡಿದ ಭಾಷಣದ ತುಣುಕು. ಇವತ್ತು ಕೆಲ್ಸ ಜಾಸ್ತಿ ಇರ್ಲಿಲ್ಲ ಅದಿಕ್ಕೆ ಸುಮ್ನೆ ಆಗಷ್ಟ ೧೫ರ ಬಗ್ಗೆ ಲೇಖನಗಳನ್ನ ಓದ್ತಾ ಇದ್ದೆ , ಮನಸ್ಸು ಬಾಲ್ಯದ ಕಡೆಗೆ ಜಾರುತ್ತಿತ್ತು .ಹಳೆ ನೆನಪುಗಳೆ ಹಾಗೆ ಬೇಡದ ಸಮಯದಲ್ಲಿ ಬಂದು ಕಾಡುತ್ತವೆ.
ಮೂರನೇ ತರಗತಿಯಲ್ಲಿದ್ದಾಗ ನಾನು ಮಾಡಿದ ಭಾಷಣ , ಅದರ ತಯಾರಿ ಇನ್ನು ಕಣ್ಣಿಗೆ ಕಟ್ಟಿದಂತಿದೆ. ಅದು ನನ್ನ ಮೊದಲ ಸ್ಟೇಜ್ ಅನುಭವ . ಶಾಲೆಯಿಂದ ಬಂದ ತಕ್ಷಣ ಭಾಷಣ ಬರೆದು ಕೊಡು ಎಂದು ಅಕ್ಕನ ಬೆನ್ನು ಬಿದ್ದಿದ್ದೆ. ಅಂತು ಕಾಡಿ ಬೇಡಿ , ಅಮ್ಮನ ಹತ್ತಿರ ಹೇಳಿಸಿದ ಮೇಲೆ ಬರೆದುಕೊಟ್ಟಿದ್ದಳು. ಅದನ್ನು ಬಾಯಿಪಾಠ ಮಾಡುವಾಗ ಆದ ಖುಶಿ ಅಷ್ಟಿಷ್ಟಲ್ಲ.ಆದರೆ ಮರುದಿನ ಎಲ್ಲದುದಿರಿಗೆ ನಿಂತಾಗ ಮಾತ್ರ ಕಣ್ಣ ಮುಂದೆ ಕತ್ತಲೆ ಆವರಿಸಿ ಬಿಟ್ಟಿತ್ತು . ಸೇರಿರುವರ ಕಣ್ಣೆಲ್ಲಾ ನನ್ನ ಮೇಲೆ , ನನಗೆ ಏನು ನೆನಪಾಗುತ್ತಿಲ್ಲ. ಅಪ್ಪ ಹಿಂದಿನ ದಿನವೇ ಹೆಳಿದ್ದರು ಮರೆತರೆ ಹಾಳೇ ನೋಡಿ ಓದು ಅಂತ. ಅದನ್ನ ನೆನಪಿಸಿಕೊಂಡು ಒಮ್ಮೆ ಹಾಳೆಯತ್ತ ಕಣ್ಣಾಡಿಸಿ , ನಡುಗುವ ದನಿಯಲ್ಲಿ ಶುರು ಮಾಡಿದೆ , ಅದೆಲ್ಲಿಂದ ಬಂತೊ ಧೈರ್ಯ ಗೊತ್ತಿಲ್ಲ , " ಜೈ ಹಿಂದ " ಅನ್ನುವವರೆಗೆ ಸರಾಗವಾಗಿ ಭಾಷಣ ಮಾಡಿ ಮುಗಿಸಿದ್ದೆ . ಅದರ ನಂತರ ಏಷ್ಟೆಷ್ಟೋ ಭಾಷಣ , ಹಾಡು , ನಾಟಕ ಮಾಡಿದ್ದೆನೋ ಆದರೆ ಆ ಮೊದಲ ಅನುಭವ ಮಾತ್ರ ಅಚ್ಚಳಿಯದಂತೆ ಮನದ ಮೊಲೆಯಲ್ಲಿ ಸುಪ್ತ ಸ್ಥಿತಿಯಲ್ಲಿ ಇದೆ. ಈಗಲು ಅಷ್ಟೆ ಕೆಲವೊಮ್ಮೆ ಪ್ರೊಜೆಕ್ಟನಲ್ಲಿ ಪ್ರಸೆಂಟೇಶನ್ನ ಕೊಡಬೇಕು ಅಂದಾಗ ಆ ದಿನ ನೆನಪಿಗೆ ಬರುತ್ತದೆ. ಶಾಲೆಯಲ್ಲಿ ಧ್ವಜರೋಹಣದ ನಂತರ ಚಾಕಲೇಟ ತಿಂದು ,ಭಾಷಣ ಮಾಡಿ ಅಥವಾ ಕೇಳಿ , ಪ್ರಭಾತ ಪೇರಿಯನ್ನು ಮುಗಿಸಿ ಮನೆಗೆ ಬಂದರೆ , ಉಳಿದ ದಿನ ರಜೆಯೆ ಸರಿ.
