Tuesday, November 25, 2008

ಬರೆಯಬೇಕೆಂದರು ಬರಯಲಾಗುತ್ತಿಲ್ಲ

ಹಲವು ದಿನದಿಂದ ಒಂದು ಬ್ಲಾಗ್ ಬರೆಯೋಣ ಅಂತ ಆಲೋಚಿಸ್ತಾ ಇದ್ದೆ , ಎಷ್ಟು ಕುಳಿತು ಆಲೋಚಿಸಿದರು ಏನು ಬರೆಯಲಿ ಅಂತ ಗೊತ್ತಾಗ್ತಾನೆ ಇಲ್ಲ .. ಏನೋ ಸುಮ್ನೆ ಗೀಚೋಣ ಅಂತ ಮನಸು ಬಂದ್ರು , ಸ್ವಲ್ಪ ಅರ್ತ ಬದ್ಧವಾದ ವಿಷಯ ಹೇಳ್ಬೇಕು ಅಂತ ಅನಿಸುತ್ತೆ .. ನಾನು ಕಾಲೇಜ್ ಡೇಸ್ ನಲ್ಲಿ ಗೀಚಿದ ಒಂದು ಕವನದ ಸಾಲು ನೆನಪಾಯ್ತು ಅದನ್ನೇ ಹಿಡಿದು ಮತ್ತೊಂದು ಕವನ ಮಾಡುತ್ತೇನೆ ..



ಬರೆಯಬೇಕೆಂದು ಕುಳಿತಿದ್ದೇನೆ ,
ಬರೆದುದಕಿಂತ ಹರಿದದ್ದೇ ಹೆಚ್ಚು,
ಆದರು ಬೆರೆಯುತ್ತೇನೆ .. ಕವನ ಗೀಚುತ್ತೇನೆ ..
ಹೌದು ಬರೆಯುವುದಾದರೂ ಏನನ್ನು ..
ಪ್ರೀತಿ ಪ್ರಣಯ ವಿಷಯ ಬಹಳ ಹಳತು ,
ವಿಚಿತ್ರ ರಾಜಕೀಯ ನನಗಾಗದು .
ಆದರು ಬರೆಯಬೇಕು , ಏನಾದರು ಬರೆಯಬೇಕು ..
ಪ್ರಗತಿ ಪಥದಲಿ ಸಾಗುತಿರುವ ದೇಶಕೆ ಬೆನ್ನೆಲಬಾಗಬೇಕು ,
ಅರೆ ಎಲ್ಲಿ ಸಾಗುತಿದೆ ಬರಹ ..
ನಾನಂದು ಕೊಂಡಿದ್ದೆ ಬೇರೆ ಬರೆದದ್ದೇ ಬೇರೆ ..
ಇದೆ ಅಲ್ಲವೇ ಜೀವನ ..
ಮಾಡಬೇಕೆಂದಿರುವುದು ಏನೋ .. ಆದರೆ ಮಾಡಿರುವುದು, ಮಾಡುತ್ತಿರುವುದು ಇನ್ನೇನೋ ..
ದೋಣಿ ಸಾಗಲಿ ಮುಂದೆ ಹೋಗಲಿ ಎಂದು ನಡೆವುದು ..
ಆದದ್ದೆಲ್ಲ ಒಳಿತೆ ಎಂದು ಅರಿತು ಸಾಗುವುದು ...





7 comments:

shivu.k said...

ಶ್ರೀಧರ್ ಸರ್,

ಬರೆದ ಕವನ ಅರ್ಥಪೂರ್ಣವಾಗಿದೆ...ನಿಮ್ಮ ಅನುಭವ ಪ್ರತಿಯೊಬ್ಬರಿಗೂ ಆಗುವಂತದ್ದೆ. ನಾನು ಕವನ ಬರೆಯಲು ಹೋಗಿ ಏನು ಬರೆಯುವುದು ಅನ್ನೊ ಚಿಂತೆಯಲ್ಲಿ ಅದೇ ವಿಚಾರವಾಗಿ ಬರೆದಿದ್ದೆ.

ಬರೆಯಬೇಕೆಂದು ಕುಳಿತಿದ್ದೇನೆ ,
ಬರೆದುದಕಿಂತ ಹರಿದದ್ದೇ ಹೆಚ್ಚು,

ಈ ಸಾಲುಗಳು ಸರಳವಾಗಿದ್ದರೂ ಪಂಚಿಂಗ್ ಆಗಿವೆ...
ಬಿಡುವಾದಾಗ ನನ್ನ ಬ್ಲಾಗಿಗೂ ಬನ್ನಿ...

http://chaayakannadi.blogspot.com/

ಶಿವು.ಕೆ ARPS.

