ಹಲವು ದಿನದಿಂದ ಒಂದು ಬ್ಲಾಗ್ ಬರೆಯೋಣ ಅಂತ ಆಲೋಚಿಸ್ತಾ ಇದ್ದೆ , ಎಷ್ಟು ಕುಳಿತು ಆಲೋಚಿಸಿದರು ಏನು ಬರೆಯಲಿ ಅಂತ ಗೊತ್ತಾಗ್ತಾನೆ ಇಲ್ಲ .. ಏನೋ ಸುಮ್ನೆ ಗೀಚೋಣ ಅಂತ ಮನಸು ಬಂದ್ರು , ಸ್ವಲ್ಪ ಅರ್ತ ಬದ್ಧವಾದ ವಿಷಯ ಹೇಳ್ಬೇಕು ಅಂತ ಅನಿಸುತ್ತೆ .. ನಾನು ಕಾಲೇಜ್ ಡೇಸ್ ನಲ್ಲಿ ಗೀಚಿದ ಒಂದು ಕವನದ ಸಾಲು ನೆನಪಾಯ್ತು ಅದನ್ನೇ ಹಿಡಿದು ಮತ್ತೊಂದು ಕವನ ಮಾಡುತ್ತೇನೆ ..
ಬರೆಯಬೇಕೆಂದು ಕುಳಿತಿದ್ದೇನೆ ,
ಬರೆದುದಕಿಂತ ಹರಿದದ್ದೇ ಹೆಚ್ಚು,
ಆದರು ಬೆರೆಯುತ್ತೇನೆ .. ಕವನ ಗೀಚುತ್ತೇನೆ ..
ಹೌದು ಬರೆಯುವುದಾದರೂ ಏನನ್ನು ..
ಪ್ರೀತಿ ಪ್ರಣಯ ವಿಷಯ ಬಹಳ ಹಳತು ,
ವಿಚಿತ್ರ ರಾಜಕೀಯ ನನಗಾಗದು .
ಆದರು ಬರೆಯಬೇಕು , ಏನಾದರು ಬರೆಯಬೇಕು ..
ಪ್ರಗತಿ ಪಥದಲಿ ಸಾಗುತಿರುವ ದೇಶಕೆ ಬೆನ್ನೆಲಬಾಗಬೇಕು ,
ಅರೆ ಎಲ್ಲಿ ಸಾಗುತಿದೆ ಬರಹ ..
ನಾನಂದು ಕೊಂಡಿದ್ದೆ ಬೇರೆ ಬರೆದದ್ದೇ ಬೇರೆ ..
ಇದೆ ಅಲ್ಲವೇ ಜೀವನ ..
ಮಾಡಬೇಕೆಂದಿರುವುದು ಏನೋ .. ಆದರೆ ಮಾಡಿರುವುದು, ಮಾಡುತ್ತಿರುವುದು ಇನ್ನೇನೋ ..
ದೋಣಿ ಸಾಗಲಿ ಮುಂದೆ ಹೋಗಲಿ ಎಂದು ನಡೆವುದು ..
ಆದದ್ದೆಲ್ಲ ಒಳಿತೆ ಎಂದು ಅರಿತು ಸಾಗುವುದು ...