ವಾಸ್ತವಸ್ಥಿತಿಗೆ ಬಂದಾಗ ಅನಿಸಿದ್ದೆಂದರೆ ನಾನು ಧ್ವಜಾರೋಹಣಕ್ಕೆ ಹೋಗಿ ವರುಷಗಳೆ ಸಂದಿದೆ ಎಂದು . ಶಾಲಾ ದಿನಗಳು ಮುಗಿದ ಮೇಲೆ ಯಾವುದೆ ಧ್ವಜರೋಹಣಕ್ಕೆ ಹೊದ ನೆನಪೆ ಇಲ್ಲ. ಇದು ನನ್ನ ಕಥೆ ಒಂದೆ ಅಲ್ಲ , ಎಷ್ಟೋ ಜನರು ಶಾಲಾ ದಿನಗಳ ನಂತರ ಪ್ರಾಯಶಃ ಆಗಷ್ಟ್ ೧೫ರಂದು ಧ್ವಜರೋಹಣಕ್ಕೆ ಹೋಗದಿರುತ್ತಾರೆ.ಕಾಲೇಜು ದಿನಗಳಲ್ಲಿ ರಜ ಬಂತೆಂದರೆ ಕ್ಯಾಂಪಸ್ ನ ಹತ್ತಿರವು ಸುಳಿಯುತ್ತಿರಲಿಲ್ಲ ಇನ್ನು ಧ್ವಜರೋಹಣ ದೂರದ ಮಾತಾಯಿತು. ಇನ್ನು ಕೆಲಸಕ್ಕೆ ಸೇರಿದ ಮೇಲಂತು,ಇದೆಲ್ಲ ಸಾದ್ಯವೇ ಆಗಲಿಲ್ಲ . ಧ್ವಜಾರೊಹಣವೋ ಇಲ್ಲಾ, ಭಾಷಣವೂ ಇಲ್ಲಾ , ರಜೆ ಇದೆ ಎಲ್ಲಿ ಸುತ್ತೊಕೆ ಹೊಗೋಣ ಅಂತ ತಯಾರಿ ನಡೆದಿರುತ್ತೆ. ಈ ಬಾರಿಯಾದರು ನಾನಿರುವಅಪಾರ್ಟಮೆಂಟಿನಲ್ಲಿ ಭಾವುಟ ಹಾರಿಸುವಾಗ ಹೋಗಲೇಬೇಕೆಂದುಕೊಂಡಿದ್ದೆನೆ. ಎನಾಗುತ್ತದೆ ನೋಡೊಣ. ನೀವು ಧ್ವಜಾರೋಹಣಕ್ಕೆ ಬನ್ನಿ.