Ittigecement said...

ಶ್ರೀಧರ್...

ಕವನ ಚೆನ್ನಾಗಿ ಬಂದಿದೆ....

ಪದಗಳಲ್ಲಿ ಹಿಡಿತ ಬರಬೇಕು...
ಇನ್ನಷ್ಟು ಓದಿ...
ಬರೆಯಿರಿ...

ನಿಮ್ಮ ಬರೆಯುವ ಉತ್ಸಾಹ ಕಂಡು ಖುಷಿಯಾಗುತ್ತದೆ...

ಇನ್ನಷ್ಟು ಕವನ
ಲೇಖನ
ಬರಲಿ..
ಓದಲು ನಾವಿದ್ದೇವೆ...

ಶುಭ ಹಾರೈಕೆಗಳು...

shridhar said...

shivu sir hagu Prakash Sir,

Halavu karanagalinda nimma commentsge pratikriyasalu agalilla . Modalige kshame irali.

Nanna Blogige modalu band vyaktigalu neevu. Nanna modal prayatnakke bennu tattiddiri, dhanyavadaglu . Nimma protsaha endigu agatya.

Innu munde kayam agi bareyabekendu kondiddene .. adari kelavomme samay honidsalu aguttilla..

Mattomme dhanyavadagalu.

Thanks,
shridhar Bhat

ಧರಿತ್ರಿ said...

ನನ್ನದೇ ಕಥೆನಾ ನಿಮ್ದು?
ಇರಲಿ,,ಬರೆಯಬೇಕನಿಸುತ್ತೆ ಅಂತ ಸುಂದರ ಕವನ ಬರೆದ್ರಲ್ಲಾ...
ಬರೆದದಕ್ಕಿಂತ ಹರಿದದ್ದೇ ಹೆಚ್ಚು..ಪರ್ವಾಗಿಲ್ಲ ಸರ್..
ಕಾರಂತರು ಹೇಳಿದ್ದು ಹಿಂಗೇ : ಬರೀ, ಹರಿ!
ಬರೆದು ಹರಿತಾ ಇದ್ರೆ ಬರಕ್ಕೊಂದು 'ಹರಿತ' ಬರುತ್ತೆ.
ನೀವು ಮಾಡಿದ್ರಲ್ಲಿ ತಪ್ಪಿಲ್ಲ..ನೋಡಿ ನೀವು ಎಷ್ಟು ಚೆನ್ನಾಗ್ ಬರೆತೀರಿ ಅಂತ.
ಮಳೆನಾಡು-ಕರಾವಳಿಯಲ್ಲಿ ಜೋರು ಮಳೆ..ಕವನ ಬರೀರಿ ಸರ್ ಅದ್ರ ಬಗ್ಗೆ!!!
ಶುಭವಾಗಲೀ..
-ಧರಿತ್ರಿ

ಜಲನಯನ said...

ಶ್ರೀಧರ್ ನೋಡಿದಿರಾ...ಹೇಗೆ..ತಾನಾಗೇ..ಬಿಚ್ಚಿಕೊಳ್ತೋ ಸುರುಳಿ..ಹುಚ್ಚು ಸುರುಳಿ..ಇದರಲ್ಲಿ ಸಿಲುಕಿಕೊಳ್ಳುವುದೆಂದರೆ ನನಗೇ ಒಂಥರಾ ಆನಂದ..ನಿಮಗೂ ಆ ಆನಂದದ ಅನುಭವ ಈಗ ಆಗುತ್ತಿರಬೇಕು.. Good Luck and Welcome to Kavibalaga....ಯುವಕವಿಗೆ ಯಾಕೆ ಸೇರ್ಕೋಬಾರದು ನೀವು...??

shridhar said...

Dhariti yavare nanna blogage swagata . Nimma pratikriyege dhanyavadagalu .. hmm nimma slahe mele ondu kavanavanni geechuttene

shridhar said...

Jalanayana Sir,
Nimam kavanagale namagella spoorthy .. Yuvakavige avashyavagi seruve.. Nimam Pratikriyege dhanyavadagalu.