ಇಷ್ಟು ಹೇಳಿ ನನ್ನ ಭಾಷಣವನ್ನು ಇಲ್ಲಿಗೆ ಮುಗಿಸುತ್ತೇನೆ ,
" ಜೈ ಹಿಂದ್ " ,
" ವಂದೇ ಮಾತರಂ "
ಎಲ್ಲರಿಗೂ ಸ್ವಾತಂತ್ರ್ಯೋತ್ಸವದ ಶುಭಾಷಯಗಳು .
Tuesday, August 11, 2009
ಬ್ಲಾಗಾಯ ತಸ್ಮೈ ನಮಃ
ನಾನು ಪುಸ್ತಕ ಬಿಡುಗಡೆ , ಸಾಹಿತ್ಯ ಅಂತೆಲ್ಲ ತಿರ್ಗಾಡ್ತೀನಿ , ಬರೀತೀನಿ ಅಂದುಕೊಂಡಿರಲಿಲ್ಲ .. ಆದರೆ ಇದೆಲ್ಲ ಸಾಧ್ಯವಾದದ್ದು ಬ್ಲಾಗ್ ಲೋಕಕ್ಕೆ ಕಾಲಿಟ್ಟ ಮೇಲೆ .. ಮುಂಚೆ ಒಂದೆರಡು ಕವನ , ಕಥೆ ಗೀಚಿದ್ದೆ .. ಮತ್ತೆ ಬರೆಯೋ ಆಸಕ್ತಿ ಯಾಕೋ ಕಳೆದು ಹೋಗಿತ್ತು .ಆದ ಕಾರಣ ಈಗ ಬರೆಯಲು ಕುಳಿತರೆ ಏನು ತೋಚದಂತಾಗಿದೆ .. ಸರಿ ಯಾವತ್ತಾದರೂ ಒಮ್ಮೆ ಬರಯೋಣ ಬಿಡಿ .. ಆದರೆ ಬ್ಲಾಗ್ ಲೋಕದಲ್ಲಿ ನಂಗೆ ಇಷ್ಟೊಂದು ಮಿತ್ರರಾಗ ಬಹುದು ಎಂದು ಮಾತ್ರ ಆಲೋಚಿಸಿರಲಿಲ್ಲ .. ಮೊದಲು ಇದರಲ್ಲಿ ಆಸಕ್ತಿ ವಹಿಸಲು ಸಹಾಯ ಮಾಡಿದವಳು ಶ್ವೇತಾ [ http://amidstthesea.blogspot.com/ ] . ನನ್ನ ಒಂದು ಬ್ಲಾಗ್ ಓಪನ್ ಆಗೋಕೆ ಕಾರನೀಕರ್ತಳು ಅವಳೇ . ಹಾಗೇ ಬಹಳ ದಿನದ ನಂತರ ನನ್ನ ಫ್ರೆಂಡ್ ಒಬ್ಬಳು [ Nannake - telprabu] ಬ್ಲಾಗ್ ನೋಡು ಎಂದು ಲಿಂಕ್ ಕಳುಹಿಸಿದಳು , ನನ್ನ ಬ್ಲಾಗ್ ಇಂಟರೆಸ್ಟ್ ಅಲ್ಲಿಂದ ಪ್ರಾರಂಭವಾಯಿತು . ಅಲ್ಲಿ ಬ್ಲಾಗ್ ಓದುತ್ತ ಓದುತ್ತ : ಇಟ್ಟಿಗೆ ಸಿಮೆಂಟ್ , ಛಾಯ ಕನ್ನಡಿ , ಜಲನಯನ , ಧರಿತ್ರಿ , ಮೌನಗಾಳ ಹೀಗೆ ಹತ್ತು ಹಲವು ಬ್ಲೋಗಗಳ ಪರಿಚಯವಾಯಿತು . ಇಷ್ಟೆಲ್ಲಾ ಆದಮೇಲೆ ಎಲ್ಲರನ್ನು ಒಮ್ಮೆ ನೋಡಬೇಕು ಎಂಬ ಹಂಬಲವಾಗ್ತಾ ಇತ್ತು , ಅದಕ್ಕೆ ಒಳ್ಳೆ ಅವಕಾಶ ಕೂಡಿ ಬಂದಿದ್ದು ಮೊನ್ನೆ ಆದಿತ್ಯವಾರ ಸುಶ್ರುತ ಮತ್ತು ಶ್ರೀನಿಧಿಯ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ .. ಅಂದು , ಶಿವೂ ಸರ್, ಪ್ರಕಾಶಣ್ಣ , ಹರ್ಷ , ಮತ್ತು ಹಲವರ ಭೇಟಿ ಆಯಿತು , ಅದರೊಂದಿಗೆ ಮೆಚ್ಚಿನ ನಿರ್ದೇಶಕರಾದ ನಾಗತಿಹಳ್ಳಿ ಚಂದ್ರಶೇಖರ , ಹಿರಿಯ ಕವಿ HSV Murthy ಹಾಗು ಜೋಗಿ ಯವರನ್ನು ನೋಡುವ ಅವಕಾಶವೂ ನನ್ನದಾಯಿತು .. ಹಾಗೆಯೆ ನನ್ನ ಶಾಲಾ ದಿನದ ಹಿರಿಯ ವಿದ್ಯಾರ್ಥಿಯನ್ನು ಸಹ ಭೇಟಿ ಮಾಡುವ ಸಂದರ್ಭ ಒದಗಿ ಬಂತು ..ಇನ್ನು ಹಲವು ಜನರಿದ್ದರು ಆದರೆ ಪರಿಚಯದ ಅಭಾವದಿಂದ ಹಾಗು ಯಾರು ಪರಿಚಯ ಮಾಡಿಕೊಡುವವರು ಇಲ್ಲದ್ದರಿಂದ ಅವರ ಇರುವಿಕೆಯನ್ನು ಮಾತ್ರ ನೋಡಲು ಸಾದ್ಯವಾಯಿತು , ಮುಂದೊಮ್ಮೆ ಭೇಟಿಯಾಗುವ ಬರವಸೆಯೊಂದಿಗೆ , ಹಾಗು ಸೇರಿದ ಅತಿಥಿಗಳ ಮಾತು ಹಾಗು ನುಡಿಮುತ್ತುಗಳನ್ನ ಮೆಲಕು ಹಾಕುತ್ತ ನನ್ನ pulsar ಅನ್ನು ಏರಿ ಮನೆಕಡೆಗೆ ಹೊರಟೆ.
ಇದೆಲ್ಲ ನಾನು ಬ್ಲಾಗ್ ಲೋಕಕ್ಕೆ ಬಂದಿದ್ದರಿಂದಲೇ ಸಾಕಾರವಾಯಿತು ಅನ್ನುವುದು ನನ್ನ ಅನಿಸಿಕೆ . ಹೇಗೆ ನಿಮ್ಮೆಲ್ಲರ ಸಹಕಾರ ಇದ್ದರೆ ಒಂದು ದಿನ ಉತ್ತಮ ಬರವಣಿಗೆ ಮಾಡಬಹುದು ಅನ್ನುವುದು ನನ್ನ ಆಶಯ . ಎಲ್ಲರಿಗೂ ನನ್ನ ಅಭಿನಂದನೆಗಳು .
ಇದೆಲ್ಲ ನಾನು ಬ್ಲಾಗ್ ಲೋಕಕ್ಕೆ ಬಂದಿದ್ದರಿಂದಲೇ ಸಾಕಾರವಾಯಿತು ಅನ್ನುವುದು ನನ್ನ ಅನಿಸಿಕೆ . ಹೇಗೆ ನಿಮ್ಮೆಲ್ಲರ ಸಹಕಾರ ಇದ್ದರೆ ಒಂದು ದಿನ ಉತ್ತಮ ಬರವಣಿಗೆ ಮಾಡಬಹುದು ಅನ್ನುವುದು ನನ್ನ ಆಶಯ . ಎಲ್ಲರಿಗೂ ನನ್ನ ಅಭಿನಂದನೆಗಳು .
Subscribe to:
Posts (Atom)